ದಿನಾಂಕ:13-12-2022 ಚಾಲಿ,ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ ಧಾರಣೆ.

ದಿನಾಂಕ:13-12-2022 ಚಾಲಿ, ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ
ಚಾಲಿ ದರ ಭಾರೀ ಕುಸಿತ ಆಗಲಿಲ್ಲ.ಏರಿಕೆಯ ಸೂಚನೆಯೂ ಇಲ್ಲ.ಕೆಂಪುಅಡಿಕೆ ಧಾರಣೆ ಮಾತ್ರ ಯಾವ ಬೆಳೆಗಾರನೂ ಕಲ್ಪಿಸಿರದ ಮಟ್ಟಕ್ಕೆ ಬಂದಿದೆ.ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿಲ್ಲ. ಗುಟ್ಕಾ ತಿನ್ನುವುದು ಕಡಿಮೆಯಾಗಿಲ್ಲ.ಗುಟ್ಕಾ ತಯಾರಿಕೆ ನಿಂತಿಲ್ಲ. ಆದರೆ ಅಡಿಕೆಗೆ ಬೆಲೆ ಇಲ್ಲ. ಕರಿಮೆಣಸು ಒಮ್ಮೆ ಚೇರಿಸಿಕೊಂಡರೂ  ಮತ್ತೆ ಮುಗ್ಗರಿಸಿದೆ. ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಇಲ್ಲ.ಕೊಬ್ಬರಿಯೂ ಸಹ ನೆಲಕಚ್ಚಿದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಭಾರೀ ಅಸ್ತಿರವಾಗಿದೆ.
 ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಸಾಗರ, ಶಿರಸಿ ಇಲ್ಲಿ ಹೊಸ ಅಡಿಕೆ ತಯಾರಾಗಿಲ್ಲ. ಚಿತ್ರದುರ್ಗ, ಹೊನ್ನಾಳಿ, ದಾವಣಗೆರೆ, ಇಲ್ಲೆಲ್ಲಾ ಆಗಲೇ ಹೊಸ ಮಾಲು ತಯಾರಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಆದರೆ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.
ಚಾಲಿ ಅಡಿಕೆ ಮಾರುಕಟ್ಟೆಯೂ ಬಾರೀ ಕೆಳೆಗೆ  ಬೀಳುವ ಸಾಧ್ಯತೆ ಇತ್ತು.  ಮಾಲು ಹೋಗಿ ಹಣ ಬಾರದಿದ್ದರೆ ಹೀಗೇ ಆಗುವುದು. ಆದರೆ ಅದನ್ನು ಕ್ಯಾಂಪ್ಕೋ ಸಂಸ್ಥೆ ಇರುವ ಕಾರಣ ದರ  ಹೆಚ್ಚು ಬೀಳಲಿಲ್ಲ. ಒಮ್ಮೆಗೆ ಖರೀದಿದಾರರ ಹಣ ಬಾರದಿದ್ದರೂ ಸಂಸ್ಥೆ ಆದ ಕಾರಣ ದಾಸ್ತಾನು ಮೇಲೆ ಬ್ಯಾಂಕ್ ಹಣಕಾಸು ಹೊಂದಿಸಿಕೊಮ್ಡು ಖರೀದಿ ನಡೆಸಲು ಸಾಧ್ಯ. ಹಾಗಾಗಿ ಸ್ವಲ್ಪ ಇಳಿಕೆಯಾಗಿದೆ ಅಷ್ಟೇ.

ಇಂದು ಚಾಲಿ ಅಡಿಕೆ ಧಾರಣೆ:

