ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿದರೆ ತುಂಬಾ ಅನುಕೂಲ.

by | Apr 4, 2022 | Organic Cultivation (ಸಾವಯವ ಕೃಷಿ) | 0 comments

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಬಂಧಿಸುವುದು. ಕೀಟಗಳಿಗೆ ಬೇಕಾದಷ್ಟು ಅಹಾರ ಕೊಟ್ಟು ಅವುಗಳನ್ನು ಅಲ್ಲೇ ಬಂಧಿಸುವುದು

  • ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.
  • ನಾವು ಕೈಯಿಂದ ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು.
  • ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ.

ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ. ತಜ್ಞರ ಬಳಿಗೆ ರೈತರು ಹೋಗುವುದಿಲ್ಲ. ಕೀಟ ನಾಶಕ ಮಾರಾಟ ಮಾಡುವ ಅಂಗಡಿಯವರ ಬಳಿಗೇ ನೇರವಾಗಿ ಹೋಗುತ್ತಾರೆ.  ಇಲಿಯನ್ನು ಕೊಲ್ಲಲು ಹುಲಿಯ ಅಟ್ಟಣೆ ಗೊತ್ತಲ್ಲಾ ಅದನ್ನೇ ನಾವು ಮಾಡುತ್ತಿರುವುದು.

ಯಾವ ಪರಿಸ್ಥಿತಿ ಆಗಿದೆ ಗೊತ್ತೇ?

  • ಕೀಟ ನಾಶಕ ರೋಗ ನಾಶಕ ಬಳಕೆ ಮಾಡಿ ಮಾಡಿ, ಈಗ ನಮ್ಮಲ್ಲಿ ಈ ಕೀಟ ರೋಗ ನಾಶಕಗಳು ಕೆಲಸ ಮಾಡದ ಸ್ಥಿತಿ ಬಂದಿದೆ.
  • ಫ್ಯುರಡಾನ್ ಕೀಟ ನಾಶಕಕ್ಕೆ ಕೀಟಗಳು ಸಾಯುವುದಿಲ್ಲ.
  • ರೈತರು ಫಲಿತಾಂಶ ಸಿಗಲಿಲ್ಲ ಎಂದು  ಹೆಚ್ಚು ಹೆಚ್ಚು ಬಳಕೆ ಮಾಡುತ್ತಾರೆ.
  • ಅನವಶ್ಯಕ ಬಳಕೆಯ ಪರಿಣಾಮದಿಂದ   ಕೀಟಗಳಿಗೆ ಕೀಟ ನಾಶಕಗಳು ಅಭ್ಯಾಸವಾಗಲಾರಂಬಿಸಿವೆ.

 ಕೀಟ- ರೋಗ ನಾಶಕಗಳ ತಯಾರಕರು ವಿದೇಶೀ ಬಹುರಾಷ್ಟ್ರೀಯ ಕಂಪೆನಿಗಳು. ಇವರನ್ನು ಸಾಕಲು ನಾವು ಬೆಳೆ ಬೆಳೆಯುವಂತಾಗಿದೆ. ಇದೆಲ್ಲಾ ಬೇಕೇ?  ನಮ್ಮ ಹಿರಿಯರು ಬೆಳೆ ಬೆಳೆಯಲಿಲ್ಲವೇ? ಆಗ ಈ ಕೀಟ ನಾಶಕ ,ರೋಗ ನಾಶಕ ಇತ್ತೇ? ಇರಲಿಲ್ಲ. ಅವರು ಕೆಲವು ಉಪಾಯಗಳಲ್ಲಿ ಕೃಷಿ ಮಾಡಿ ಬೆಳೆ ಉಳಿಸಿಕೊಳ್ಳುತ್ತಿದ್ದರು. ಅದರಲ್ಲಿ ಒಂದು ಬಲೆ ಬೆಳೆಗಳು.

ಚೆಂಡು ಹೂವು ಕೀಟ ದೂರ ಮಾಡುತ್ತದೆ.

ಚೆಂಡು ಹೂವು ಕೀಟ ದೂರ ಮಾಡುತ್ತದೆ.

