ಅಡಿಕೆಗೆ ಮತ್ತೆ ಬೆಲೆ ಏರಿಕೆ ಪ್ರಾರಂಭ- ಇಂದು ದೊಡ್ಡ ಜಂಪ್.

ಉತ್ತಮ ಚಾಲಿ ಅಡಿಕೆ

ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ ಗೂಬೆ ಕೂಗಲು ಪ್ರಾರಂಭವಾಗಿದೆ. ಚಾಲಿ 43,000 ದಲ್ಲಿದ್ದ ಬೆಲೆ 45,000.ಕ್ಕೆ ಏರಿದೆ. ಮುನ್ಸೂಚನೆಗಳು ಅಡಿಕೆ ಧಾರಣೆಯನ್ನು ಮೇಲೆ ಒಯ್ಯುವ ಸಂಭವವಿದೆ.

ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಬೇಡಿಕೆ ಪ್ರಾರಂಭವಾಗಿದೆ ಎಂಬ ವದಂತಿ ಇದೆ. ಕೊರೋನಾ ಲಾಕ್ ಡೌನ್ ಸಮಯದಿಂದಲೂ ವ್ಯಾಪಾರಿಗಳಲ್ಲಿ  ದಾಸ್ತಾನು ಉಳಿದಿದೆ. ಆ ಕಾರಣದಿಂದ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.

  • ಚಾಲಿ ಅಡಿಕೆಗೆ ಜೂನ್ ತಿಂಗಳ ಕೊನೆಗೆ ಬೆಲೆ ಏರಿಕೆ ಪ್ರಾರಂಭವಾದುದು, ಜುಲೈ ಮೊದಲ ವಾರದ ನಂತರ ಸ್ವಲ್ಪ ಉಮೇದು ಕಡಿಮೆಯಾಗಿತ್ತು.
  • ಆದರೆ ಈಗ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ಇಂದಿನಿಂದ ಬೆಲೆ ಏರಿಕೆ ಪ್ರಾರಂಭವಾಗಲಿದೆ.
  • ಇನ್ನೂ ಮೂರು ನಾಲ್ಕು ತಿಂಗಳ ತನಕ ಇದೇ ರೀತಿ ದರ ಎರಿಕೆ ಸಾಧ್ಯತೆ ಇದೆ ಎಂಬುದಾಗಿ ವರ್ತಕರು ಸೂಚನೆ ಕೊಡುತ್ತಾರೆ.
  • ಬೆಳೆಗಾರರು ಅಡಿಕೆ ಮಾರಾಟವನ್ನು ಸ್ವಲ್ಪ ಮುಂದೂಡುವುದರಿಂದ ಲಾಭವಾಗಲಿದೆ.
ಚಾಲಿ ಅಡಿಕೆ ಹೆಕ್ಕುವಿಕೆ

ಇಂದಿನ ಅಡಿಕೆ ಧಾರಣೆ:

ಇಂದಿನಿಂದ ಕ್ಯಾಂಪ್ಕೋ ತನ್ನ ಅಡಿಕೆ ಧಾರಣೆಯನ್ನು ಪ್ರಕಟಿಸಲು ಮುಂದಾಗಿದೆ. ಆದು ಅಡಿಕೆ ಧಾರಣೆ ಮೇಲೇರುವ ಮುನ್ಸೂಚನೆಯಂತೆ ಕಾಣಿಸುತ್ತಿದೆ.

