ಕಾಫೀ ಬೆಳೆಗೆ ಬಾಧಿಸಿಗೆ ಕಪ್ಪು ಕೊಳೆ ರೋಗ.

coffee berri

ಕಾಫೀ ಬೆಳೆಗೆ ಎರಡನೇ ಅತೀ ದೊಡ್ಡ ನಷ್ಟ ತಂದೊಡ್ಡುವ ರೋಗ ಕಪ್ಪು ಕೊಳೆ.  ಇದನ್ನು  Black rot  disease ಎಂದು ಕರೆಯುತ್ತಾರೆ. ಮಳೆಗಾಗದಲ್ಲಿ ಯಾವಾಗಲೂ ಬರಬಹುದು. ಆದರೆ ಮುಂಗಾರು ಮಳೆ ಮಧ್ಯಭಾಗ ಮತ್ತು ಕೊನೆ ಭಾಗದಲ್ಲಿ ಇದರ ತೊಂದರೆ ಹೆಚ್ಚು. ಇದು ಅರೇಬಿಕಾ ಕಾಫಿಗೆ ಹೆಚ್ಚಾಗಿಯೂ ರೋಬಸ್ಟಾಕ್ಕೆ ಸ್ವಲ್ಪ ಕಡಿಮೆ. ಈ ರೋಗ ಬಂದರೆ 10-30% ಫಸಲು ಕಡಿಮೆಯಾಗುತ್ತದೆ. 

Initial stage of kole roga

 •  ಆಷಾಢ ಕಳೆದು ಶ್ರಾವಣ ಬಂತೆಂದರೆ ಒಮ್ಮೊಮ್ಮೆ ಮಳೆ ಮತ್ತು ಬಿಸಿಲು ಇರುತ್ತದೆ.
 •  ಆಗಲೇ  ಹೆಚ್ಚಾಗಿ ವಾಯುಭಾರ ಕುಸಿತವೇ ಮುಂತಾದ ಸನ್ನಿವೇಶಗಳು ಉಂಟಾಗಿ ಮತ್ತೆ ಎಡೆಬಿಡದೆ ಒಂದೆರಡು ದಿನ ಸತತವಾಗಿ ಮಳೆ ಸುರಿಯುವುದು ಮಾಮೂಲು.
 • ಆ ತನಕ ಯಾವುದೇ ರೋಗ ಸೂಚನೆ ಇಲ್ಲದಿದ್ದರೂ ಮಳೆ ಬಂದ ತಕ್ಷಣ ಈ ಸಮಸ್ಯೆ ಎದುರಾಗುತ್ತದೆ.
 • ಈ ವರ್ಷ ಸಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ಈ ಕೊಳೆರೋಗ ಉಂಟಾಗಿದೆ.

ರೋಗ ಹೇಗೆ ಬರುತ್ತದೆ:

 • ವಾತಾವರಣ ತುಂಬಾ ಶೀತವಾಗಿರುವ ಸಮಯ, ಗಾಳಿ , ಜುಮುರು ಮಳೆ, ದಟ್ಟವಾದ ಮೋಡ ಇರುವಾಗ  ಈ ರೋಗದ ಶಿಲೀಂದ್ರಗಳ ಬೆಳೆವಣಿಗೆ ಹೆಚ್ಚು

leaf rot by rain

 • ವಾತಾವರಣದಲ್ಲಿ 95-100% ಆರ್ಧ್ರತೆ ಇದ್ದಾಗ ಇದು ಬರುತ್ತದೆ.
 • ಇದಕ್ಕೆ  Koleroga noxia Donk ಎಂಬ ಶಿಲೀಂದ್ರ ಕಾರಣ. ಇದನ್ನು  ಈ ಹೆಸರುಗಳಿಂದಲೂ ಕರೆಯಲಾಗುತ್ತದೆ.(Pellicularia koleroga Cke, Ceratobasidium anceps, Corticium koleroga )
 • ಪ್ರಾರಂಭದಲ್ಲಿ ಬಲಿಯುತ್ತಿರುವ ಎಲೆಗಳಲ್ಲಿ  ಅಲ್ಲಲ್ಲಿ ಕಪ್ಪು ಕಲೆಗಳು ಕಾಣಿಸುತ್ತವೆ.
 • ನಂತರ ಅದು ಕಾಯಿಗಳಿಗೂ ಪ್ರಸಾರವಾಗುತ್ತದೆ.ನಂತರ ರೆಂಬೆಯ ಸಿಪ್ಪೆಯ ಮೇಲ್ಮೈಯಲ್ಲಿ ಬೆಳೆದು ಇಡೀ ಗೆಲ್ಲು ಸಾಯುತ್ತದೆ.
 • ಮೊದಲಿಗೆ ಎಲೆಗಳು ಉದುರುತ್ತವೆ. ಗೆಲ್ಲುಗಳ ಸಿಪ್ಪೆಯ ಮೇಲೆ ಶಿಲೀಂದ್ರದ ತಂತು ಜಾಲವು ಕಂಡು ಬರುತ್ತದೆ.
 • ಇದು ಹರಡುತ್ತಾ ಇರುತ್ತದೆ. ರೋಗ ಪಿಡಿತ ಸಸ್ಯದ ಎಲೆಗಳು ಮತ್ತು ಕಾಯಿಗಳು ಉದುರುತ್ತವೆ.

