ನ್ಯಾನೋ ಯೂರಿಯಾ ಮತ್ತು DAP ಬಳಕೆ ಕ್ರಮ ಮತ್ತು ಪ್ರತಿಫಲ.

ನ್ಯಾನೋ ಯೂರಿಯಾ ಮತ್ತು DAP ಬಳಕೆ ಕ್ರಮ ಮತ್ತು ಪ್ರತಿಫಲ.

ಇತ್ತೀಚೆಗೆ ಮಾರುಕಟ್ಟೆಗೆ ಬಂದ ನ್ಯಾನೋ ಯೂರಿಯಾ ಮತ್ತು DAP ದ್ರವ ಗೊಬ್ಬರಗಳನ್ನು ಹೇಗೆ ಬಳಕೆ ಮಾಡುವುದು, ಇದರಿಂದ ಏನು ಪ್ರತಿಫಲ ಇದೆ ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಗೊಬ್ಬರಗಳು ಎಂದರೆ ನಮ್ಮ ಸಾಂಪ್ರದಾಯಿಕ ಗೊಬ್ಬರಗಳಿಗಿಂತ ಗಾತ್ರದಲ್ಲಿ (size) ಮತ್ತು ಆಕಾರದಲ್ಲಿ (Shape)  ಸಂಸ್ಲೇಶಣೆ (synthesize) ನಡೆಸಿ ತಯಾರಿಸಲಾದ ಗೊಬ್ಬರಗಳು. ಇದರ ಸಾರಾಂಶಗಳು ನೇರವಾಗಿ (Shortcut way ) ತಲುಪಬೇಕಾದ ಸಸ್ಯಾಂಗಕ್ಕೆ ಲಭ್ಯವಾಗಿ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು SMART FERTILIZER ಎಂಬುದಾಗಿಯೂ ಕರೆಯಲಾಗುತ್ತದೆ. ಇದನ್ನು ವಿಶೇಷ ರೀತಿಯಲ್ಲಿ ತಯಾರು ಮಾಡಲಾಗುತ್ತದೆ.

ಕೃಷಿಯಲ್ಲಿ ನಾವು ಬಳಕೆ ಮಾಡುವ ಸಾಂಪ್ರದಾಯಿಕ ಗೊಬ್ಬರಗಳಾದ  ಸಾರಜನಕ ಮೂಲದ ಯೂರಿಯಾ, ರಂಜಕ ಮೂಲದ DAP ಹಾಗೆಯೇ ಪೊಟ್ಯಾಶ್ ಮೂಲದ ಮ್ಯುರೇಟ್ ಆಫ್ ಪೊಟ್ಯಾಶ್ ಇವುಗಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತವೆ. ಇವುಗಳ ಪ್ರಾಮುಖ್ಯ ಲೋಪ ದೋಷ ಎಂದರೆ ಆವಿಯಾಗುವುದು, ಲಭ್ಯವಾಗದೆ ಇರುವುದು ಮತ್ತು ಇಳಿದು ಹೋಗುವುದು. ಈ  ಕಾರಣಗಳಿಂದಾಗಿ ಅವು ಬೆಳೆಗಳಿಗೆ ಸಮರ್ಪಕವಾಗಿ ಸಿಗುವುದಿಲ್ಲ.   ನೀರು ಹೆಚ್ಚಾದರೆ  ಇದು ಇಳಿದು ಹೋಗುತ್ತದೆ. ನೀರು ಸಿಗದಿದ್ದರೆ ಆವಿಯಾಗುತ್ತದೆ. ಇಳಿದು ಹೋದರೆ ಅಂತರ್ಜಲವನ್ನು ಸೇರುತ್ತದೆ.  ಅಂತರ್ಜಲ ಕಲುಷಿತವಾಗುತ್ತದೆ. NPK ಗಳಲ್ಲಿ ಒಂದು ಸಮರ್ಪಕವಾಗಿ ದೊರೆತು ಮತ್ತೊದು ಸಿಗದೆ ಇದ್ದರೆ ಆಗ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಸಸ್ಯಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದಲ್ಲದೆ ಈ ಗೊಬ್ಬರಗಳು ಅಧಿಕ ಪ್ರಮಾಣದಲ್ಲಿ ಬಳಸಬೇಕಾಗುವುದರಿಂದ ಸಾಗಾಣಿಕೆ ಕಷ್ಟವಾಗಬಹುದು. ಸಮರ್ಪಕವಾಗಿ ಶೇಖರಣೆ ಮಾಡದಿದ್ದರೆ  ಅದರ ಪೊಷಕಾಂಶ ನಶ್ಟವಾಗುವುದೂ ಇದೆ.  ಈ ಎಲ್ಲಾ  ರೈತರಿಗೆ ಆಗುವ ನಷ್ಟ ಮತ್ತು ಪರಿಸರಕ್ಕೆ ಆಗುವ ನಷ್ಟವನ್ನು  ಮಿತಿಗೊಳಿಸುವುದಕ್ಕೋಸ್ಕರ ನ್ಯಾನೋ ತಂತ್ರಜ್ಞಾನದಲ್ಲಿ ಗೊಬ್ಬರಗಳನ್ನು ತಯಾರಿಸಬಹುದು ಎಂಬುದನ್ನು ಕೃಷಿ ರಸಾಯನ ಶಾಸ್ತ್ರಜ್ಞರು  ಕಂಡುಕೊಂಡರು ಇದರ ಪ್ರತಿಫಲವೇ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ದ್ರವ ರೂಪದ ನ್ಯಾನೋ ಗೊಬ್ಬರಗಳು.

