ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು?

by | Mar 4, 2022 | Fruit Crop (ಹಣ್ಣಿನ ಬೆಳೆ), Banana (ಬಾಳೆ) | 0 comments

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಬಾಳೆ ಅಲ್ಪಾವಧಿ ಬೆಳೆಯಾಗಿದ್ದು ಅಧಿಕ ಪೋಷಕಾಂಶ ವನ್ನು ಬಯಸುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ.

 • ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ.
 • ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ.
 • ಗೊನೆ ಹೊರ ಬೀಳುವ ಸಮಯದಲ್ಲಿ  ಮತ್ತು ಬಲಿಯುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ.
 • ಬಾಳೆಯ ಶರೀರಕ್ಕನುಗುಣವಾಗಿ ಪೋಷಕಗಳನ್ನು  ಒದಗಿಸಿದಾಗ  ಗರಿಷ್ಟ ಗಾತ್ರದ ಗೊನೆಯನ್ನು ಪಡೆಯಲು ಸಾಧ್ಯ.

ಸಾವಯವ ಗೊಬ್ಬರಗಳ ಮೂಲಕ ಬಾಳೆ ಬೆಳೆಯುವುದು ಸ್ವಲ್ಪ ಕಷ್ಟ. ಹಾಗೆಂದು ಅಸಾಧ್ಯವೆಂದಲ್ಲ. ಮಣ್ಣಿನ ಗುಣಮಟ್ಟ ಮತ್ತು ತೀಕ್ಷ್ಣ ಸಾವಯವ ಗೊಬ್ಬರಗಳನ್ನು  ಒದಗಿಸಿ ಬೆಳೆ ಪಡೆಯಬಹುದು.

ಉತ್ತಮ ಬಾಳೆ ಗೊನೆ
 • ಕೊಟ್ಟಿಗೆ  ಗೊಬ್ಬರ ಮುಂತಾದವುಗಳು ಸಸ್ಯಕ್ಕೆ  ಲಭ್ಯ ಸ್ಥಿತಿಗೆ ತಲುಪುವ ಸಮಯಕ್ಕೆ  ಬಾಳೆಯ ಒಂದು ಹಂತದ ಬೆಳೆವಣಿಗೆ  ಆಗಿರುತ್ತದೆ.
 •  ವಾಣಿಜ್ಯಿಕ ಬಾಳೆ ಬೇಸಾಯಕ್ಕೆ ಸಾವಯವದ ಜೊತೆಗೆ  ರಾಸಾಯನಿಕ ಗೊಬ್ಬರಗಳ ಬಳಕೆ ಅಗತ್ಯವಾಗಿರುತ್ತದೆ.

ಮಣ್ಣಿನ ಗುಣದ ಮೇಲೆ  ಗೊಬ್ಬರದ ಪ್ರಮಾಣ ಅವಲಂಭಿತವಾಗಿದೆ. ಫಲವತ್ತಾದ ಮಣ್ಣಿಗೆ  ಸ್ವಲ್ಪ ಕಡಿಮೆ  ಪೋಷಕಾಂಶಗಳು ಸಾಕಾಗುತ್ತದೆ. ಫಲವತ್ತತೆ ಇಲ್ಲದ ಮಣ್ಣಿಗೆ ಹೆಚ್ಚು ಬೇಕಾಗುತ್ತದೆ. ಅಧಿಕ ಇಳುವರಿ ಕೊಡಬಲ್ಲ ಬಾಳೆಗಳಾದ ಕ್ಯಾವೆಂಡೀಶ್ ತಳಿಗಳಿಗೆ  ಹೆಚ್ಚು ಗೊಬ್ಬರವೂ , ಸ್ಥಳೀಯ ತಳಿಗಳಿಗೆ  ಸ್ವಲ್ಪ ಕಡಿಮೆಯೂ ಸಾಕಾಗುತ್ತದೆ.

 • ಪ್ರಮುಖ ವಾಣಿಜ್ಯ ತಳಿಯಾದ ಪುಟ್ಟು ಬಾಳೆಗೆ ಕ್ಯಾವೆಂಡೀಶ್ ತಳಿಗೆ ಕೊಡಮಾಡಲ್ಪಡುವ ಗೊಬ್ಬರದ ಪ್ರಮಾಣವನ್ನೇ ಅನುಸರಿಸಿದರೆ, ಉತ್ತಮ ಗೊನೆ ಬರುತ್ತದೆ.