ನಿಯಂತ್ರಣ ವಿಧಾನ:

Berri rot

 • ಕಾಫೀ ಗಿಡಗಳಿಗೆ ಈ ರೋಗ ಬಾಧಿಸಿದರೆ ಅಂತಹ ಗಿಡದ ಉದುರಿದ ಎಲೆ, ಕಾಯಿಗಳನ್ನು ಸ್ಥಳದಿಂದ ತೆಗೆದು ಅದನ್ನು ಸುಡುವುದು  ಅತೀ ಅಗತ್ಯ.
 • ಇದನ್ನು ಮಾಡದಿದ್ದರೆ ರೋಗ ನಿಯಂತ್ರಣ  ತುಂಬಾ ಕಷ್ಟವಾಗುತ್ತದೆ.
 • ಈ ರೋಗ ಬಾರದಿರುವಂತೆ ತಡೆಯುವುದೇ ಪ್ರಮುಖ ನಿಯಂತ್ರಣೋಪಾಯ.
 • ಮಳೆಗಾಲದ ಅವಧಿಯಲ್ಲಿ ಗಿಡಗಳ  ರೆಕ್ಕೆ ಗೆಲ್ಲುಗಳು ನೆಲಮಟ್ಟಕ್ಕೆ ಬಾಗಿದ್ದರೆ ಅದರ ತುದಿಯನ್ನು ಸ್ವಲ್ಪ ಮುರಿದು ನೆಲಕ್ಕೆ ಸಮೀಪ ಇರದಂತೆ ನೊಡಿಕೊಳ್ಳಬೇಕು.
 • ಎಲ್ಲಾ ರೋಗಕಾರಗಳೂ ನೆಲದ ಮಣ್ಣಿನ ಮೂಲಕವೇ ಬರುವ ಕಾರಣ ಇದನ್ನು ಅಗತ್ಯವಾಗಿ ಮಾಡಬೇಕು.
 • ಗಿಡದ ನೆತ್ತಿ ಸವರಿ ಗೆಲ್ಲುಗಳು, ಎಲೆಗಳು ನಿಬಿಡವಾಗದಂತೆ ನೋಡಿಕೊಳ್ಳಬೇಕು.
 • ಒಣಗಿದ ರೆಂಬೆಗಳು,  ಸುತ್ತಮುತ್ತಲಿನ ಮರದಿಂದ ಉದುರಿದ ಒಣಗಿದ ಎಲೆಗಳನ್ನು ತೆಗೆಯಬೇಕು.

ಮಳೆಗಾಲ ಪ್ರಾರಂಭವಾಗುವಾಗುವ ಸಮಯದಲ್ಲಿ ಒಮ್ಮೆ ಚೆನ್ನಾಗಿ ಕಾಫೀ ಗಿಡದ ಎರಡೂ ಭಾಗಕ್ಕೂ ತಗಲುವಂತೆ ಶೇ.1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಿರಬೇಕು. ಇದಾದ ನಂತರ ಆಷಾಢ ಕಳೆಯುತ್ತಿದ್ದಂತೆ ಮತ್ತೊಮ್ಮೆ ಶೇ.1  ರ ಬೋರ್ಡೋ (Bordeaux mixture) ದ್ರಾವಣವನ್ನು ಕಾಯಿಗಳಿಗೆ, ಎಲೆಯ ಅಡಿ ಭಾಗಕ್ಕೆ ಚೆನ್ನಾಗಿ ತಗಲುವಂತೆ ಸಿಂಪರಣೆ ಮಾಡಬೇಕು.