ಇದು ನಮ್ಮ ದೇಶದ ತಂತ್ರಜ್ಞಾನ:

 • ರಾಜಸ್ತಾನದ, ಜೋಧ್ ಪುರ್ ನ  ಒಂದು ಹಳ್ಳಿಯ ರೈತನ ಮಗ ರಮೇಶ್ ರಾಲ್ಯ (Ramesh Raliya) ಎಂಬ ಎಳೆ ವಯಸ್ಸಿನ ಯುವಕ ರಸಾಯನ ವಿಜ್ಞಾನವನ್ನು ಅಧ್ಯಯನ ಮಾಡಿ ಕಂಡು ಹಿಡಿದ ತಂತ್ತ್ರಜ್ಞಾನವೇ ನ್ಯಾನೋ ಯೂರಿಯಾ ಎಂಬ  ತಯಾರಿಕೆ.
 • ಇದು ಪ್ರಪಂಚದಲ್ಲೇ ಮೊದಲನೆಯದ್ದು.
 • ಈ ತಯಾರಿಕೆಯಿಂದ ರೈತಾಪಿ ವರ್ಗಕ್ಕೆ ಬಹುಕೋಟಿಯ ಉಪಕಾರ ಹಾಗೂ ದೇಶದ ಖಜಾನೆಗೆ ಕೋಟ್ಯಾಂತರ ಮೊತ್ತದ ವಿದೇಶೀ ವಿನಿಮಯದ ಉಳಿತಾಯ ಹಾಗೆಯೇ ಪರಿಸರಕ್ಕೆ ಲೆಕ್ಕಹಾಕಲಾಗದ ಲಾಭ ತಂದುಕೊಟ್ಟಿದೆ.

ಏನಿದು ನ್ಯಾನೋ:

