ಕೃಷಿ ಉತ್ಪನ್ನಗಳ ರಕ್ಷಕ- ವ್ಯಾಕ್ಯೂಮ್ ಪ್ಯಾಕಿಂಗ್.

by | Dec 31, 2022 | Value Addition - ಮೌಲ್ಯ ವರ್ಧನೆ | 0 comments

ಹಾಳಾಗುವ ಕೃಷಿ ಉತ್ಪನ್ನಗಳನ್ನು ರಕ್ಷಿಸಲು  ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡಲು  ವ್ಯಾಕ್ಯೂಮ್ (ನಿರ್ವಾತ) ಪ್ಯಾಕಿಂಗ್ ವ್ಯವಸ್ಥೆ ಎಂಬುದು ಅತೀ ಸೂಕ್ತ. ಇಲ್ಲಿ ದೊಡ್ಡ ಗಾತ್ರದ ಸಾಮಾನುಗಳು ಒತ್ತಲ್ಪಟ್ಟು  ಹದ ಗಾತ್ರಕ್ಕೆ ಬರುತ್ತವೆ. ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಇದು ಅತೀ ಅಗತ್ಯ.

  • ಮಾರುಕಟ್ಟೆಯಿಂದ ತರುವ ಬಹಳಷ್ಟು ದಿನಸಿ ಸಾಮಗ್ರಿಗಳು ಅಂಗಡಿಯಿಂದ ತಂದು ಮನೆಯಲ್ಲಿ ಎರಡು ದಿನ ಇಟ್ಟು ಮತ್ತೆ ತೂಕ ಮಾಡಿದರೆ 50-100  ಗ್ರಾಂ ಕಡಿಮೆಯೇ.
  • ಇನ್ನು ಜೀರಿಗೆಯು ಓಮದ ವಾಸನೆಯನ್ನೂ, ಮೆಣಸು ಸಾಬೂನಿನ ವಾಸನೆಯನ್ನೂ ಹೀರಿಕೊಳ್ಳುವುದೂ ಇದೆ.
  • ಅಂಗಡಿಗೇ ಒಂದು ವಾಸನೆ ಇರುತ್ತದೆ.  ಅಲ್ಲಿನ ವಾಸನೆಯು  ತಂದ ಸಾಮಾನು ಸರಂಜಾಮಿನ ಜೊತೆ  ಸೇರಿರುತ್ತದೆ.
  • ಇದನ್ನೆಲ್ಲಾ ಹೋಗಲಾಡಿಸಲು ಇರುವ ವ್ಯವಸ್ಥೆ ಎಂದರೆ ವ್ಯಾಕ್ಯೂಮ್ ಪ್ಯಾಕಿಂಗ್.

ಯಾಕೆ ಅಗತ್ಯ:

  • ನಮ್ಮ ದೇಶದಲ್ಲಿ ಒಣ ಮೆಣಸಿಗೆ ನೀರು ಹಾಕುವುದು, ಹಸಿ ಹಸಿ ಬೇಳೆ ಕಾಳುಗಳನ್ನು ಮಾರಾಟ ಮಾಡುವುದು ಸಾಮಾನ್ಯ.
  • ಇದರಲ್ಲಿ  ರೈತರ ಪಾತ್ರ ಇರುವುದಿಲ್ಲ. ಇದೆಲ್ಲವೂ  ವ್ಯಾಪಾರಿಗಳು, ದಲ್ಲಾಳಿಗಳು, ಮಾಡುವ ಕೆಲಸವಾದರೂ ಇದರ ಕೆಟ್ಟ ಹೆಸರು ಮಾತ್ರ ರೈತರಿಗೆ.
  • ಶೇ. 30 ರಷ್ಟು ಕೃಷಿ ಉತ್ಪನ್ನಗಳು ಸರಿಯಾದ ಸಂಸ್ಕರಣೆ ಇಲ್ಲದೆಯೊ ಅಥವಾ ಮೇಲೆ ಹೇಳಿದಂತೆ ಕೃತ್ರಿಮ ಕೆಲಸಗಳಿಂದ ಹಾಳಾಗುತ್ತದೆ.
  • ಉದಾಹರಣೆಗೆ ಹೇಳಬೇಕೆಂದರೆ ಕರಿಮೆಣಸಿಗೆ  ಸ್ವಲ್ಪ ಬೂಸ್ಟು ಬಂದರೆ ಅದನ್ನು ಹೊಳಪುಳ್ಳ ಕಪ್ಪು ಬಣ್ಣ ಬರಲು ಟನ್ ಗೆ 5-10 ಲೀ. ಮಡ್ ಆಯಿಲ್ ಚೆಲ್ಲಿ ಚೆನ್ನಾಗಿ ಮೆಟ್ಟಿದರೆ ಹೊಳಪು ಬರುತ್ತದೆ.
  • ಬೂಸ್ಟ್ ಹೋಗುತ್ತದೆ, ತೂಕವೂ ಅಷ್ಟು ಹೆಚ್ಚು ಬರುತ್ತದೆ ನೋಟವೂ ಬರುತ್ತದೆ.
  • ಇದು ಸುಮಾರಾಗಿ ಹೆಚ್ಚಿನ ವ್ಯಾಪಾರಿಗಳೂ ಮಾಡುವಂತದ್ದು. ಇದರಿಂದ  ಗ್ರಾಹಕರಿಗೆ  ಕಳಪೆ ಗುಣಮಟ್ಟದ ಉತ್ಪನ್ನವನ್ನು ತಲುಪಿಸಿದಂತಾಗುತ್ತದೆ.
  • ಇದನ್ನು ತಡೆಯುವಲ್ಲಿ ವ್ಯಾಕ್ಯೂಮ್ ಪ್ಯಾಕಿಂಗ್  ಸಹಕಾರಿ.ಇದರಲ್ಲಿ ಪ್ಯಾಕಿಂಗ್ ಮಾಡಿದಾಗ ತೂಕ ನಷ್ಟ ಉಂಟಾಗದು.
  • ಮುಖ್ಯವಾಗಿ ಕೃಷಿ ಉತ್ಪನ್ನಗಳಿಗೆ ಸುರಿ ಬೀಳುವುದು,(STORAGE PEST) ಸಮಸ್ಯೆ ನಿವಾರಣೆಗೆ ಇದು ಅತ್ಯುತ್ತಮ

