ನುಗ್ಗೆ- ಸೊಪ್ಪು – ಕಾಯಿ ಎರಡರಲ್ಲೂ ಲಾಭ ಇರುವ ಬೆಳೆ.

ಸೊಪ್ಪಿಗಾಗಿ ನುಗ್ಗೆ ಬೆಳೆ

        ನುಗ್ಗೆ ಮೂಲತಃ ಉಷ್ಣವಲಯಗಳಲ್ಲಿ ಬೆಳೆಯಲ್ಪಡುವ ತರಕಾರಿ. ಮಳೆ ಕಡಿಮೆ ಇರುವಲ್ಲಿ ವರ್ಷದುದ್ದಕ್ಕೂ ಫಲಕೊಡುವ ಬೆಳೆ. ಹಿಂದಿನಿಂದಲೂ ಇದರ ಸೊಪ್ಪು, ಹೂವು ಕೋಡುಗಳನ್ನು ಜನ ಉಪಯೋಗ ಮಾಡುತ್ತಿದ್ದರು. ಈಗ ಸೊಪ್ಪಿಗೂ ವಾಣಿಜ್ಯ ಮಹತ್ವ ಬಂದಿದೆ. ಕೋಡಿಗೂ ಬೇಡಿಕೆ ಚೆನ್ನಾಗಿದೆ. ಆದ ಕಾರಣ ಬೆಳೆಗಾರರಿಗೆ ಅಯ್ಕೆಗಳು  ಹೆಚ್ಚಾಗಿವೆ. ಕೇವಲ ಸೊಪ್ಪುಮಾತ್ರವಲ್ಲ ಇದರ ಕಾಯಿ , ಚಿಗುರು ಬೇರು ತೊಗಟೆ ಎಲ್ಲವು ಆರೋಗ್ಯಕಾರಿ. ಈಗ ನುಗ್ಗೆ ಸೊಪ್ಪು  ಸೂಪರ್ ಫುಡ್ ಸ್ಥಾನವನ್ನು ಪಡೆದಿದೆ.      

ಪೋಷಕಾಂಶ ಗುಣಗಳು:

ನುಗ್ಗೆಯಲ್ಲಿ  ಬಾಳೆ ಹಣ್ಣಿಗಿಂತ 15 ಪಟ್ಟು ಪೊಟ್ಯಾಸಿಯಂ, ಹಾಲಿಗಿಂತ 4 ಪಟ್ಟು ಕ್ಯಾಲ್ಸಿಯಂ, ಗೋಧಿ ಹುಲ್ಲಿಗಿಂತ 4 ಪಟ್ಟು ಕ್ಲೋರೊಫಿಲ್, ಕಿತ್ತಳೆ ಹಣ್ಣಿನಷ್ಟೇ ವಿಟಮಿನ್ ಸಿ, ಬಾದಾಮಿಗಿಂತ 12 ಪಟ್ಟು ವಿಟಮಿನ್ ‘ಇ’  ಗಜ್ಜರಿ ಅಥವಾ ಕ್ಯಾರಟ್ ಗಿಂತ 6 ಪಟ್ಟು ವಿಟಮಿನ್ ‘ಎ’ ಹೊಂದಿರುವ ನುಗ್ಗೆ ಸೊಪ್ಪು ಸಹಜವಾಗಿಯೇ ಮನುಷ್ಯರ ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಪ್ರೋಟೀನ್  = 6. 7  ಗ್ರಾಂ
  • ಕೊಬ್ಬಿನಂಶ = 1. 7 ಗ್ರಾಂ
  • ಕ್ಯಾಲ್ಸಿಯಂ = 440 ಗ್ರಾಂ
  • ಪೊಟ್ಯಾಸಿಯಂ = 259 ಮಿ. ಗ್ರಾಂ
  • ವಿಟಮಿನ್ ಸಿ = 220 ಮಿ. ಗ್ರಾಂ
  • ಕೆರೋಟಿನ್ = 6,780 ಮೈಕ್ರೋ ಗ್ರಾಂ

ಮಧುಮೇಹಿಗಳಿಗೆ ಇದೊಂದು ಸೂಕ್ತ ಆಹಾರ:

ನುಗ್ಗೆ ಬೆಳೆದರೆ ಕೋಡು ಮಾತ್ರವಲ್ಲ. ಸೊಪ್ಪು ಸಹ ಬೆಲೆ ಉಳ್ಳದ್ದು

  •  ನುಗ್ಗೆಸೊಪ್ಪಿನಲ್ಲಿ Glycemic Index ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಸಮತೋಲನದಲ್ಲಿಡಲು ಸಹಾಯಕಾರಿಯಾಗಿದೆ.
  •  ಇದರಲ್ಲಿರುವ ನ್ಯೂಟ್ರಾಸಿಟಿಕಲ್ಸ್   ಮದುಮೇಹದಿಂದಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತವೆ.
  • ಕ್ಯಾಲ್ಸಿಯಂ ಅಂಶ ಹೆಚ್ಚು ಇರುತ್ತದೆ.
  •  ಹಾಲಿಗಿಂತ ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ನುಗ್ಗೆಸೊಪ್ಪಿನಲ್ಲದೆ.
  • ದಿನನಿತ್ಯ ಅಡುಗೆಯಲ್ಲಿ ನುಗ್ಗೆ ಕಾಯಿ ಹಾಗು ಸೊಪ್ಪು ಬಳಸುವುದರಿಂದ ಕ್ಯಾಲ್ಸಿಯಂ ಸಂಭಂದಿತ ಸಮಸ್ಯೆಗಳಾದ Osteoporosis, ಮೂಳೆಗಳ ಸೆಳೆತ ಮುಂತಾದವುಗಳನ್ನು ತಡೆಗಟ್ಟಬಹುದು  ಇದು  ಮೂಳೆಗಳನ್ನ ದೃಢಗೊಳಿಸುತ್ತದೆ.

ಕಣ್ಣಿನ ಆರೋಗ್ಯಕ್ಕೂ ಉತ್ತಮ:

  • ಕಣ್ಣಿನ ಆರೋಗ್ಯ ಕಾಪಾಡಲು ವಿಟಮಿನ್ ಎ ಬರಿತ ಆಹಾರ ಸೇವಿಸುವುದು ಅತ್ಯಾವಶ್ಯಕ.
  • ನಾವೆಲ್ಲಾ  ತಿಳಿದ ಹಾಗೆ ಹಳದಿ ಬಣ್ಣದ ಹಣ್ಣು ಮತ್ತು ತರಕಾರಿಗಳಲ್ಲಿ  ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿರುತ್ತದೆ.
  • ಆದರೆ ನುಗ್ಗೆಯಲ್ಲಿ ಕ್ಯಾರೋಟಿನ್ ಅಂಶ ಸಮೃದ್ಧವಾಗಿದ್ದು ದೇಹದ ವಿಟಮಿನ್ A ಬೇಡಿಕೆಯನ್ನು ಪೂರೈಸುವಲ್ಲಿ  ಪ್ರಮುಖ ಪಾತ್ರ  ಹೊಂದಿದೆ.

ಅಲ್ಸರ್ ಇದೆಯೇ ನುಗ್ಗೆ ಸೊಪ್ಪು ಬಳಸಿ:

  • ನಾವೆಲ್ಲರೂ ಬಾಯಿ ಹಾಗು ಹೊಟ್ಟೆಯಲ್ಲಿ ಹುಣ್ಣಾದಾಗ ಬಿ – ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಳ್ಳುವುದು ಸಹಜ ಅಲ್ಲವೇ ?
  • ಆದರೆ  ದಿನನಿತ್ಯ ನುಗ್ಗೆ ಸೊಪ್ಪು ಹಾಗು ನುಗ್ಗೆ ಕಾಯಿಯನ್ನು ಸೇವಿಸುವವರು ಈ ಸಮಸ್ಯೆಗೆ ಪರಿಹಾರ ತಿಳಿದಿರುವರು.
  • ಏಕೆಂದರೆ  ನುಗ್ಗೆ ಸೊಪ್ಪಿನಲ್ಲಿ Thiamine, Riboflavin  ಹಾಗು Niacine  ಎಂಬ ಬಿ – ಕಾಂಪ್ಲೆಕ್ಸ್ ವಿಟಮಿನ್ ಗಳು  ಉತ್ತಮ ಪ್ರಮಾಣದ್ಲಲಿದೆ.
  • ಬಾಯಿ ಹಾಗು ಹೊಟ್ಟೆಯಲ್ಲಿ ಹುಣ್ಣುಗಳನ್ನು ತಡೆಗಟ್ಟುತ್ತವೆ.
  • ಅಜೀರ್ಣತೆ,  ಹುಳಿತೇಗು ಹಾಗು ಮಲಬದ್ಧತೆ ಸಮಸ್ಯೆಗಳಿಗೆ ಇದು ಸೂಕ್ತ ಪರಿಹಾರವಾಗಿದೆ.