 • ನ್ಯಾನೋ ಎಂದರೆ ಅತೀ ಸಣ್ಣದು  ಅಥವಾ ಸೂಕ್ಷ್ಮ ಎಂದರ್ಥ.
 • ಯಾವುದು ಬರಿಕಣ್ಣಿಗೆ ಕಾಣದಿರುತ್ತದೆ, ಅದನ್ನು ಮೈಕ್ರೋಸ್ಕೋಪ್ ಮೂಲಕವೇ ನೋಡಬೇಕೋ ಅದನ್ನು ನ್ಯಾನೋ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
 • ನಾವು ಬಳಕೆ ಮಾಡುವ NPK ಗೊಬ್ಬರಗಳು ದೊಡ್ಡ ಗೊಬ್ಬರಗಳು BULK ಅಥವಾ ಪ್ರಮಾಣದಲ್ಲಿ ಹೆಚ್ಚಿನವು.
 • ಇವುಗಳ ಸಮರ್ಪಕ ಬಳಕೆ ಕೃಷಿಕರಿಗೆ ತುಂಬಾ ಕಷ್ಟದಾಯಕ.
 • ಇದರ ಬಳಕೆಯಿಂದ 27-40% ತನಕ ನಶ್ಟವಾಗುತ್ತದೆ.
 • ಇದು  ಮಣ್ಣಿಗೆ , ನೀರಿಗೆ ಸೇರಿ ಅಲ್ಲಿ Eutrophication (ಅಮೋನಿಯಾ ಅಂಶ)  ಉಂಟಾಗಿ ಅದರ ಸ್ವಚ್ಚತೆಗೂ ನಾವು ವ್ಯಯ ಮಾಡಬೇಕಾಗುತ್ತದೆ.
 • ಕೆಲವು ದ್ವಿದಳ ಸಸ್ಯಗಳ ಬೇರಿನ ಸನಿಹದಲ್ಲಿ ಶಿಲೀಂದ್ರಗಳು ವಾತಾವರಣದ ಪೊಷಕವನ್ನು ಹೀರಿಕೊಡುವ ಕೆಲಸ ಮಾಡುತ್ತವೆ.
 • ಇದು ನೈಸರ್ಗಿಕ ಕ್ರಿಯೆಯಾಗಿದ್ದು, ಇದೇ ತತ್ವದಲ್ಲಿ  ನ್ಯಾನೋ ಗೊಬ್ಬರಗಳನ್ನು ತಯಾರಿಸಲಾಗುತ್ತದೆ.
 • ಪ್ರಪಂಚದಲ್ಲೇ ಮೊದಲ ಬಾರಿಗೆ ನ್ಯಾನೋ ಗೊಬ್ಬರವಾದ ನ್ಯಾನೋ ಯೂರಿಯಾವನ್ನು ಉತ್ಪಾದಿಸಿದವರು ಇಂಡಿಯನ್ ಫಾರ್ಮರ್ಸ್  ಫ಼ರ್ಟಿಲೈಸರ್ ಕೊ ಆಪರೇಟಿವ್ IFFCO ಸಂಸ್ಥೆ. ಇವರು ಇದನ್ನು ಆಮೇರಿಕಾ ದೇಶಕ್ಕೂ ರಫ್ತು ಮಾಡುತ್ತಾರೆ.
 • ಈಗ ಕೋರಮಂಡಲ ಫರ್ಟಿಲೈಸರ್ಸ್ ಇವರೂ  ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ನ್ಯಾನೋ ಗೊಬ್ಬರ ಬಳಕೆ ವಿಧಾನ ಹೇಗೆ?

