ಒಂದೆಲಗಕ್ಕೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

by | Oct 12, 2022 | Health (ಆರೋಗ್ಯ), Medicinal Plant (ಔಷಧಿಯ ಸಸ್ಯ) | 0 comments

ಒಂದೆಲಗ ಇನ್ನೊಂದು ದಿನ ಕಾಣುವುದಕ್ಕೇ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ. ಈಗ ಹಿಂದಿನಂತೆ ಇದು ಕಾಣಸಿಗುತ್ತಿಲ್ಲ. ಬೆಳೆಸಿ ಉಳಿಸದಿದ್ದರೆ ಇನ್ನು ಕೆಲವೇ ವರ್ಷ . ಕಳೆ ನಾಶಕಗಳು, ಮಣ್ಣು ಅಗೆಯುವ ಯಂತ್ರಗಳು ಇದನ್ನು  ಬಲಿ ತೆಗೆದುಕೊಂಡಾವು. ಇದು ಇಂದಿನ ಅತೀ ದೊಡ್ಡ ಸಮಸ್ಯೆಯಾದ  ಬೊಜ್ಜು ಕರಗಳು ಉತ್ತಮ ಔಷಧಿ. ಜೊತೆಗೆ  ಬೇಡಿಕೆ.

 • ಒಂದೆಲಗ  ಒಂದು ಅತ್ಯುತ್ತಮ ಮೂಲಿಕಾ ಸಸ್ಯ. ಇದು ಎಲ್ಲರ ಹೊಲಗಳಲ್ಲಿ ಕಂಡು ಬರುವ ಒಂದು ನೆಲದಲ್ಲಿ ಹಬ್ಬಿ ಬೆಳೆಯುವ  ಬಳ್ಳಿ ಸಸ್ಯ.
 • ಇದರ ವೈಜ್ಞಾನಿಕ ಹೆಸರು Indian pennywort, Centella asiatica.
 • ಇದನ್ನು ಸರಸ್ವತಿ ಸೊಪ್ಪು ಇಲಿಕಿವಿ, ಬ್ರಾಹ್ಮೀಸೊಪ್ಪು, ಮಂಡೂಕ ಪರ್ಣಿ, ಗದ್ದೆ ವರಗ ಎಂದೆಲ್ಲಾ ಹೆಸರುಗಳಿಂದ ಕರೆಯುತ್ತಾರೆ.
 • ಪ್ರತೀ ಗಂಟಿನಲ್ಲೂ ಬೇರು ಬೆಳೆದು ನೆಲಕ್ಕೆ ಊರಿಕೊಳ್ಳುತ್ತದೆ.
 • ಎಲೆ ಮೂತ್ರಕೋಶದಾಕಾರ. ಹೂವು ಬಿಡುತ್ತದೆ. ಹೂವಿಗೆ ತೊಟ್ಟು ಇರುವುದಿಲ್ಲ.
 • ವರ್ಷದ ಎಲ್ಲಾ ಋತುಮಾನಗಳಲ್ಲೂ  ನೀರಾವರಿ ಮತ್ತು ನೆಲದ ತೇವಾಂಶವನ್ನು ಅವಲಂಭಿಸಿ ಇದು ಬೆಳೆಯುತ್ತಿರುತ್ತದೆ.

ಔಷಧೀಯ ಮಹತ್ವ:

 • ಇದನ್ನು ಜ್ಞಾಪಕ ಶಕ್ತಿಯ ಟಾನಿಕ್ ಎಂದೇ ಕರೆಯಲಾಗುತ್ತದೆ.
 • ಇದರ ಎಲೆ, ಕಾಂಡ ಮತ್ತು ಗಡ್ಡೆಯನ್ನು ಸೇರಿಸಿ ಚಟ್ನಿ, ತಂಬುಳಿ ಮಾಡಿ ಸೇವಿಸುತ್ತಾರೆ.
 • ನರ ವ್ಯವಸ್ಥೆಯ ಸುಸ್ಥಿತಿಗೆ, ಚರ್ಮ ರೋಗಗಳಿಗೆ ಎಲೆ ಕಾಂಡವನ್ನು ಟಾನಿಕ್ ಆಗಿ ಉಪಯೋಗಿಸುತ್ತಾರೆ.
IIHR ಅಯ್ಕೆ ಮಾಡಿದ ತಳಿ

IIHR ಅಯ್ಕೆ ಮಾಡಿದ ತಳಿ

 • ಹಿರಿಯರು ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸಲು ಒಂದೆಲಗ (ತಿಮರೆ) ತಿನ್ನಿ  ಎನ್ನುತ್ತಾರೆ.
 • ಇದು ಮೂತ್ರ ಪ್ರೇರಕ. ಶಕ್ತಿ ದಾಯಕ ಮತ್ತು ರಕ್ತದೊತ್ತಡ ತಗ್ಗಿಸುವ ಕೆಲಸವನ್ನು  ಮಾಡುತ್ತದೆ.
 • ಕುಷ್ಠ ರೋಗ ಚಿಕೆತ್ಸೆಯಲ್ಲಿ ಇದರ ಗಿಡದ ಡಿಕಾಕ್ಷನ್ ಉಪಯೋಗವಾಗುತ್ತದೆ.