Spredded disease to stem

 • ಎರಡೂ ಸಿಂಪರಣೆಗಳನ್ನು ಎಲೆಯ ಅಡಿ ಭಾಗಕ್ಕೆ ತಗಲುವಂತೆ ಸಿಂಪರಣೆ ಮಾಡಿದಲ್ಲಿ ಕಪ್ಪು ಕೊಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
 • ಎಲೆಯ ಅಡಿ ಭಾಗಕ್ಕೆ ಸಿಂಪರಣೆ ಮಾಡುವುದರಿಂದ ಬೋರ್ಡೋ ದ್ರಾವಣ ಹೆಚ್ಚು ಸಮಯದ ತನಕ  ಅಂಟಿಕೊಂಡು ಉಳಿಯುತ್ತದೆ.
 • ಎಲೆ ತುಕ್ಕು (Leaf rust disease) ರೋಗವೂ ಈ ಸಮಯದಲ್ಲಿ ಬೋರ್ಡೋ ದ್ರಾವಣ ಸರಿಯಾಗಿ ಸಿಂಪರಣೆ ಮಾಡಿದರೆ ಕಡಿಮೆಯಾಗುತ್ತದೆ.

ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ಬೋರ್ಡೋ ದ್ರಾವಣದ ಬದಲು ಬೇರೆ ಶಿಲೀಂದ್ರ ನಾಶಕ ಬಳಕೆ ಮಾಡುವುದಾದರೆ SAAF ಶಿಲೀಂದ್ರ ನಾಶಕವನ್ನು ( ಮ್ಯಾಂಕೋಜೆಬ್ ಮತ್ತು ಕಾರ್ಬನ್ ಡೈಜಿಮ್ ಎರಡೂ ಇರುವ) ಸಿಂಪರಣೆ ಮಾಡಬೇಕು. ಬಾಧಿತ ಸಸ್ಯಗಳಿಗೆ ಇದನ್ನು ಸಿಂಪಡಿಸಿದರೆ ಉತ್ತಮ. ಬರೇ ಕಾರ್ಬನ್ ಡೈಜಿಮ್ ಗೆ ಶಿಲೀಂದ್ರಗಳು ನಿರೋಧಕ ಶಕ್ತಿ ಪಡೆದ ಕಾರಣ ಈ ಶಿಲೀಂದ್ರನಾಶಕ ಹೆಚ್ಚು ಫಲಕಾರಿ.

ಮುನ್ನೆಚ್ಚರಿಕೆ:

 • ಮಳೆಗಾಲಕ್ಕೆ ಮುಂಚೆ ತೋಟದಲ್ಲಿ  ಇರುವ ಮರಮಟ್ಟುಗಳ ಗೆಲ್ಲು ಸವರಿರಬೇಕು.
 • ಕೆಲವು  ಬೇಗ ಗೆಲ್ಲು ಬೆಳೆಯುವ ಮರಗಳಿದ್ದರೆ ಅಂತಹ ಮರದ ಗೆಲ್ಲನ್ನು ಮತ್ತೊಮ್ಮೆ ತೆಗೆಯಬೇಕಾಗುತ್ತದೆ.
 • ಅಡಿಕೆ ತೋಟದಲ್ಲಿ ಕಾಫೀ ಬೆಳೆಯುವವರು ಅಡಿಕೆಗೆ ಕೊಳೆ ಬಂದಾಗ ಕಾಫಿಗೂ ಬರುವ ಸಾಧ್ಯತೆ ಇರುತ್ತದೆ.
 • ಮೆಣಸಿನ ಬಳ್ಳಿಗೆ ರೋಗ ಬಂದರೂ ಕಾಫಿಗೆ ಇದು ಹಬ್ಬಬಹುದು.

ರೋಗ ಬರುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಬಾರದಂತೆ ಮಾಡುವುದು ಉತ್ತಮ ವಿಧಾನ. ರೋಗ ಬಂದ ನಂತರ ಅದು ಚೆನ್ನಾಗಿ ಬಿಸಿಲು ಬಿದ್ದ ನಂತರವೇ ಹತೋಟಿಗೆ ಬರುತ್ತದೆ. ಚೆನ್ನಾಗಿ ಬಿಸಿಲು ಇರುವ ಸಮಯದಲ್ಲಿ ಸಿಂಪರಣೆ ಮಾಡಬೇಕು.
end of the article: ————————————————————————–
search words: coffee crop# Coffee disease# Fungal disease of coffee# serious disease of coffee# Bordeaux mixture # Koleroga# Black rot of coffee# 

Leave a Reply

Your email address will not be published. Required fields are marked *

error: Content is protected !!