  • ಚಾಲಿ ಅಡಿಕೆ ಹೊಸತು:ಕ್ವಿಂಟಾಲು ರೂ. 40,000-45,000 .
  • ಹಳೆ ಚಾಲಿ  ಕ್ವಿಂಟಾಲು ರೂ. 50,000-52,000.
  • ಖಾಸಗಿ ವ್ಯಾಪಾರಿಗಳಲ್ಲಿ ಈ ದರ ಕ್ವಿಂಟಾಲು ಮೇಲೆ ರೂ. 500 ಹೆಚ್ಚು ಇದೆ.
  • ಮಂಗಳೂರು ಸುತ್ತಮುತ್ತ  ದರ 500-1000 ಕಡಿಮೆ ಇದೆ.
  • ಡಬ್ಬಲ್ ಚೊಳ್: ಕ್ವಿಂಟಾಲು ರೂ. 50,000-52,000
  • ಹಳೆ ಪಟೋರಾ: ಕ್ವಿಂಟಾಲು ರೂ. 18,000-27,000
  • ಹೊಸ ಪಟೋರಾ: ಕ್ವಿಂಟಾಲು ರೂ.  18,000-27,000
  • ಹಳೆ ಉಳ್ಳಿ ಗಡ್ಡೆ: ಕ್ವಿಂಟಾಲು ರೂ.  18,000-27,000
  • ಹೊಸ ಉಳ್ಳಿ ಗಡ್ಡೆ: ಕ್ವಿಂಟಾಲು ರೂ. 18,000-27,000
  • ಹಳೆ ಕರಿಗೋಟು: 18,000-27,000
  • ಹೊಸ ಕರಿಗೋಟು: ಕ್ವಿಂಟಾಲು ರೂ. 18,000-27,000
  • ಕೊಕ್ಕೋ ಹಸಿ ಬೀಜ ಕಿಲೋ ರೂ:40-45
  • ಕೊಕ್ಕೋ ಒಣ ಬೀಜ  ಕಿಲೋ ರೂ. 165-183
  • ಕರಿ ಮೆಣಸು ಕ್ವಿಂಟಾಲು ರೂ.30,000-39,000

ರಬ್ಬರ್;

  • RSS 4:ಕಿಲೊ.ರೂ. 166.50
  • ಲಾಟ್ : ಕಿಲೊ ರೂ. 155.00
  • ಸ್ಕ್ರಾಪ್ 1: 104.00
  • ಸ್ಕ್ರಾಪ್ 2: 94.00

ಕೆಂಪಡಿಕೆ:

  • ರಾಶಿ ಇಡಿ ಕ್ವಿಂಟಾಲು ರೂ. 40,800-42,250>
  • ಬೆಟ್ಟೆ ಕ್ವಿಂಟಾಲು ರೂ.45,800-46,100
  • ಗೊರಬಲು ಕ್ವಿಂಟಾಲು ರೂ.34,160-34,500
  • ಸರಕು ಕ್ವಿಂಟಾಲು ರೂ. 52,000-74,000 ತನಕ ಇದೆ.
  • ಸಿಪ್ಪೆ ಗೋಟು: ಕ್ವಿಂಟಾಲು ರೂ.18,000-20,500
ಒಣಗುತ್ತಿರುವ ಕೆಂಪಡಿಕೆ

ಚಾಲಿ ಅಡಿಕೆಗೆ ಇಷ್ಟೊಂದು ಬೇಡಿಕೆ ಇದೆ. ಬೆಲೆಯೂ ಇದೆ ಎಂಬುದನ್ನು ಕಳೆದ ವರ್ಷದ ವಿದ್ಯಮಾನ ನಮಗೆಲ್ಲಾ ತೋರಿಸಿಕೊಟ್ಟಿದೆ. ಈ ತನಕ ಬೆಳೆಗಾರರು ಕಾಣದ ಬೆಲೆ ಬಂದಿದೆ. ಬೆಳೆ ಪ್ರದೇಶ ವಿಸ್ತರಣೆ ಆಗುತ್ತಿದ್ದಾಗ್ಯೂ ಬೆಲೆ ಏರಿಕೆ ಆಗುತ್ತಿರುವುದು ಉತ್ತಮ ಬೆಳವಣಿಗೆ. ಚಾಲಿ ಅಡಿಕೆಗೆ ಬೇಡಿಕೆ ಇದೆ. ಉತ್ತಮ ಬೆಲೆಯೂ ಇದೆ. ಆದ ಕಾರಣವೇ ಈಗ ಬೆಲೆ ಏರಿಕೆಯಾಗಿದೆ.