  ಬೆಳಗ್ಗೆ  ಹಸಿ ಹೊಟ್ಟೆಗೆ 5-6 ಎಲೆ ಒಂದೆಲಗ+2  ಬಿಲ್ವ ಪತ್ರೆ ಎಲೆ+2-3 ತುಳಸಿ ಎಲೆ + 4 ತುದಿ ಗರಿಕೆ ಹುಲ್ಲು ಸೇರಿಸಿ ಜಗಿದು ರಸ ಸೇವಿಸಿದರೆ   ಬೊಜ್ಜು ಒಂದು ತಿಂಗಳಲ್ಲಿ ಕರಗಿ ದೇಹಕ್ಕೆ ಹೊಸ ತೇಜಸ್ಸು ಬರುತ್ತದೆ.

ಒಂದೆಲಗದ  ಜ್ಯೂಸ್:

 •  ಸುಮಾರು 10-12 ಎಲೆ ಒಂದೆಲಗದ ಎಲೆಯನ್ನು  ತಂದು ಅದನ್ನು  ಮಿಕ್ಸಿಯಲ್ಲಿ  ಚೆನ್ನಾಗಿ ರುಬ್ಬಿರಿ.
 • ರುಚಿಗೆ ಬೆಲ್ಲ ಹಾಕಿ. ಬೆಲ್ಲ ವರ್ಜ್ಯ ಇದ್ದವರು ಉಪ್ಪು ಮತ್ತು ಸೂಜಿ ಮೆಣಸನ್ನು ಹಾಕಿ ಕಡೆಯಿರಿ.
 • ಇದನ್ನು  ಸುಮಾರು 1 ದೊಡ್ದ ಗ್ಲಾಸ್ ಅಳತೆಗೆ ದ್ರವ ಮಾಡಿಟ್ಟುಕೊಂಡು ದಿನಾ ಸೇವನೆ ಮಾಡುತ್ತಿದ್ದರೆ ಆರೋಗ್ಯಕ್ಕೆ ಒಳ್ಳೆಯದು.
 • ಇದನ್ನು ಪಟ್ಟಣಗಳಲ್ಲಿ ಬೆಳಗ್ಗೆ ವಾಕ್ ಮಾಡುವವರಿಗೆ ಮಾರಾಟ ಮಾಡುವವರಿದ್ದಾರೆ.

ಒಂದೆಲಗದ ತಳಿಗಳು:

 • ಎಲೆಯ ಮತ್ತು ಬೆಳೆವಣಿಗೆಯ ಲಕ್ಷಣಕ್ಕನುಗುಣವಾಗಿ ನೆಟ್ಟು ಬೆಳೆಸಬಹುದಾದ ಒಂದೆಲಗದ ಎರಡು ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ  ಬಿಡುಗಡೆ ಮಾಡಿದೆ.

ಅರ್ಕಾ ದಿವ್ಯಾ ತಳಿ.

 • ಇದು ಹೆಚ್ಚು ಎಲೆಗಳನ್ನು ಮತ್ತು ಅಗಲದ ಎಲೆಗಳನ್ನು  ಬಿಡುತ್ತದೆ.
 • ಬೇಗ ಬೆಳವಣಿಗೆ ಹೊಂದುತ್ತದೆ. ಇದರಲ್ಲಿ ವಿಟಮಿನ್ A ಅಂಶ 100 ಗ್ರಾಂ ನಲ್ಲಿ 32 ಮಿಲಿ ಗ್ರಾಂ ಗೂ ಹೆಚ್ಚು ಇದೆ.

ಅರ್ಕಾ ಪ್ರಭಾವಿ ತಳಿ.

 • ಇದು ಔಷಧೀಯ ಬಳಕೆಯಲ್ಲಿ ಅಗತ್ಯ ಸಾರ ಪಡೆಯಲು ( Active ingredient extraction) ಸೂಕ್ತ ತಳಿ ಎಂದು ಗುರುತಿಸಲಾಗಿದೆ.
 • ಇದರಲ್ಲಿ ಅಂಟಿ ಆಕ್ಸಿಡೆಂಟ್ ಗಳಾದ Asiaticoside content (>3%) and total Tri-Terpenes content (6-8%)  ಈ ಪ್ರಮಾಣದಲ್ಲಿ  ಇದೆ.

