ಈ ಬಿದಿರಿನ ಗಳಕ್ಕೆ ರೂ. 50,000 ನಂಬುತ್ತೀರಾ? ಇದು ನಿಜ.

by | Nov 10, 2020 | Value Addition - ಮೌಲ್ಯ ವರ್ಧನೆ | 0 comments

ಬಿದಿರಿನ ಒಂದು ಗಳ ಅದರಲ್ಲೂ ಮುಳ್ಳು ಇರುವ ಸ್ಥಳೀಯ ಬಿದಿರಿನ ಒಂದು ಗಳಕ್ಕೆ ಹೆಚ್ಚೆಂದರೆ 100-200 ರೂ. ಪಡೆಯುವವರು ಇರಬಹುದು. ಈ ಹಿಂದೆ ಕೆಲವರು ಮರ ಹತ್ತಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಆ ಕಾಲ ಹೋಯಿತು.ಬಿದಿರಿನ ಏಣಿಯ ಬದಲು ಅಲ್ಯೂಮೀನಿಯಂ ಏಣಿ ಬಂದು ಬಿದಿರು ತೆರೆಯ ಮರೆಯಾಯಿತು. ಹಿಂದೆ ಮನೆ ಕಟ್ಟುವಾಗ ಮರದ ಬದಲಿಗೆ ಬಿದಿರಿನ ಗಳಗಳನ್ನು ಹಾಕಿ ಛಾವಣಿ ಮಾಡುತ್ತಿದ್ದರು. ಈಗ ಬಿದಿರಿನ ಗಳದ ಛಾವಣಿ  ಮಾಡುವ ಖರ್ಚಿಗಿಂತ ಕಡಿಮೆ ಬೆಲೆಗೆ ಬೇರೆ ಸಾಮಾಗ್ರಿಗಳಿಂದ ಮಾಡಲಿಕ್ಕಾಗುತ್ತದೆ. ಅಲ್ಲೂ  ಬಳಕೆ ಇಲ್ಲದಾಯಿತು. ಬಿದಿರು ಇದ್ದರೂ, ಅದು ಎಷ್ಟು ಗಟ್ಟಿಯಾಗಿದ್ದರೂ ಅದನ್ನು ಕಡಿಯುವ ಜನರೇ ಇಲ್ಲದ ಕಾರಣ ಬಿದಿರು ಮೆಳೆಗಳು ಹೂ ಬಿಟ್ಟು ಅಲ್ಲೇ ಒಣಗಿ ಮಣ್ಣಾಗಿ ಭೂಮಿಗೆ ಸೇರುತ್ತಿರುವ ಈ ಸಮಯದಲ್ಲಿ  ಚಂದ್ರಗುತ್ತಿಯ ಹೊಸಕೊಪ್ಪದ ಸಮೀಪದ ಈರಪ್ಪ ಬೆತ್ತಿ ಎಂಬವರು ಒಂದು ಬಿದಿರಿನ ಗಳಕ್ಕೆ ಬರೋಬ್ಬರಿ 50,000 ರೂ ಸಂಪಾದನೆ ಮಾಡುತ್ತಾರೆ.

ಏನು ಬಿದಿರು -ಏನು ಬೆಲೆ:

50,000 ಬೆಲೆಯ ಬಿದಿರು-50,000 valued bamboo

  • ಬಿದಿರಿನಲ್ಲಿ ಸ್ಥಳೀಯವಾಗಿ ಕಂಡು ಬರುವ  Giant thorny Bamboo or Indian Thorny bamboo,  Bambusa Bambos ತಳಿ ಮುಳ್ಳುಗಳಿಂದ ಕೂಡಿದ್ದು, ಗಟ್ಟಿ ಮುಟ್ಟಿನಲ್ಲಿ ಅಗ್ರೇಸರ ಬಿದಿರು.
  • ಇದರ ಒಂದು ಗಳವನ್ನು ಮೆಳೆಯಿಂದ ಬಿಡಿಸುವುದೆಂದರೆ ಈಗಿನ ಕಾಲದಲ್ಲಿ ಒಬ್ಬನಿಗೆ ಕನಿಶ್ಟ 1 ದಿನವಾದರೂ ಕೆಲಸ ಆಗಬಹುದು.
  • ಜಾಗರೂಕತೆಯಲ್ಲಿ ಇಟ್ಟರೆ ಇದು ಹಲವಾರು ವರ್ಷಗಳ ಕಾಲ ಏನೂ ಆಗದು .
  • ಬಹುಷ 50-60 ವರ್ಷ ತನಕವೂ ಬಾಳ್ವಿಕೆ ಬರಬಹುದು.
  • ಇಂತಹ ಬಿದಿರನ್ನು  ಬೇರೆ ಬೇರೆ ಉಪಯೋಗಕ್ಕೆ ಬಳಸಲಿಕ್ಕೆ ಆಗುತ್ತದೆ.
  • ಅದೆಲ್ಲವೂ ನಮ್ಮ ಬುದ್ಧಿವಂತಿಕೆಯಲ್ಲಿರುವುದು.
  • ನಮ್ಮಲ್ಲಿ ಒಂದು ಗಾದೆ ಇದೆ. ಸಾಧಿಸಿದರೆ ಸಬಳ ನುಂಗಬಹುದು ಎಂದು. ಹೌದು. ಒಂದು ಕಬ್ಬಿಣದ ರಾಡನ್ನೂ ದಿನಾ ಸಾಸಿವೆಯಷ್ಟು ಹುಡಿ ಮಾಡುತ್ತಾ ತಿಂದು, ನಿಧಾನವಾಗಿ ಇಡೀ ರಾಡನ್ನು ಒಬ್ಬ ನುಂಗಿ  ಮುಗಿಸಬಹುದು.
  • ಎಲ್ಲದಕ್ಕೂ ಸಾಧನೆ ಬೇಕು.ಈರಪ್ಪ ಬೆತ್ತಿಯವರು ಬಿದಿರಿಗೆ ಮೌಲ್ಯ ತಂದಿದ್ದರೆ ಅದು ಅವರ ಸಾಧನೆಯ ಫಲದಿಂದ ಅದು ದಿನ ಬೆಳಗಾಗುವುದರೊಳಗೆ ಬರಲಿಲ್ಲ. ವರ್ಷಗಳ ಸಾಧನೆಯಿಂದ ಬಂದಿದೆ.