 • ನ್ಯಾನೋ ದ್ರವರೂಪದ ಗೊಬ್ಬರವನ್ನು  ಅದರಲ್ಲೂ ಯೂರಿಯಾ ಅಥವಾ DAP ಯನ್ನು  ಬಳಸುವುದು ನಮ್ಮ ಸಾಂಪ್ರದಾಯಿಕ ಗೊಬ್ಬರಗಳಂತೆ ಅಲ್ಲ.
 • ನಾವು ಬಳಸುವ ಯೂರಿಯಾ ಹರಳಿಗಿಂತ NANO ಯೂರಿಯಾವು 10,000 ಪಟ್ಟು ಸಣ್ಣದಾಗಿರುತ್ತದೆ.
 • ಹಾಗೆಯೇ ಒಂದು ಎಂ ಎಲ್ ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯೂರಿಯಾ ಪಾರ್ಟಿಕಲ್ಸ್ ಒಳಗೊಂಡಿರುತ್ತದೆ.
 • ಈ ಯೂರಿಯಾ ಗೊಬ್ಬರವನ್ನು ಕೇವಲ ಎಲೆಗಳಿಗೆ ಪತ್ರ ಸಿಂಚನಕ್ಕೆ ಮಾತ್ರ ಬಳಕೆ ಮಾಡಬಹುದು. 
 • ಇದು ಮಣ್ಣಿಗೆ ಕೊಟ್ಟು  ಬೇರಿನ ಮೂಲಕ ಸಸ್ಯಗಳಿಗೆ ತಲುಪಿಸುವ ಗೊಬ್ಬರ ಅಲ್ಲ.
 • ಒಂದು ಎಕ್ರೆಗೆ 250-500 ಮಿಲಿ ನ್ಯಾನೋ ಯೂರಿಯಾವನ್ನು   ಬಳಸಲು ಶಿಫಾರಸು ಇದೆ.
 • ಒಂದು ಲೀ. ನೀರಿಗೆ  ಬೆಳೆಗಳನ್ನು ಅವಲಂಭಿಸಿ  2-4 ಮಿಲಿ  NANO ಯೂರಿಯಾ ಬೆರೆಸಬೇಕು.
 • ಇದನ್ನು ಬೆಳಗ್ಗೆ 11 ಗಂಟೆಗೆ ಮುಂಚೆ ಅಥವಾ ಸಂಜೆ 4 ಗಂಟೆಯ ನಂತರ ಎಲೆಗಳ ಅಡಿ ಭಾಗಕ್ಕೆ ಸಿಂಪಡಿಸಬೇಕು.
 • ಎಲೆಯ ಅಡಿ ಭಾಗದಲ್ಲಿ ಸ್ಟೊಮಾಟಾ ಎಂಬ ಹೀರಿಕೊಳ್ಳುವ ಕೋಶಗಳಿದ್ದು, ಅಲ್ಲಿಗೆ ನೇರವಾಗಿ ಈ ಪೋಷಕ ಲಭ್ಯವಾಗುತ್ತದೆ.
 • ಬಳಕೆ ಮಾಡಿದ 48 ಗಂಟೆಯ ಒಳಗಾಗಿ ಇದರ ಫಲಿತಾಂಶ ಕಂಡು ಬರುತ್ತದೆ.
 • ಇಬ್ಬನಿ ತರಹ ಬೀಳುವ ಸ್ಪ್ರೇಯರ್ ನಲ್ಲಿ ಸಿಂಪಡಿಸಬೇಕು.
ನ್ಯಾನೋ ಯೂರಿಯಾ
ಯೂರಿಯಾ

ನ್ಯಾನೋ DAP ಬಳಕೆ ಹೇಗೆ:

 • NANO ಡಿ ಎ ಪಿ ಯನ್ನೂ ಸಹ ಪತ್ರ ಸಿಂಚನ (FOLIER SPRAY) ಗೆ ಬಳಕೆ ಮಾಡಬೇಕು.
 • ಇದರಲ್ಲಿ ಸಾರಜನಕ N 8%ಮತ್ತು  ರಂಜಕ P 16%  ಇರುತ್ತದೆ.
 • ನಮ್ಮ ದೇಶದಲ್ಲಿರುವ NANO DAP 10-30 ನ್ಯಾನೋಮೀಟರುಗಳಷ್ಟು ಇರುತ್ತದೆ.
 • ಇದನ್ನು ಎಲೆಗಳಿಗೆ ಸಿಂಪಡಿಸಿದಾಗ ಅದರಲ್ಲಿ ಪತ್ರ ಹರಿತ್ತಿನ ಅಂಶ ಹೆಚ್ಚಳವಾಗಿ ದ್ಯುತಿಸಂಸ್ಲೇಶಣ ಕ್ರಿಯೆ ಉತ್ತಮವಾಗುತ್ತದೆ.
 • ಈ ಕ್ರಿಯೆಗೆ ರಂಜಕ ಸಹಕಾರಿಯಾಗುತ್ತದೆ. ಇದನ್ನು ಎಲೆಯ ಮೇಲೆ ಸಿಂಪಡಿಸಿದಾಗ ಅದು ಸ್ಟೊಮಟೋ STOMOTA ಮೂಲಕ ಸಸ್ಯಕ್ಕೆ ಲಭ್ಯವಾಗುತ್ತದೆ.
 • ಜೀವ ಕೋಶದ ಒಳಗೆ ಪ್ರವೇಶಿಸಿದ ರಂಜಕವು ನಿಧಾನವಾಗಿ ಬಿಡುಗಡೆಗೊಳ್ಳುತ್ತಿರುತ್ತದೆ.
 • ದ್ಯುತಿಸಂಸ್ಲೇಶಣೆ ಕ್ರಿಯೆಗೆ  ಅನುಕೂಲವಾಗಲು ಪತ್ರಹರಿತ್ತಿನಲ್ಲಿ ಬೇಕಾದಷ್ಟು ರಂಜಕದ ಅಂಶ ಇರುವಂತೆ ನೋಡಿಕೊಳ್ಳುತ್ತದೆ.
 • ಇದನ್ನು ಸಿಂಪಡಿಸುವುದರಿಂದ ಹೂವಿನ ಉತ್ಪಾದನೆ ಹೆಚ್ಚುತ್ತದೆ ಮತ್ತು  ಹೆಚ್ಚು ಫಸಲು ಸಿಗುತ್ತದೆ.
 • ಒಂದು ಎಕ್ರೆಗೆ  500 ಎಂ ಎಲ್ DAP ಯನ್ನು 1 ಲೀ. ನೀರಿಗೆ 3-5 ಎಂ ಎಲ್ ಬಳಸಬೇಕು.  
 • ಭತ್ತ ಧವಸ ಧಾನ್ಯ ಉಂತಾದ ಬೆಳೆಗಳಿಗೆ ಬೀಜೋಪಚಾರಕ್ಕೂ ಬಳಕೆ ಮಾಡಬಹುದು.
 • ನೆಲದಲ್ಲಿ ರಂಜಕ ಚಲನೆ ಹೊಂದಿರುವುದಿಲ್ಲವಾದ ಕಾರಣ ಸಿಗುವುದು ಹೆಚ್ಚು ಕಡಿಮೆ ಆಗುತ್ತದೆ. ಇಲ್ಲಿ ಆ ಸಮಸ್ಯೆ ಬರುವುದಿಲ್ಲ.