ಕರಾವಳಿಯ ಮಂಗಳೂರು, ಕಾರ್ಕಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕುಂದಾಪುರಗಳಲ್ಲಿ ಚಾಲ್ತಿಯಲ್ಲಿದ್ದ ದರ.
ಹೊಸ ಅಡಿಕೆ:32,500 35000-37500 - ಗರಿಷ್ಟ 38,000 ತನಕ ಇತ್ತು.
ಡಬ್ಬಲ್ ಚೋಲ್:50,000-54,000-54,500 
ಕುಂದಾಪುರದಲ್ಲಿ ಹಳೆ ಚಾಲಿ 55,000 ಕ್ಕೆ ಖರೀದಿ ಆಗಿದೆ.
ಪಟೋರಾ: 25,000-35,000
ಉಳ್ಳಿ ಗಡ್ಡೆ: 15,000-27,500
ಕರಿಕೊಕಾ:18,000-25,000
ಕುಮಟಾ ಹಳೆ ಚಾಲಿ, ಗರಿಷ್ಟ :39509 ಸರಾಸರಿ. 38109
ಹೊಸ ಚಾಲಿ: ಗರಿಷ್ಟ – 33000 ಸರಾಸರಿ: 32019
ಸಾಗರ ಚಾಲಿ, ಗರಿಷ್ಟ : 36699 ಸರಾಸರಿ: 36519
ಸಿದ್ದಾಪುರ ಚಾಲಿ: ಗರಿಷ್ಟ: 39344 ಸರಾಸರಿ: 38499
ಸಿರ್ಸಿ ಚಾಲಿ ಗರಿಷ್ಟ :41212 ಸರಾಸರಿ:38863
ಸೊರಬ ಚಾಲಿ ಗರಿಷ್ಟ: 34291ಸರಾಸರಿ 34291
ಯಲ್ಲಾಪುರ ಹಳೆ ಚಾಲಿ: ಗರಿಷ್ಟ  40609 ಸರಾಸರಿ :39109
ಹೊಸ ಚಾಲಿ: 31899, 31299
ಖಾಸಗಿಯವರು  ಪಟೋರಾ ಅಡಿಕೆಗೆ ರೂ.10 ಹೆಚ್ಚಿನ ದರದಲ್ಲಿ ಖರೀದಿಸುತ್ತಾರೆ. ಆದರೆ ಗುಣಮಟ್ಟ ಮಾತ್ರ ಬಹಳ ಉತ್ತಮವಾಗಿ ಇರಬೇಕು.
ಹೊಸ ಅಡಿಕೆಗೆ ಸರಾಸರಿ ಖರೀದಿ ದರ 36,000 ಸಿಂಗಲ್ ಚೋಲ್ 46000 ಡಬ್ಬಲ್ ಚೋಲ್ 54,000 ಇರುತ್ತದೆ. ಪ್ರಕಟಣೆಯ ದರಕ್ಕೆ ಖರೀದಿ ನಡೆಯುವುದು ಬಹಳ ಕಡಿಮೆ.
ಖಾಸಗಿಯವರಿಗೂ ಅಡಿಕೆ ಬರುತ್ತಿಲ್ಲ- ಸಹಕಾರಿಗಳಿಗೂ ಬರುತಿಲ್ಲ. ಹೆಚ್ಚಿನ ಸ್ಥಳೀಯ ಖಾಸಗಿ ವ್ಯಾಪಾರಿಗಳು ತಾವು ದಿನವಹಿ ಖರೀದಿಸಿದ ಅಡಿಕೆಯನ್ನು ಸಂಜೆ ಸುಮಾರಿಗೆ ಸಹಕಾರಿ ವ್ಯವಸ್ಥೆಗೆ ಮಾರಾಟಮಾಡಿ ನಗದೀಕರಣ ಮಾಡಿಕೊಳ್ಳುವ ಸ್ಥಿತಿ ಇದೆ.  

ಕೆಂಪುಅಡಿಕೆ ಧಾರಣೆ:

ಕೆಂಪುಅಡಿಕೆ ಧಾರಣೆ:
 • ಬದ್ರಾವತಿ ರಾಶಿ ಗರಿಷ್ಟ: 42099 ಸರಾಸರಿ 41272 ಗರಿಷ್ಟ: 42099 ಸರಾಸರಿ 41272
 • ಚೆನ್ನಗಿರಿ ರಾಶಿ. ಗರಿಷ್ಟ  42300 ಸರಾಸರಿ:41275
 • ಚಿತ್ರದುರ್ಗ ಅಪಿ ಗರಿಷ್ಟ, 40222 ಸರಾಸರಿ, 40000
 • ಬೆಟ್ಟೆ ಗರಿಷ್ಟ: 31569 ಸರಾಸರಿ: 31389
 • ಕೆಂಪುಗೋಟು ಗರಿಷ್ಟ: 28010 ಸರಾಸರಿ: 27800
 • ರಾಶಿ ಗರಿಷ್ಟ: 39779 ಸರಾಸರಿ: 39559
 • ದಾವಣಗೆರೆ ಗರಿಷ್ಟ: 39229 ಸರಾಸರಿ: 38954
 • ಹೊನ್ನಾಳಿ ರಾಶಿ ಗರಿಷ್ಟ: 41699 ಸರಾಸರಿ:41699
 • ಹೊಸನಗರ ರಾಶಿ: ಗರಿಷ್ಟ, 41100 ಸರಾಸರಿ:40361
 • ಕೊಪ್ಪ ಬೆಟ್ಟೆ ಗರಿಷ್ಟ 47500 ಸರಾಸರಿ: 43750
 • ಸರಕು ಗರಿಷ್ಟ: 68000 ಸರಾಸರಿ: 54000
 • ಕುಮ್ಟಾ ಚಿಪ್ಪು ಗರಿಷ್ಟ: 32089 ಸರಾಸರಿ: 29509
 • ಸಾಗರ ಬಿಳೇಗೋಟು ಗರಿಷ್ಟ, 28299 ಸರಾಸರಿ: 19599
 • ರಾಶಿ ಗರಿಷ್ಟ 41199 ಸರಾಸರಿ: 40499
 • ಸಿಪ್ಪೆಗೋಟು, 19799, 17799
 • ಕೋಕಾ: 30599, 28399
 • ಕೆಂಪುಗೋಟು: 31899, 28899
 • ಶಿಕಾರಿಪುರ ಮಿಕ್ಸ್: 43635, 43635
 • ಶಿವಮೊಗ್ಗ ಬೆಟ್ಟೆ ಗರಿಷ್ಟ: 49509 ಸರಾಸರಿ: 49100
 • ಗೊರಬಲು: 31803, 30869
 • ರಾಶಿ ಹೊಸತು: 40299, 41669, 41369
 • ರಾಶಿ ಹಳೆಯದು, 42009, 41599
 • ಸರಕು: 79396, 69600
 • ಸಿದ್ದಾಪುರ ಬಿಳೇಗೋಟು: ಗರಿಷ್ಟ: 32899 ಸರಾಸರಿ: 32399
 • ಕೋಕಾ: 30899, 28809
 • ರಾಶಿ: 41209, 40969
 • ತಟ್ಟೆ ಬೆಟ್ಟೆ: 37099, 37099
 • ಸಿರ್ಸಿ  ಹಸಿ ಸಿಪ್ಪೆ ಅಡಿಕೆ, 5300, 4220
 • ಬೆಟ್ಟೆ: 40899, 37913
 • ರಾಶಿ ಗರಿಷ್ಟ: 42509 ಸರಾಸರಿ: 41575
 • ಸೊರಬ ರಾಶಿ: 40009, 38482
 • ತರೀಕೆರೆ ಇತರ: 45000, 45000
 • ತೀರ್ಥಹಳ್ಳಿ ರಾಶಿ ಗರಿಷ್ಟ : 41199 ಸರಾಸರಿ:40799
 • ಸರಕು: 79540, 70500
 • ಯಲ್ಲಾಪುರ ಬಿಳೇಗೋಟು: 33229, 31516
 • ಕೆಂಪುಗೋಟು: 32799, 31499
 • ರಾಶಿ: 46899, 46099
 • ತಟ್ಟೆ ಬೆಟ್ಟೆ: 40010, 38599
 • ಅಪಿ: 50409, 50409

ಕೊಬ್ಬರಿ ಧಾರಣೆ:

18-20 ಸಾವಿರದ ತನಕ ಏರಿಕೆ ಅಗಿದ್ದ ಕೊಬ್ಬರಿ ಧಾರಣೆ ಸುಮಾರು 50% ಕುಸಿತವಾಗಿದೆ.  ಸರಾಸರಿ ಅರಸೀಕೆರೆ, ತಿಪಟೂರು ಮಾರುಕಟ್ಟೆಯಲ್ಲಿ  ಕ್ವಿಂಟಾಲಿಗೆ: 11700 ದಿಂದ 12,000 ದರ ನಿಂತಿದೆ.ಎಣ್ಣೆಗೆ ಕಲಬೆರಕೆ, ಹಾಗೆಯೇ ಉತ್ತರ ಭಾರತದಿಂದ ಖಾದ್ಯ ಕೊಬ್ಬರಿಗೆ ಬೇಡಿಕೆ ಕಡಿಮೆಯಾಗಿರುವುದು ಕಾರಣ.

ಕೊಬ್ಬರಿ ಧಾರಣೆ:

ಹಸಿ ಕಾಯಿಯ ದರ ಸ್ವಲ್ಪ ಏರಿಕೆ ಆಗಿದ್ದು, ಕಿಲೋ 26-27 ತನಕ  ಇದೆ. ಇನ್ನೂ ಸ್ವಲ್ಪ ಏರಿಕೆ ಆಗಬಹುದು.

ರಬ್ಬರ್ ಧಾರಣೆ:ಕಿಲೋ.

ಇಂದು ರಬ್ಬರ್ ಧಾರಣೆ ಸ್ಥಿರವಾಗಿದೆ. ಏರಿಕೆ ಆಗುವ ಸಾಧ್ಯತೆ ಕಡಿಮೆ.