ಏನು ಮಾಡಿದ್ದಾರೆ:

  • ಬಿದಿರಿಗೆ ವಿಶೇಷ ತರಬೇತಿಯನ್ನು ನೀಡಿ ಅದನ್ನು ಮೌಲ್ಯವಿರುವ ಉತ್ಪನ್ನವಾಗಿ ಮಾಡಿದ್ದಾರೆ.
  • ಬಿದಿರಿನ ಮೆಳೆಯಲ್ಲಿ ಮೊಳೆಕೆ  ಬಂದು (ಕಳಲೆ) ನಿಧಾನವಾಗಿ ಬೆಳೆಯಲಾರಂಭಿಸುತ್ತದೆ.
  • ಆ ಸಮಯದಲ್ಲಿ ಇದಕ್ಕೆ ತರಬೇತಿ ಕೊಡುತ್ತಾ ಬಲಿಯುವ ತನಕವೂ ತರಬೇತಿಯನ್ನು ಮುಂದುವರಿಸಲಾಗುತ್ತದೆ.
  • ಸುಮಾರು 20-25 ಅದಿ ಬೆಳೆದ ತರುವಾಯ ಅದರ ತುದಿಯನ್ನು ತುಂಡು ಮಾಡಿ ಮೇಲೆ ಬೆಳೆಯದಂತೆ ತಡೆಯುತ್ತಾರೆ.
  • ಗಿಡವಾಗಿ ಬಗ್ಗಿದ್ದು ಮಾತ್ರ ಮರವಾದಾಗ ಬಗ್ಗಿಯೇ ಇರುತ್ತದೆ.
  • ಬಿದಿರನ್ನು ದಿನಾ ಸ್ವಲ್ಪ ಸ್ವಲ್ಪವೇ ಬಾಗಿಸಿ ತಮಗೆ ಬೇಕಾದ ಆಕಾರಕ್ಕೆ ತರಲಾಗುತ್ತದೆ.
  • ಆಕಾರ ಯಾವುದು  ಬೇಕು ಎಂಬುದನ್ನು ಅದನ್ನು ಕೊಳ್ಳುವವರು ಮುಂಚಿತವಾಗಿ ತಿಳಿಸಬೇಕು.
  • ಮುಂಚೆಯೇ ಆರ್ಡರ್ ಇರುತ್ತದೆ. ಅದಕ್ಕೆ ಮುಂಗಡವೂ ಸಿಗುತ್ತದೆ.
  • ಅ ಬಿದಿರಿನಲ್ಲಿ ಯಾರಿಗೆ  ಇದನ್ನು ಕೊಡಲು ಮಾಡಲಾಗಿದೆಯೋ ಅವಾ ಹೆಸರು ಸಹ ಆಳಿಯದಂತೆ ಬರೆಯಲಾಗಿರುತ್ತದೆ.