ಯಾವ ಹಂತದಲ್ಲಿ ಬಳಕೆ ಮಾಡಬೇಕು?

 • NANO ಗೊಬ್ಬರವನ್ನು ಬೆಳೆಗಳಿಗೆ ಗೊಬ್ಬರ ತೃಷೆ ಹೆಚ್ಚು ಇರುವ ಸಮಯ ಹೂ ಬಿಡುವ ಸಮಯ ಹಾಗೂ ಸಸ್ಯ ಬೆಳವಣಿಗೆಯ ಸಮಯದಲ್ಲಿ  critical growth  2 ಬಾರಿ ಬಳಕೆ ಮಾಡಬಹುದು.
 • ಕೆಲವೊಮ್ಮೆ ಸಸ್ಯಗಳ ಬೆಳವಣಿಗೆ ಅದರಲ್ಲೂ ಹಸುರು ಬೆಳವಣಿಗೆ vegetative growth ತೃಪ್ತಿದಾಯಕವೆಂದು ಕಂಡುಬಾರದಿದ್ದರೆ ಅಂತಹ ಸಮಯದಲ್ಲಿ ಇದನ್ನು ಸಿಂಪಡಿಸಿ ಅದನ್ನು ಸರಿಪಡಿಸಬಹುದು.
 • ಇದನ್ನು ಸಿಂಪಡಿಸುವುದರಿಂದ ಸಸ್ಯಕ್ಕೆ 50% ದಷ್ಟು ರಂಜಕದ ಅವಷ್ಯಕತೆಯನ್ನು ನೀಗಿಸಬಹುದು ಎನ್ನುತ್ತಾರೆ.
 • ಇದು ರಂಜಕ ಮತ್ತು ಸಾರಜನಕದ ಯಾವುದಾದರೂ ಕೊರತೆಗಳಿದ್ದರೆ ಅದನ್ನು  corrects the N & P  deficiencies in standing crops) ಸರಿಪಡಿಸುತ್ತದೆ. 
 • ಇದರ ಫಲಿತಾಂಶ  ಸಮರ್ಪಕವಾಗಿ ಸಿಂಪಡಿಸಿದಾಗ 90%ದಶ್ಟು ಇರುತ್ತದೆ.
 • NANO DAP ಆಗಲಿ ಯೂರಿಯಾ ಅಗಲಿ ಡ್ರಿಪ್ ಮತ್ತು ಮಣ್ಣಿಗೆ ಸೇರ್ಪಡೆ ಮಾಡುವಂತಿಲ್ಲ.