ಪೋಷಕಾಂಶಗಳ ಪ್ರಮಾಣ( 1 ಬಾಳೆಗೆ):

 • ನಾಟಿ ಮಾಡುವಾಗ : 125 ಗ್ರಾಂ ಸೂಪರ್ ಫೋಸ್ಫೇಟ್ ಅಥವಾ 50 ಗ್ರಾಂ DAP

105 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ .
30 ದಿನದ ನಂತರ          :  60   ಗ್ರಾಂ ಯೂರಿಯಾ
70 ನೇ ದಿನಕ್ಕೆ                 :  65 ಗ್ರಾಂ ಯೂರಿಯಾ
50  ಗ್ರಾಂ DAP  ಮತ್ತು 125  ಗ್ರಾಂ ಸೂಪರ್ ಫೋಸ್ಫೇಟ್.
125  ನೇ ದಿನಕ್ಕೆ            :  60 ಗ್ರಾಂ ಯೂರಿಯಾ
                                           ಸೂಪರ್ ಫೋಸ್ಫೇಟ್ 125  ಗ್ರಾಂ  ಮತ್ತು DAP 50  ಗ್ರಾಂ.
165 ನೇ ದಿನಕ್ಕೆ              :  65 ಗ್ರಾಂ ಯೂರಿಯಾ ಮತ್ತು 105 ಗ್ರಾಂ ಮ್ಯುರೇಟ್ ಆಫ್
ಪೊಟ್ಯಾಶ್.
210  ನೇ ದಿನಕ್ಕೆ            :  ಯೂರಿಯಾ  65  ಗ್ರಾಂ
255 ನೇ ದಿನಕ್ಕೆ             :  65 ಗ್ರಾಂ ಯೂರಿಯಾ ಮತ್ತು 105 ಗ್ರಾಂ ಮ್ಯುರೇಟ್ ಆಫ್
ಪೊಟ್ಯಾಶ್
300  ನೇ ದಿನಕ್ಕೆ           :   105 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಮತ್ತು 60 ಗ್ರಾಂ
                                           ಯೂರಿಯಾ.

ಬಾಳೆ ಗೊನೆ ಕೊಯಿಲು ಮಾಡುವ ತನಕ ಗೊಬ್ಬರಗಳನ್ನು ಈ ದಿನಗಲ್ಲಿ ಯಾವುದೇ ನಿರ್ಲಕ್ಷ್ಯ ಮಾಡದೆ  ಕೊಡಬೇಕು.

 • ಗೊಬ್ಬರಗಳನ್ನು ಮಣ್ಣಿನ ಮೇಲು ಪದರದಲ್ಲಿ ಬಾಳೆಯ ಸುತ್ತ 50  ಸೆಂ ಮೀ. ವ್ಯಾಪ್ತಿಯಲ್ಲಿ ಗೊಬ್ಬರಗಳನ್ನು ಕೊಡಬೇಕು.
 • ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಕೊಡುವುದಾದರೆ ವಾರಕ್ಕೊಮ್ಮೆ ಯಂತೆ ಕೊಡಬೇಕು.
ಉತ್ತಮ ಬಾಳೆ ಗೊನೆಗೆ ಇಲ್ಲಿ ಗೊಬ್ಬರ ಕೊಡಿ.

 ಸಾಲ್ಯುಬಲ್ ಬೊಬ್ಬರಗಳು:

 • ನಾಟಿ ಮಾಡುವಾಗ :  125 ಗ್ರಾಂ ಸೂಪರ್ ಫೋಸ್ಫೇಟ್  ಮತ್ತು  105 ಮ್ಯುರೇಟ್ ಆಫ್ ಫೊಟ್ಯಾಶ್ ಮತ್ತು  50 ಗ್ರಾಂ DAP   ಮೇಲು ಗೊಬ್ಬರವಾಗಿ ಕೊಡಿ.
 • ನಾಲ್ಕು ಎಲೆ ಬರುವಾಗ 1 ಕಿಲೋ 19:19:19  ಗೊಬ್ಬರವನ್ನು 100 ಲೀ. ನೀರಿನಲ್ಲಿ ಕರಗಿಸಿ ಎಲೆಗಳಿಗೆ ಸಿಂಪರಣೆ ಮಾಡಿ.
 • 20 ನೇ ದಿನಕ್ಕೆ   ಗಿಡ ಒಂದಕ್ಕೆ 50 ಗ್ರಾಂ ಯೂರಿಯಾ ಕೊಡಿ.
 • ನಂತರ 125 ದಿನದ ತನಕ 12-61:0  ವಾರಕೊಮ್ಮೆ ಪ್ರತೀ ಗಿಡಕ್ಕೆ 5 ಗ್ರಾಂ ಪ್ರಮಾಣದಲ್ಲಿ ಕೊಡಿ.
 • 50  ನೇ ದಿನಕ್ಕೆ ಮತ್ತು 75 ನೇ ದಿನಕ್ಕೆ ಪ್ರತೀ ಬಾಳೆಗೆ 25 ಗ್ರಾಂ ನಂತೆ ಯೂರಿಯಾ ಮಿಶ್ರಣ ಮಾಡಿ ಕೊಡಿ.
 • 150  ನೇ ದಿನದ ತರುವಾಯ 13:0:45  ಗೊಬ್ಬರವನ್ನು ಪ್ರತೀ ವಾರಕ್ಕೆ 5  ಗ್ರಾಂ ಪ್ರಮಾಣದಲ್ಲಿ ಗೊನೆ ಕೊಯಿಲಿನ ತನಕ ಮುಂದುವರಿಸಿರಿ.
 • 180  ಮತ್ತು  200  ಮತ್ತು 255 ನೇ ದಿನಕ್ಕೆ  ಪ್ರತೀ ಬಾಳೆಗೆ 25  ಗ್ರಾಂ ಪ್ರಮಾಣದಲ್ಲಿ ಯೂರಿಯಾ ಕೊಡಿ.
 • ಬಾಳೆಗೆ 75 ದಿನ ಆಗುವಾಗ 1 ಕಿಲೋ  19:19:19  ಗೊಬ್ಬರ ಮತ್ತು ಅದಕ್ಕೆ 100 ಲೀ ನೀರು 100  ಗ್ರಾಂ ಸೂಕ್ಷ್ಮ ಪೋಷಕಾಂಶವನ್ನು ಬೆರೆಸಿ ಎಲೆಗಳಿಗೆಲ್ಲಾ ಅಡಿಗೂ ಮೇಲಿಗೂ  ಸಿಂಪಡಿಸಿ.
 • 125  ನೇ ದಿನಕ್ಕೂ ಇದನ್ನೇ ಮುಂದುವರಿಸಿ.