 • GREDE 1X: 143.00
 • RSS 4: 139.00
 • RSS 5: 139.50
 • RSS 5:131.00
 • LOT:124.00
 • SCRAP:61.00-70.00

ಕರಿಮೆಣಸು ಧಾರಣೆ:

ಕಳೆದ ವಾರ ತಕ್ಷಣ 500 ಕ್ಕೆ ಏರಿಕೆ ಆಗಿದ್ದ ಕರಿಮೆಣಸು ಧಾರಣೆ ಕೊಚ್ಚಿ ಮಾರುಕಟ್ಟೆಯ ಬೇಡಿಕೆ ಕುಸಿತದ ಕಾರಣ ಮತ್ತೆ ರೂ.10 ಕೆಳಗೆ ಬಂದಿದೆ. ಮತ್ತೆ ಏರಿಕೆ ಆಗಬಹುದು. ಈ ವರ್ಷ ಬೆಳೆ ಬಹಳ ಕಡಿಮೆ ಇದೆ. ಕೊಯಿಲು ಇತ್ಯದಿ ಭಾರೀ ಸಮಸ್ಯೆ ಉಂಟಾಗಿದೆ.

ಕರಿಮೆಣಸು ಧಾರಣೆ
 • ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ ಇಲ್ಲಿ ಕೆಲವು ವರ್ತಕರು ಮೆಣಸನ್ನು ಕಿಲೋ 495.00 ರಿಂದ  500.00 ತನಕ ಖರೀದಿಸಿದ ವರದಿ ಇದೆ.
 • ಕರಾವಳಿ, ಮಲೆನಾಡಿನಲ್ಲಿ 490.00-495.00 ತನಕ ಇದೆ.

ಕಾಫೀ ಧಾರಣೆ:50 kg

ಏರಿಕೆ ಕಂಡಿದ್ದ ಕಾಫೀ ಆಮದು ಕಾರಣದಿಂಮ್ದ ಮತ್ತೆ ಕುಸಿತ ಕಂಡಿದೆ.

 • ಅರೇಬಿಕಾ ಪಾರ್ಚ್ ಮೆಂಟ್:12,9000-13,000
 • ಅರೇಬಿಕಾ ಚೆರಿ:6500
 • ರೋಬಸ್ಟಾ ಪಾರ್ಚ್ ಮೆಂಟ್ :8,000
 • ರೋಬಸ್ಟಾ ಚೆರಿ:4,000
 • ಹಣ್ಣು ರೂ.30 ಕಿಲೋ.

ಏಲಕ್ಕಿ ಧಾರಣೆ:

ಏಲಕ್ಕಿ ಧಾರಣೆ ತುಸು ಏರಿಕೆ ಆಗಿದೆ.

 • 8.5mm-1450
 • 8mm-1395
 • 7.5-1250
 • 7-1150
 • 6.5-1050
 • ತೋಟದ್ದು 520

ಭತ್ತದ ಧಾರಣೆ:

 • ದಾವಣಗೆರೆ ಮಧ್ಯಮ 2100, 2640, 2368
 • ಗಂಗಾವತಿ RNR, 2133, 2533, 2333
 • ಸೋನಾ 1900, 2140, 2080
 • ಸೋನಾ ಹಳೆಯದು, 2586, 2586, 2586
 • RNR Old, 2641, 2672, 2666
 • I.R. 64, , 1873, 1929, 1900
 • ಹರಿಹರ ಸೋನಾ: 2330, 2330, 2330
 • ಹಿರೇಕೆರೂರು: 1900, 2100, 2000
 • ಮೈಸೂರು: 2170, 2170, 2170
 • ರಾಯಚೂರು ಸೋನಾ: 1719, 2629, 2291
 • ರಾಜಹಂಸ: 1601, 1701, 1701
 • ಶಿಕರಿಪುರ:, 2100, 2100, 2100

ದೇಶದ ರೈತರ ಉತ್ಪನ್ನ ಇದ್ದಾಗಲೂ ಬೇರೆ ದೇಶಗಳಿಂದ ಆಮದು ಅನುಮತಿ ಕೊಡುವುದು, ಅನಧಿಕೃತ ಆಮದು ನಡೆಯುವುದು, ಮುಂತಾದವುಗಳಿಂದ ದೇಶದ ರೈತರ ಬೆಳೆಗೆ ಬೆಲೆ ಇಲ್ಲದಾಗಿದೆ. ಮಳೆ, ರೋಗ ಇತ್ಯಾದಿಗಳಿಂದ ಭಾರೀ ನಷ್ಟ  ಹಾಗೆಯೇ ದುಬಾರಿ ಕೂಲಿ ಕೆಲಸದ ಸಂಬಳದಿಂದ ಕೃಷಿಕರಿಗೆ ನಷ್ಟವೇ  ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!