ನುಗ್ಗೆ ಹೂವು ಅಡುಗೆಗೂ, ಔಷಧಕ್ಕೂ ಸೈ

ನೈಸರ್ಗಿಕ Galactogogue ಈ ನುಗ್ಗೆ ಸೊಪ್ಪು:

  •  ಗರ್ಭಿಣಿಯರು ಹಾಗು ಹಾಲುಣಿಸುವ ತಾಯಂದಿರು ಆಹಾರದಲ್ಲಿ ನುಗ್ಗೆ ಸೊಪ್ಪು ಸೇವಿಸುವುದರಿಂದ   ಎದೆಹಾಲು ಉತ್ಪತ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ.
  •  ನುಗ್ಗೆ ಸೊಪ್ಪಿನಲ್ಲಿ Chlorogenic ಆಮ್ಲ ಹಾಗು ಕರಗದ ನಾರಿನಂಶವಿರುವುದರಿಂದ ಅಗತ್ಯವಿರದ ಕೊಬ್ಬಿನಂಶವನ್ನು ಕರಗಿಸಿ ತೂಕ ಇಳಿಸಲು ಅತ್ಯಂತ ಸಹಾಯಕಾರಿಯಾಗಿದೆ.

ಒಣಗಿಸಿದ ನುಗ್ಗೆ ಸೊಪ್ಪು

ಕರಾವಳಿ ಮಲೆನಾಡಿನಲ್ಲಿ ಅಧಿಕ ಮಳೆಯ ಕಾರಣ ಕೋಡಿಗಾಗಿ ನುಗ್ಗೆ ಬೆಳೆಯುವುದಕ್ಕೆ ಸ್ವಲ್ಪ ಕಷ್ಟ ಇದೆ. ಆದರೆ ಇಲ್ಲಿ ನುಗ್ಗೆಯನ್ನು ಸೊಪ್ಪಿಗಾಗಿ ಬೇಸಾಯ ಮಾಡಬಹುದು. ಹೇರಳ ಸೊಪ್ಪು ದೊರೆಯುತ್ತದೆ. ಒಣಗಿಸುವ ವ್ಯವಸ್ಥೆ ಇಟ್ಟುಕೊಂಡರೆ ಇದು ವರಮಾನ ತಂದುಕೊಡುವ ಬೆಳೆ.

ನುಗ್ಗೆ ಸೊಪ್ಪಿನಲ್ಲಿವೆ 18 ಅಮೈನೊ ಆಮ್ಲಗಳು:

  • ಇವುಗಳು ದೇಹದ ಜೀವ ರಾಸಾಯನಿಕ  ಕ್ರಿಯೆಯ ಮೂಲ  ಆಧಾರವಾಗಿವೆ.
  • ವಿಶೇಷವಾಗಿ Tryptophan ಎಂಬ ಅಮೈನೊ ಆಮ್ಲ ನಮ್ಮ ನಿದ್ರೆಯ ಆವರ್ತನೆಯನ್ನ ನಿಯಂತ್ರಿಸಲು ನೆರವಾಗುತ್ತದೆ
  • ನಮ್ಮ ಮೆದುಳಿಗೆ ಮುದನೀಡುವ ರಸದೌತ್ತಗಳನ್ನ ಹೆಚ್ಚು ಸ್ರವಿಸಲು ನೆರವಾಗುವ  ಮೂಲಕ ಗಾಢ ನಿದ್ರೆಯನ್ನು ಪಡೆಯಲು ನೆರವಾಗುತ್ತದೆ
  • ರಕ್ತದ ಒತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನು ವೃದ್ಧಿಸುವ ಪೋಷಕಾಂಶಗಳು ಕೂಡ ನುಗ್ಗೆ ಸೊಪ್ಪು ಒದಗಿಸುತ್ತದೆ.