165  ನೇ ದಿನಕ್ಕೆ 1 ಕಿಲೋ ಯೂರಿಯಾ ಫೋಸ್ಫೇಟ್ ಗೆ ಮೆಗ್ನೀಶಿಯಂ ಸೂಕ್ಷ್ಮ ಪೋಷಕಾಂಶ 100 ಗ್ರಾಂ ಸೇರಿಸಿ 100 ಲೀ. ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಿ.


175 ದಿನದ ನಂತರ ಪ್ರತೀ ತಿಂಗಳಿಗೊಮ್ಮೆ  ಸಿಂಪರಣೆಗೆ 13:0:45 ನ್ನು ಬಳಸಿ. ಅದಕ್ಕೆ   ಲೀ. ಗೆ  1 ಗ್ರಾಂ ನಂತೆ ಸೂಕ್ಷ್ಮ ಪೋಷಕಾಂಶ ಸೇರಿಸಿರಿ.

ಬಾಳೆಗೆ 45  ದಿನ ಆಗುವಾಗ 100 ಲೀ. ನೀರಿಗೆ  1 ಕಿಲೋ ಕ್ಯಾಲ್ಸಿಯಂ ನೈಟ್ರೇಟ್ ಹಾಕಿ ಸಿಂಪರಣೆ ಮಾಡಿ.

 • ಗೊನೆ ಹಾಕಿ ಕುಂಡಿಗೆ ಕಡಿಯುವ ಸಮಯದಲ್ಲಿ ಮತ್ತೊಮ್ಮೆ ಇದನ್ನು ಸಿಂಪರಣೆ ಮಾಡಿ.

ಬಾಳೆ ಬೆಳವಣಿಗೆ ಆಗುವಾಗ ಹೆಚ್ಚು ಕಾಯಿ ಪುಷ್ಟಿಯಾಗಲು   100 ಲೀ. ಸಿಂಪರಣಾ ದ್ರಾವಣಕ್ಕೆ  ( ಹಿಂದೆ ಹೇಳಿದ 13:00:45 ಮತ್ತು ಸೂಕ್ಷ್ಮ ಪೋಷಕಾಂಶದ ಜೊತೆ)  5  ಗ್ರಾಂ ಜಿಬ್ಬರಲಿಕ್ ಆಮ್ಲ ಸೇರಿಸಿರಿ. ( ಯಾವುದೇ ಕಾರಣಕ್ಕೆ ಇದನ್ನು ಹೆಚ್ಚು ಮಾಡಬೇಡಿ)

 • ಬನನಾ ಸ್ಪೆಷಲ್ ಬಳಸುವುದಿದ್ದರೆ  ಸೂಕ್ಷ್ಮ ಪೋಷಕಾಂಶ ಬೇಡ.

ಈ ಪೋಷಕಾಂಶ ನಿರ್ವಹಣೆಯಲ್ಲಿ ಕ್ಯಾವೆಂಡಿಶ್ ತಳಿಯ ಬಾಳೆ 35 -40 ಕಿಲೋ ಮತ್ತು ಪುಟ್ಟು ಬಾಳೆ   20-25 ಕಿಲೋ ಹಾಗೂ ನೇಂದ್ರ 15-18  ಕಿಲೋ ತನಕ ಇಳುವರಿ ಕೊಡಬಲ್ಲುದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!