ಬೆಳೆಯುವ ಕ್ರಮ:

 • ಒಂದೆಲಗವು ಸಾಧಾರಣ ಮಣ್ಣಿನಲ್ಲೂ ಬೆಳೆಯುತ್ತದೆ. ಆದರೆ ಹೆಚ್ಚು ಶಕ್ತಿ ಶಾಲಿಯಾಗಿ ಹೆಚ್ಚು ಎಲೆಗಳನ್ನೊಳಗೊಂಡು ಬೆಳೆಯಲು ಫಲವತ್ತಾದ ಮಣ್ಣು ಬೇಕು.
 • ಗದ್ದೆ ಬೇಸಾಯ ಮಾಡುವ ಮಣ್ಣು ಇದಕ್ಕೆ ಹೆಚ್ಚು ಸೂಕ್ತ. ಬರೇ ಫಲವತ್ತತೆ ಮಾತ್ರವಲ್ಲ.
 • ಮಣ್ಣಿನ ಸಡಿಲತೆಯ ಮೇಲೆ ಬೆಳವಣಿಗೆ ಮತ್ತು ಹಬ್ಬುವಿಕೆ  ಹೆಚ್ಚು.
 • ನೆಡುವಾಗ ಒಂದು ಬೇರು ಇರುವ ಸಸಿಯನ್ನು ನೆಟ್ಟರೆ ಅದರಲ್ಲಿ ಹೊಸ ಹೊಸ ಸಸಿಗಳು ಹುಟ್ಟುತ್ತಾ ಮುಂದೆ ಮುಂದೆ ವಿಸ್ತಾರವಾತ್ತದೆ.
 • ನೆಲವನ್ನು ಸುಮಾರು ½ ಅಡಿ ಏತ್ತರಿಸಿದ ಪಾತಿ ಮಾಡಿ  ನಾಟಿ ಮಾಡಬೇಕು.
 • ಇದು ಬೇಸಿಗೆ ಮತ್ತು ಮಳೆಗಾಲಕ್ಕೆರಡೂ ಸೂಕ್ತ.
 • ಬೇಸಿಗೆಯಲ್ಲಿ  ದಿನಾ ನೀರು ಚಿಮುಕಿಸುತ್ತಿರಬೇಕು. ಇನ್ ಲೈನ್ ಡ್ರಿಪ್ಪರನ್ನೂ ಹಾಕಬಹುದು.
 • ಇದನ್ನು ರಾಸಾಯನಿಕ ಗೊಬ್ಬರ ಬಳಸಿ ಬೆಳೆಯಬೇಕಾಗಿಲ್ಲ.
 • ಸಾಕಷ್ಟು ಫಲವತ್ತಾದ ಮಣ್ಣು ಮತ್ತು ಆಗಾಗ ಸಗಣಿ ದ್ರಾವಣವನ್ನು ಕೊಡುತ್ತಿದ್ದರೆ  ಬೆಳೆಯುತ್ತದೆ.
 • ಮಣ್ಣಿನ ಸವಕಳಿ ಆಗುವುದಕ್ಕೆ ವರ್ಷಕ್ಕೆ ಒಮ್ಮೆ ಅಥವಾ ಎರಡು  ಬಾರಿ ಹುಡಿ ಕಾಂಪೋಸ್ಟು ಗೊಬ್ಬರವನ್ನು ಪಾತಿಗೆ  ಚೆಲ್ಲಬೇಕು.

ಬೇಡಿಕೆ:

 • ನುಗ್ಗೆ ಸೊಪ್ಪು ಮುಂತಾದವುಗಳನ್ನು ಒಣಗಿಸಿ ಮಾರಾಟ ಮಾಡಲು ಹೇರಳ ಅವಕಾಶ ಇರುವಂತೆ ಈ ಸೊಪ್ಪಿಗೂ ಬೇಡಿಕೆ ಇದೆ.
 • Centella asiatica. ಖರೀದಿದಾರರ ಪಟ್ಟಿಯಲ್ಲಿ ಹಲವಾರು ಖರೀದಿದಾರರು ಇದ್ದಾರೆ.
 • ಇವರೆಲ್ಲಾ ಭಾರತದಿಂದ ಖರೀದಿ ಮಾಡುತ್ತಿದ್ದಾರೆ.
 • ಇದಕ್ಕೆ ನಮ್ಮ ದೇಶದ ಒಳಗೆಯೂ ಬೇಡಿಕೆ ಇದೆ. ಆದ ಕಾರಣ ನಿರ್ಲಕ್ಷ್ಯ ಮಾಡಬೇಡಿ. ಅಳಿಯಲು ಬಿಡಬೇಡಿ.

ನೆರಳಿನಲ್ಲಿ ಬೆಳೆದ ಸಸ್ಯಕ್ಕಿಂತ ಬಿಸಿಲಿನಲ್ಲಿ ಬೆಳೆದ ಸಸ್ಯದಲ್ಲಿ ಸತ್ವಾಂಶಗಳು ಅಧಿಕ. ಇದನ್ನು ಪಾಟ್ ಅಥವಾ ಗ್ರೋ ಬ್ಯಾಗ್ ಗಳಲ್ಲಿಯೂ ಬೆಳೆಯಬಹುದು.

ಮಾರಾಟಕ್ಕಲ್ಲದಿದ್ದರೂ ಮನೆಬಳಕೆಗೆ ಇದನ್ನು ಪಾತಿ ಮಾಡಿ ಬೆಳೆಸಿ. ನೀವೂ ತಿನ್ನಿ. ಮನೆಯ ಹಸುಗಳಿಗೆ ತಿನ್ನಿಸಿ ಹಾಲಿನ ಮೂಲಕ ನಿಮಗೂ ಸತ್ವ ದೊರೆಯುತ್ತದೆ

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!