ತೋಟ ಹೆಚ್ಚಾದರೂ ಬೆಳೆ ಅಷ್ಟಕ್ಕಷ್ಟೇ:

  • ಅಡಿಕೆ ತೋಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
  • ಆದರೆ ಬೆಳೆ ಮಾತ್ರ ಅದಕ್ಕನುಗುಣವಾಗಿ ಹೆಚ್ಚುತ್ತಿಲ್ಲ.
  • ಪ್ರತೀ ವರ್ಷ ಒಂದಿಲ್ಲೊಂದು ಸಮಸ್ಯೆಗಳಿಂದ ಅಡಿಕೆಯ ಇಳುವರಿ ಕಡಿಮೆಯಾಗುತ್ತಲೇ ಇದೆ.
  • 2019 ರಲ್ಲಿ ಕೊಳೆ ರೋಗದಿಂದ ಬೆಳೆ ಕಡಿಮೆಯಾಗಿತ್ತು.
  • ಕಳೆದ ವರ್ಷ ಹೂ ಗೊಂಚಲು ಒಣಗುವ ಸಮಸ್ಯೆಯಿಂದಾಗಿ ಬೆಳೆ ಕಡಿಮೆ.
  • ಈ ವರ್ಷ ವೂ ಅದೇ ಕಥೆ ಮುಂದುವರಿದಿದ್ದು, ಸರಾಸರಿ 25 % ಕ್ಕೂ ಹೆಚ್ಚಿನ ಬೆಳೆ ಕಡಿಮೆ ಇದೆ. 
  • ಚಾಲಿಯ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಳವಾಗಿದ್ದರೆ ಅದು ಇದೇ ಕಾರಣಕ್ಕೆ.

ಕೆಲವು ಮೂಲಗಳ ಪ್ರಕಾರ ಕೆಂಪಡಿಕೆ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಆದರೂ ದರ ಭಾರೀ ಕುಸಿತದ ಸಾಧ್ಯತೆ ಇಲ್ಲವಂತೆ.

ಕೆಂಪಡಿಕೆ ದಾರಣೆ ಅಸ್ಥಿರ:

  • ಚಾಲಿ ಅಡಿಕೆಯ ಉತ್ಪಾದರೆ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕರಾವಳಿ ಭಾಗಗಳಲ್ಲಿ ಮಾತ್ರ.
  • ಉಳಿದೆಡೆ ಚಾಲಿ ಮಾಡಲಾಗುತ್ತಿದ್ದರೂ ಅದರಲ್ಲಿ ಹೆಚ್ಚಿನವು ಗುಟ್ಕಾ ತಯಾರಿಕೆಗೇ ಬಳಕೆಯಾಗುತ್ತದೆ.
  • ಆದ ಕಾರಣ ಚಾಲಿ ಅಡಿಕೆಗೆ ಅದರದ್ದೇ ಆದ ಬೇಡಿಕೆ ಪ್ರತ್ಯೇಕವಾಗಿ ಇದೆ.
  • ಕೆಂಪಡಿಕೆ ಬೆಳೆ ಪ್ರದೇಶ ಚಾಲಿ ಮಾಡಲಾಗುವ ಪ್ರದೇಶಕ್ಕಿಂತ 3 ಪಟ್ಟಿಗೂ ಹೆಚ್ಚಳವಾಗಿದೆ.
  • ಮಲೆನಾಡು ಅರೆ ಮಲೆನಾಡಿನಿಂದ ಬಯಲು ಸೀಮೆಗೂ ಅಡಿಕೆ ಬೆಳೆ ವಿಸ್ತರಣೆಯಾಗಿದ್ದು, ಭಾರೀ ಉತ್ಪಾದನೆ ಆಗುತ್ತಿದೆ.
  • ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷ  40,000 ದ ಆಸು ಪಾಸಿಗೆ ಬಂದು ನಿಂತ ರಾಶಿ ಧಾರಣೆ ಮತ್ತೆ ದೊಡ್ಡ ನೆಗೆತ ಕಾಣಲೇ ಇಲ್ಲ.
  • ಒಮ್ಮೆ 42,000 ದಾಟಿದರೂ ಅದು ಅಲ್ಲೇ ಸ್ಥಿರವಾಗಿ ನಿಂತಿದೆ.  ನಿನ್ನೆ ಮತ್ತೆ ಕ್ವಿಂಟಾಲಿನಲ್ಲಿ 500 ಕಡಿಮೆಯೇ ಆಗಿದೆ.
  • ಕೆಂಪಡಿಕೆಯ ಮಾರುಕಟ್ಟೆಯಲ್ಲಿ ಈ ಹಿಂದಿನಂತೆ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಅಡಿಕೆಯ ಉತ್ಪಾದನೆ  ಸಾಕಷ್ಟು ಇದೆ. ಇದು ಒಂದು ಸ್ಥಿರತೆಗೆ ಬಂದಿದೆ ಎಂದೇ ಹೇಳಬಹುದು.