ಬಿದಿರು ತರಬೇತಿ –Training of bamboo

ಯಾವುದಕ್ಕೆ ಹೋಗುತ್ತದೆ :

  • ಈ ಬಿದಿರುಗಳು ಹೆಚ್ಚಾಗಿ  ಬಳಕೆಯಾಗುವುದು ಪಲ್ಲಕ್ಕಿ ತಯಾರಿಕೆಗೆ.
  • ದೇವಳಗಳಲ್ಲಿ ಅಥವಾ ಮಠಗಳಲ್ಲಿ ಮೂರ್ತಿಯನ್ನೋ ಸ್ವಾಮಿಗಳನ್ನೋ ಪಲ್ಲಕ್ಕಿಯಲ್ಲಿ ಹೊರುವ ಸಂಪ್ರದಾಯ ಇದೆ.
  • ಇದಕ್ಕೆ ಜೋಡಣೆ ಮಾಡಿದ ಮರಮಟ್ಟು ಆಗದು. ಗಟ್ಟಿ ಮುಟ್ಟಾದ ಬಿದಿರನ್ನು ಇದಕ್ಕೆ ಬಳಕೆ ಮಾಡುತ್ತಾರೆ.
  • ಈ ಉದ್ದೇಶಕ್ಕೆ ಬಳಕೆಯಾಗುವ ಬಿದಿರಿಗೆ ಎಲ್ಲಿಲ್ಲದ ಬೇಡಿಕೆ.
  • ಎಲ್ಲೆಲ್ಲಿಂದಲೋ ಇವರನ್ನು ಹುಡುಕಿಕೊಂಡೂ ಬರುತ್ತಾರೆ. ಲಕ್ಷಕ್ಕೂ ಮಿಕ್ಕಿ ಬೆಲೆ ಹೇಳುತ್ತಾರೆ.
  • ಕೊನೆಗೆ ಅದು ಚರ್ಚೆಯಲ್ಲಿ ಸಮಾಪ್ತಿಗೊಂಡು 50-60 ಸಾವಿರದ ಮೊತ್ತದಲ್ಲಿ  ಸೆಟಲ್ ಆಗುತ್ತದೆ.
  • ಒಂದು ಬಿದಿರು ಆರ್ಡರ್ ಕೊಟ್ಟವರಿಗೆ ಕೊಡಲು ಏನಿಲ್ಲವೆಂದರೂ 2 ವರ್ಷ ಕಾಲ ದನ್ನು ಬೆಳೆಯಲು ಬಿಡಬೇಕು.
  • ಅಷ್ಟೂ ಸಮಯದ ತನಕ ಅದನ್ನು ಪಳಗಿಸುತ್ತಲೇ ಇರಬೇಕು.
  • ಎಳೆದು ಕಟ್ಟುವುದು ಕಟ್ಟಿದ್ದನ್ನು ಬಿಗಿ ಮಾಡುವುದು ಮಾಡುತ್ತಿದ್ದರೆ ಆಕಾರ ವೆತ್ಯಾಸ ಉಂಟಾಗಲಾರದು.

ಬಿದಿರು ಮುರುಟುವ ಈರಪ್ಪರವರು

ಬಿದಿರನ್ನು ಪಳಗಿಸಲು ಇವರು ಹಗ್ಗ  ಮತ್ತು ಬಿದಿರಿನ ಸಲಾಖೆಗಳನ್ನು ಬಳಕೆ ಮಾಡುತ್ತಾರೆ. ಇದನ್ನು ಇನ್ನೂ ಕೆಲವು ಆಧುನಿಕ ವ್ಯವಸ್ಥೆಗಳ ಮೂಲಕವೂ ಬಾಗಿಸಬಹುದು. ಉರುಟಾದ ಬಿದಿರನ್ನು ಚೌಕಾಕಾರಕ್ಕೂ ಬರುವಂತೆ ಮಾಡಬಹುದು. ಇದನ್ನು ವಿದೇಶಗಳಲ್ಲಿ ಮಾಡುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ಶ್ರೀ. ಎ ಸಿ ಲಕ್ಷ್ಮಣ್ ಇವರು ತಮ್ಮ ಬಿದಿನ ತೋಟ ಇದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮಾಡಿದ್ದನ್ನು ಸುಮಾರು 20 ವರ್ಷಕ್ಕೆ ಹಿಂದೆ ಕಂಡಿದ್ದೇನೆ. ವಿದೇಶಗಳ ಮಾತು ಹಾಗಿರಲಿ. ನಮ್ಮೂರಿನಲ್ಲೇ ಇಂಥಹ ಸಾಧನೆ ಮಾಡುವ ಒಬ್ಬ ವ್ಯಕ್ತಿ ಇದ್ದಾರೆಂದರೆ ಹೆಮ್ಮೆಯಲ್ಲವೇ?. ಇದು ಶ್ರಮದಿಂದ ಪಡೆಯುವ ಸಂಪಾದನೆ. ರಾಜ್ಯದ ಮೂಲೆ ಮೂಲೆಗಳಿಗೆ ಇಲ್ಲಿಂದ ಬಿದಿರು ಕೊಂಡೊಯ್ಯುತ್ತಾರೆ.
ಚಿತ್ರ ಕೃಪೆ: ಪನ್ನಗ ಅನಂತರಾಮ್ ಸೊರಬ.
End of the article:—————————————————
Search words: Bamboo# Bamboo art# Bamboo carving# Soraba# Chandragutti# Erappa Beetti# Pallakki bamboo# Bamboo Training# How to get return from bamboo# Bamboo value edition#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!