ಬಲೆ ಬೆಳೆ ಏನು?

  • ಯಾವುದೇ ಬೆಳೆಗೆ ಬರುವ ಕೀಟಕ್ಕೆ ಮತ್ತೊಂದು ಆಕರ್ಷಣೆಯ ಸಸ್ಯ ಇರುತ್ತದೆ.
  • ಇದು ಕಳೆಯೇ ಆಗಿರಬಹುದು ಅಥವಾ ಬೆಳೆಯೇ ಆಗಿರಬಹುದು.
  • ಕೀಟಗಳು ಹೆಚ್ಚಾಗಿ  ಬಹು ಸಸ್ಯಗಳಿಗೆ  ತೊಂದರೆ ಕೊಡುವವುಗಳಾಗಿರುತ್ತವೆ.

ಉದಾಹರಣೆಗೆ ಹೇಳಬೇಕೆಂದರೆ ತುಳಸೀ ಸಸ್ಯ ಹೂ ಬಿಡುವಾಗ  ಅದರ ಪರಿಮಳ ಮಿಥೇಲ್ ಯುಜಿನಾಲ್ ರಾಸಾಯನಿಕದ ಸುವಾಸನೆಯನ್ನು ಹೊರಸೂಸುತ್ತದೆ.

  • ಈ ಸಸ್ಯವನ್ನು ಮಾವಿನ ಮರದ ಅಥವಾ ಇನ್ಯಾವುದೇ ಹಣ್ಣಿನ ಮರದ ಬಳಿ ನೆಟ್ಟರೆ ಅಲ್ಲಿಗೆ ಮೊದಲು ಹಣ್ಣು ನೊಣ  ಆಕರ್ಷಿಸಲ್ಪಡುತ್ತದೆ.
  • ಅದನ್ನು ಅಲ್ಲೇ ಸಾಯಿಸಬಹುದು. ಆಗ ಕೀಟಗಳ ಸಂತತಿ ಕಡಿಮೆಯಾಗುತ್ತದೆ.  ಕರ್ಪೂರ ತುಳಸಿ ಇಂತಹ ಗಿಡಗಳು ತಮ್ಮ ಹೂವಿನ ಸುವಾಸನೆಗೆ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ.
  • ಇದೇ ಸಿದ್ದಾಂತ – ಬಲೆ ಬೆಳೆಯದ್ದು. ಬೆಂಡೆಯ ಜೊತೆಗೆ ಹತ್ತಿ,  ಜೋಳ ಬೆಳೆದರೆ ಬೆಂಡೆಗೆ ಬರುವ ಕೀಟ ಇದಕ್ಕೆ ಬಂದು ಅಲ್ಲೇ ಆಹಾರ ತಿಂದು ಮುಖ್ಯ ಬೆಳೆ ಉಳಿಸುತ್ತವೆ.
  • ಹತ್ತಿ ಬೆಳೆಯುವಾಗ ಬದಿಯಲ್ಲಿ ಬೆಂಡೆ ಬೆಳೆದರೆ ಬೆಂಡೆಗೆ ಕಾಯಿ ಕೊರಕ ಹಾನಿ ಮಾಡುತ್ತದೆ.
ಹತ್ತಿಗೆ ಬೆಂಡೆ ಬಲೆ ಬೆಳೆ- ಬೆಂಡೆಗೆ ಹತ್ತಿ

ಹತ್ತಿಗೆ ಬೆಂಡೆ ಬಲೆ ಬೆಳೆ- ಬೆಂಡೆಗೆ ಹತ್ತಿ

ಯಾವುದು ಬಲೆ ಬೆಳೆ:

ಮುಖ್ಯ ಬೆಳೆಯ ಸುತ್ತ ಕೀಟ ಆಕರ್ಷಣೆಗಾಗಿ ನೆಡುವ  ಬೇರೆ ಕೀಟ ಆಕರ್ಷಕ ಸಸ್ಯವೇ ಬಲೆ ಬೆಳೆ. ಇಲ್ಲಿ ಬೆಂಡೆ, ಚೆಂಡು ಹೂವು, ಪುಂಡಿ, ಮುಸುಕಿನ ಜೋಳ , ಹತ್ತಿ , ಅಗಸೆ. ಅಲಸಂಡೆ,  ಹೀಗೆ ಹಲವು ಬೆಳೆಗಳಿವೆ.