ನ್ಯಾನೋ ಯೂರಿಯಾ ಮತ್ತು NANO DAP ಎರಡನ್ನೂ ಮಿಶ್ರಣ ಮಾಡಿ ಎರಡನ್ನು ಶಿಫಾರಿತ ಪ್ರಮಾಣದಷ್ಟು ಸೇರಿಸಿ ಸಿಂಪರಣೆ ಮಾಡಬಹುದು. ಹಲಾವ್ರು ಬಗೆಯ ನೀರಿನಲ್ಲಿ ಕರಗುವ (Water soluble fertilizers) ಗೊಬ್ಬರ ಕೀಟನಾಶಕ ಮತ್ತು ರೋಗನಾಶಕವನ್ನು ಮಿಶ್ರಣ ಮಾಡಬಹುದು.

ಮಾಮೂಲಿ ಗೊಬ್ಬರದ ಬಳಕೆ ಬೇಡವೇ?

 • ಮಾಮೂಲಿನಂತೆ ನಾವು ಮಣ್ಣಿಗೆ ಸೇರಿಸುವ ಗೊಬ್ಬರಗಳನ್ನು ಕೊಡುವುದು ಅಗತ್ಯ.
 • ಈ ಗೊಬ್ಬರಗಳನ್ನು ಯಥಾ ಪ್ರಕಾರ  ಬಳಸಬೇಕು. ಸಾವಯವ ಗೊಬ್ಬರಗಳ ಪೂರೈಕೆ ಚೆನ್ನಾಗಿದ್ದರೆ ಸ್ವಲ್ಪ ಪ್ರಮಾಣವನ್ನು ಕಡಿಮೆಮಾಡಬಹುದು.
 • ಇದು ಸುರಕ್ಷಿತವಾದರೂ ಬಳಸುವಾಗ ಜಾಗರೂಕತೆ ವಹಿಸಬೇಕು.
 • ಯಾವುದೇ ಗೊಬ್ಬರಗಳನ್ನು ಅಧಿಕ ಬಿಸಿಲು, ಇರುವಲ್ಲಿ ದಾಸ್ತಾನು ಇಡಬಾರದು.
 • ಹಾಗೆಯೇ ಇದನ್ನೂ ಸಹ ತಂಪಾದ ವಾತಾವರಣದಲ್ಲಿ ( ಬಾಟಲಿಯಲ್ಲಿ ತುಂಬಿದ್ದರೂ) ಇಡಬೇಕು.
 • ಕೆಲವು ಕೀಟನಾಶಕ ಮತ್ತು ಜೈವಿಕ ಬೆಳೆ ಪ್ರಚೋದಕಗಳನ್ನೂ ಒಟ್ಟಿಗೆ ಸೇರಿಸಬಹುದು. 
 • ಇದನ್ನು 1 ವರ್ಷದ ತನಕ ದಾಸ್ತಾನು ಇಡಬಹುದು.
 • ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಸಸ್ಯಕ್ಕೆ ತೊಂದರೆ ಮತ್ತು ಬೆಳೆಉಳಿಕೆಯನ್ನು ತಿಂದ ಹಸು ಇತ್ಯಾದಿಗಳಿಗೂ ಸಮಸ್ಯೆ ಉಂಟಾಗಬಹುದು.

ಎಲೆ ಚುಕ್ಕೆ ರೋಗ, ಮೈಟ್ ಹಾವಳಿ, ಹಾಗೂ ಇನ್ನಿತರ ಸಮಸ್ಯೆಗಳಿಂದ  ಒಮ್ಮೆ ಸೊರಗಿದ ಮರ / ಗಿಡಗಳನ್ನು ಚೈತನ್ಯದಾಯಕವನ್ನಾಗಿಸ್ದಲು ಇದರ ಸ್ಪ್ರೇ ಸಹಕಾರಿಯಾಗಬಹುದು. ಯಾವಾಗಲೂ ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಸಿಂಪಡಿಸಬೇಡಿ.ಡ್ರೋನ್ ಸ್ಪ್ರೇ ಅಥವಾ ಇನ್ಯಾವುದಾದರೂ  ಉತ್ತಮ ಸ್ಪ್ರೇಯರ್ ಬಳಸಿ ವ್ಯಯ ಮಾಡಬೇಡಿ.

Leave a Reply

Your email address will not be published. Required fields are marked *

error: Content is protected !!