ಚಾಲಿಗೆ ಯಾಕೆ ಬೇಡಿಕೆ?

ಚಾಲಿ ಅಡಿಕೆ

  • ಕೆಲವು ಮೂಲಗಳ ಪ್ರಕಾರ ಈಗ ಚಾಲಿಯನ್ನು ಗುಟ್ಕಾ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾಂತೆ.
  • ಇದು ಯಾವ ಉದ್ದೇಶಕ್ಕೆ ಎಂಬುದು ಯಾರಿಗೂ ತಿಳಿದಿಲ್ಲ.
  • ಆ ಕಾರಣಕ್ಕೆ ಚಾಲಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ.
  • ಚಾಲಿ ಅಡಿಕೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆ ಮಾತ್ರ ಈಗಲೂ ಪಾನ್ ಶಾಪ್ ಮೂಲಕ ಬೀಡಾ ಗಳಿಗೆ ಬಳಸಲ್ಪಡುತ್ತಿದೆ.
  • ಉಳಿದವು ಗುಟ್ಕಾ ಗೇ ಬಳಕೆಯಾಗುತ್ತಿದೆ. ಹಾಗಾಗಿ ಚಾಲಿ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ.

ನವೆಂಬರ್ ತನಕವೂ ಏರಿಕೆ ಸಾಧ್ಯತೆ:

ಈ ವರ್ಷ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ಕಡಿಮೆ ಇದೆ. ಜೊತೆಗೆ ಆಗಲೇ ಸಾಕಷ್ಟು ಅಡಿಕೆ ಮಾರುಕಟ್ಟೆಗೆ ಬಂದಾಗಿದೆ. ಈ ವರ್ಷ ಹೆಚಿನ ಬೆಳೆಗಾರರಲ್ಲಿ ಅಡಿಕೆ ಅಲ್ಪ ಸ್ವಲ್ಪ ಒದ್ದೆ ಆಗಿರುವ ಕಾರಣ ದಾಸ್ತಾನು ಇಡಲು ಸಾಧ್ಯವಿಲ್ಲದಾಗಿದೆ. ಆ ಕಾರಣ ಸುಮಾರು 25% ಕ್ಕೂ ಹೆಚ್ಚು ಅಡಿಕೆ ಮಾರುಕಟ್ಟೆಗೆ ಆಗಲೇ ಬಂದಾಗಿದೆ. ಈಗ ಇರುವ ಅಡಿಕೆ ಉತ್ತಮ ಗುಣಮಟ್ಟದ್ದಾಗಿದ್ದು, ಬೆಳೆಗಾರರು ಬಹಳ ಜಾಗರೂಕತೆಯಲ್ಲಿ ಮಾರಾಟಕ್ಕೆ ಬಿಡುವ ಕಾರಣ ನವೆಂಬರ್ ತನಕ ಅಡಿಕೆಯ ಧಾರಣೆ ಏರಿಕೆಯಾಗುತ್ತಾ ಇರಬಹುದು. ನವೆಂಬರ್ ಸುಮಾರಿಗೆ ಹೊಸ ಅಡಿಕೆಗೆ ಕ್ವಿಂಟಾಲಿಗೆ 50,000 ತಲುಪಿದರೂ ಆಚ್ಚರಿ ಇಲ್ಲ.

Leave a Reply

Your email address will not be published. Required fields are marked *

error: Content is protected !!