ಆಯ್ಕೆ ಹೇಗೆ:

ಕೊಕ್ಕರೆ ಗಳನ್ನು ಆಕರ್ಶೀಸುವುದು

  •  ಹೇನಿನ ಕಾಟ ಜಾಸ್ತಿಯಾದರೆ ಅದಕ್ಕೆ ಆ ಬೆಳೆಯ ಸುತ್ತ ಅಲಸಂಡೆ  ಬಿತ್ತನೆ ಮಾಡಿ.
  • ಅದು ನಿಮಗೆ ಬೇಡದ ಬೆಳೆಯಾಗಿರಲಿ. ಅಲಸಂಡೆಗೆ ಹೇನುಗಳು ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ.
  • ತಮಗೆ ಬೇಕಾದ ಆಹಾರವನ್ನು ಅಲ್ಲೇ ಪಡೆಯುತ್ತವೆ.
  • ಅದನ್ನು ತಿನ್ನಲು ಬೇರೆ ಪರಭಕ್ಷಕಗಳೂ ಬರುತ್ತವೆ. ಆಗ ಅದರ ಸಂತತಿಯೂ ಅಲ್ಲೇ ಕಡಿಮೆಯಾಗುತ್ತದೆ.
  • ಹತ್ತಿ ಬೆಳೆಯುತ್ತೀರಾ ಹಾಗಾದರೆ ಬದಿಯಲ್ಲಿ ಬೆಂಡೆ ಹಾಕಿ. ಬೆಂಡೆಗೆ ಕಾಯಿ ಕೊರಕ, ಹೇನು ಬೇಗ ಬರುತ್ತದೆ.
  • ಅಲ್ಲೇ ಅವುಗಳನ್ನು ಕೊಂದು  ಬಿಡಿ. ಸಂಖ್ಯೆ ಕಡಿಮೆಯಾಗಿ  ಹತ್ತಿಗೆ ಕೀಟ ಸಮಸ್ಯೆ ಕಡಿಮೆಯಾಗುತ್ತದೆ.
  • ಜೋಳವೂ ಸಹ ಇದೇ ಕೆಲಸವನ್ನು ಮಾಡುತ್ತದೆ. ಜೋಳದ  ಹೊಲದಲ್ಲಿ ಅಲ್ಲಲ್ಲಿ ಬೆಂಡೆ ಬೆಳೆದರೆ  ಜೋಳಕ್ಕೆ ಕೀಟ ಸಮಸ್ಯೆ ಕಡಿಮೆಯಾಗುತ್ತದೆ.

ಬಹುತೇಕ ಬೆಳೆಗಳ  ಕೀಟ ನಿಯಂತ್ರಣಕ್ಕೆ ಚೆಂಡು ಹೂವಿನ ಪರಿಮಳ ಪರಿಣಾಮಕಾರಿ. ಇದರ ಬೇರು ಹೋದಲ್ಲಿ ನಮಟೋಡು ಇಲ್ಲದಾಗುತ್ತದೆ.  
ನಮ್ಮ ಸುತ್ತಮುತ್ತ ಹಲವಾರು ಕೀಟ ಆಕರ್ಷಕ ಸಸ್ಯಗಳು ಇರುತ್ತವೆ. ಇವುಗಳನ್ನು ನಾವು  ಗಮನಿಸಬೇಕು. ಹೇನು- ಹಿಟ್ಟು ತಿಗಣೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ  ದಾಸವಾಳ ಗಿಡ ಆಕರ್ಷಿಸುತ್ತದೆ. ಹೀಗೆ ಬೇರೆ ಬೇರೆ ಗಿಡಗಳನ್ನು ಗುರುತಿಸಿ ಕೀಟ ನಾಶಕದ ಬಳಕೆಯನ್ನು ಕಡಿಮೆ ಮಾಡಬಹುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!