ಸಾಧನದ ಬಗ್ಗೆ:

  • ಯಂತ್ರಗಳು ಒತ್ತಡ ಮತ್ತು ಬಿಸಿ ಯ ಮೂಲಕ ವಿದ್ಯುತ್ ಶಕ್ತಿಯ ಆಧಾರದಲ್ಲಿ ನಡೆಯುತ್ತದೆ.
  • ಇದರಲ್ಲಿ ಅತೀ ಸಣ್ಣ ಗಾತ್ರದಿಂದ ಪ್ರಾರಂಭವಾಗಿ ಕ್ವಿಂಟಾಲು ತೂಕದ ತನಕವೂ ಪ್ಯಾಕಿಂಗ್ ಮಾಡುವಂತದ್ದು ಇರುತ್ತದೆ.
  • ರೈತರ ಮಟ್ಟಕ್ಕೆ  30,000 ದಿಂದ  ಬೆಲೆ ಪ್ರಾರಂಭವಾಗುತ್ತದೆ.
  • ಈ ಯಂತ್ರದಲ್ಲಿ ಪ್ಲಾಸ್ಟಿಕ್ ಶೀಟಿನ ಚೀಲದಲ್ಲಿ ಸಾಮಾನುಗಳನ್ನು ಇಟ್ಟು ಮುಚ್ಚಿ ಯಂತ್ರವನ್ನು  ಚಾಲನೆ ಮಾಡಿದರೆ ಅದು ಒತ್ತಲ್ಪಟ್ಟು ಉತ್ತಮ ಗಾಳಿಯಾಡದ ಪ್ಯಾಕ್ ಅಗಿ ತಯಾರಾಗುತ್ತದೆ.

HDPE ಚೀಲದಲ್ಲಿರುವ ಗಾಳಿಯನ್ನು ಯಂತ್ರದ ಮೂಲಕ ಅದುಮಿ ಹೊರತೆಗೆದು, ಆಹಾರ ಪದಾರ್ಥವನ್ನು ಕುಗ್ಗಿಸಿ ಪ್ಯಾಕ್ ಮಾಡುವುದು. ಇದು 3 ನಿಮಿಷದ ಪ್ರಕ್ರಿಯೆ.

ನೆಲಕಡಲೆಯನ್ನು ವ್ಯಾಕ್ಯೂಮ್ ಪ್ಯಾಕ್ ಮಾಡಿರುವುದು

ನೆಲಕಡಲೆಯನ್ನು ವ್ಯಾಕ್ಯೂಮ್ ಪ್ಯಾಕ್ ಮಾಡಿರುವುದು

ಎಷ್ಟು ಸಮಯ ದಾಸ್ತಾನು ಸಾಧ್ಯ:

  • ಒಣ ಮೆಣಸಿನ ಕಾಯಿಯನ್ನು ವ್ಯಾಕ್ಯೂಮ್ ಪ್ಯಾಕಿಂಗ್ ಮಾಡಿದರೆ 2  ವರ್ಷ ದಾಸ್ತಾನು ಇಡಬಹುದು.
  • ಬೀಜಗಳನ್ನು ಶೇಖರಣೆ ಮಾಡುವಾಗಲೂ 1 ವರ್ಷಕ್ಕೂ ಹೆಚ್ಚು ಕಾಲ ಸಂಗ್ರಹಿಸಿಡಬಹುದು.
  • ಒಂದು ಮೂಟೆ ಮೆಣಸು ಒಂದು ಚೀಲದ ಗಾತ್ರಕ್ಕೆ  ಬರುವ ಕಾರಣ ದಾಸ್ತಾನು ಸಹ ಸುಲಭ.
  • ಶೇಖರಿಸಲ್ಪಟ್ಟ ಸಾಮಾನುಗಳ ಬಣ್ಣ, ರುಚಿ, ಗುಣಮಟ್ಟ, ಸುವಾಸನೆ ಯಾವುದೂ ಬದಲಾಗುವುದಿಲ್ಲ
  • ಯಾವುದೇ ಶಿಲೀಂದ್ರ ಸೋಂಕು ತಗಲದು. ಯಾವುದೇ ದಾಸ್ತಾನು ಕೀಟಗಳ ಸಮಸ್ಯೆ  ಇರಲಾರದು.
  • ಶೇಖರಣೆ ಜೊತೆಗೆ  ಸಾಗಾಣಿಕೆಯೂ ಸುಲಭವಾಗುತ್ತದೆ.
ಗೋಡಂಬಿಯನ್ನು ವ್ಯಾಕ್ಯೂಮ್ ಪ್ಯಾಕ್ ಮಾಡಿರುವುದು

ಗೋಡಂಬಿಯನ್ನು ವ್ಯಾಕ್ಯೂಮ್ ಪ್ಯಾಕ್ ಮಾಡಿರುವುದು

ಯಾರಿಗೆ ಮಾಡಬಹುದು:

  • ಕೃಷಿಕರೆಲ್ಲರೂ ಇದನ್ನು ಮಾಡುವುದು ಕಷ್ಟ. ಸ್ಥಳೀಯವಾಗಿ ಸ್ವ ಉದ್ಯೋಗ ಮಾಡಬಯಸುವವರು ಇತರ ವ್ಯವಸ್ಥೆಗಳ ಜೊತೆಗೆ ಇದನ್ನು ಮಾಡಿಕೊಳ್ಳಬಹುದು.
  • ಇದಕ್ಕೆ ಸ್ಟಾರ್ಟ್ ಅಪ್ ಯೋಜನೆಯಂತೆ ಹಣಕಾಸಿನ ನೆರವೂ ಸಹ ಇದ್ದು, ಸಹಾಯಧನವೂ ಇದೆ.
ವ್ಯಾಕ್ಯೂಮ್ ಪ್ಯಾಕಿಂಗ್ ನಲ್ಲಿ ಒಣ ಮೆಣಸು

ವ್ಯಾಕ್ಯೂಮ್ ಪ್ಯಾಕಿಂಗ್ ನಲ್ಲಿ ಒಣ ಮೆಣಸು

ಯಾಕೆ ಅವಶ್ಯಕ:

  • ಮೊದಲೇ ಹೇಳಿದಂತೆ ರೈತರು ಬೆಳೆಯನ್ನು ಚೆನ್ನಾಗಿಯೇ ಬೆಳೆಯುತ್ತಾರೆ.
  • ಆದರೆ ವ್ಯಾಪಾರಿ ಮಧ್ಯವರ್ತಿಗಳು ಅದರ ಹೆಸರನ್ನು ಹಾಳು ಮಾಡುತ್ತಾರೆ. ಅದನ್ನು ತಡೆಯಲು ಇದು ಸಹಾಯಕ.
  • ರೈತರು ತಮ್ಮ ಬಳಕೆಗೆ ಬೇಕಾಗುವ ಬೀಜ ಇತ್ಯಾದಿಗಳನ್ನು ಸಹ ಇದರಲ್ಲಿ ಪ್ಯಾಕಿಂಗ್ ಮಾಡಿಟ್ಟರೆ  ಹಾಳಾದೀತು ಎಂಬ ಯಾವ ಅಂಜಿಕೆಯೂ ಇಲ್ಲ.
  • ಇದು ರಪ್ತು ಯೋಗ್ಯ ಉತ್ಪನ್ನವಾಗಿದ್ದು, ದಾಸ್ತಾನು ಮಾಡಲು ಯಾವುದೇ  ರಾಸಾಯನಿಕಗಳ ಬಳಕೆ ಅಗತ್ಯ ಇರುವುದಿಲ್ಲ.

ರೈತರು- ಸ್ವಯಂ ಸೇವಾ ಸಂಸ್ಥೆಗಳು- ಸ್ವ ಸಹಾಯ ಸಂಘಟೆನೆಗಳು ಇಂತಹ ಉತ್ಪನ್ನವನ್ನು ತಯಾರಿಸಿ ಗ್ರಾಹಕರಿಗೆ ಗುಣಮಟ್ಟದ ರುಚಿ ತೋರಿಸಿದರೆ ಇದು ಸರ್ವವ್ಯಾಪಿಯಾಗಬಲ್ಲದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!