ನುಗ್ಗೆ ಸೊಪ್ಪಿನ ಹುಡಿ, ಮತ್ತು ಮಾತ್ರೆಗಳ ವಾಣಿಜ್ಯ ರೂಪ

        ಆರೋಗ್ಯಕ್ಕೆ ಪೂರಕವಾದ ಈ ನುಗ್ಗೆ ಸೊಪ್ಪು ದೇಹದ ಕಲ್ಮಶಗಳನ್ನು ಹೊರ ಹಾಕಲು ರಾಮಬಾಣವಾಗಿದ್ದು ಹಲವಾರು ಸೋಂಕಿನ ವಿರುದ್ಧ ಹೊರಡುವ ನೈಸರ್ಗಿಕ  ರೋಗನಿರೋಧಕ ಶಕ್ತಿಯನ್ನು ಕೂಡ ಹೊಂದಿರುವುದು. ಹೀಗೆ ಅನೇಕ ಔಷದಾತ್ಮಕ ಗುಣವುಳ್ಳ ನುಗ್ಗೆ ಸೊಪ್ಪನ್ನು ನಾವು ಸಂಸ್ಕರಿಸಿ ಒಣಗಿಸಿ ಹಾಗು ಪುಡಿ ಮುಖಾಂತರ ಶೇಖರಣೆಮಾಡಬಹುದು ಜೊತೆಗೆ ಮಕ್ಕಳಿಗಾಗಿ ಇದರಿಂದ ಹಲವಾರು ಮೌಲ್ಯವರ್ದಿತ ಖಾದ್ಯಗಳನ್ನು ತಯಾರಿಸಬಹುದು.

ನುಗ್ಗೆಯನ್ನು ಸೊಪ್ಪಿಗಾಗಿ ಬೆಳೆಸುವಾಗ ಸುಮಾರು 5 ಅಡಿ ಅಂತರದಲ್ಲಿ ಬೆಳೆಸಿ, ನೀರಾವರಿ ಮಾಡುತ್ತಾ ಕಾಲಕಾಲಕ್ಕೆ ಮಟ್ತಕ್ಕೆ ಸವರುತ್ತಾ ಇದ್ದರೆ ಹೆಚ್ಚು ಹೆಚ್ಚು ಸೊಪ್ಪು ಲಭ್ಯವಾಗುತ್ತದೆ. ಬೆಳೆಗಾಗಿ ಬೆಳೆಸುವಾಗ ಪ್ರಾರಂಭದ ಕೆಲವು ವರ್ಷ ಉತ್ತಮ ಫಲ ನೀಡುತ್ತದೆ. ನಂತರ ಕೊಡುಗಳಲ್ಲಿ ಮೇಣ ಸ್ರಾವದ ರೋಗ ಉಂಟಾಗುತ್ತದೆ. ಆ ಸಮಯದಲ್ಲಿ  ಬುಡವನ್ನು ಮಟ್ಟಕ್ಕೆ ಕಡಿದು ಸೊಪ್ಪಿನ ಉದ್ದೇಶಕ್ಕೆ ಬಳಕೆ ಮಾಡಬಹುದು.
ಸೊಪ್ಪನ್ನು ಕೊಳ್ಳುವ ಹಲವಾರು ಔಷಧಿ ತಯಾರಕರಿದ್ದು, ಅದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ನೆರಳಿನಲ್ಲಿ ಒಣಗಿಸಿದ ಈ ಸೊಪ್ಪಿಗೆ ಕಿಲೋಗೆ ರೂ.400-500 ತನಕ ಬೆಲೆ ಇದೆ.
ಲೇಖಕರು: ಸಂಧ್ಯಾ ಎಸ್   ರ್‍ಯಾವನಕಿ,  ವೀಣಾ  ಬುಶೆಟ್ಟಿ , ಪಲ್ಲವಿ ಬಾದಾಮಿ,  ಪೂಜಾ ಎಸ್ ಪಿ, ಕೃಷಿ  ವಿಶ್ವ ವಿಧ್ಯಾನಿಲಯ ಧಾರವಾಡ ಮತ್ತು ಕೃಷಿ  ವಿಶ್ವ ವಿಧ್ಯಾನಿಲಯ ಬೆಂಗಳೂರು.
end of the article: ———————————————–
search words: nugge# moringa#  moringa capsuls# moringa a helath tonic # moringa cultivation# moringa by products #

Leave a Reply

Your email address will not be published. Required fields are marked *

error: Content is protected !!