ಕಡಿಮೆ ಖರ್ಚಿನಲ್ಲಿ ದಿಡೀರ್ ತರಕಾರಿ ಚಪ್ಪರ.

pendal grown vegitable

 ಬೇಸಿಗೆಯಲ್ಲಿ  ತರಕಾರಿ ಬೆಳೆದರೆ ಲಾಭವಿದೆ.  ಈ ಸಮಯದಲ್ಲಿ  ಮದುವೆ, ಗ್ರಹಪ್ರವೇಶ, ಜಾತ್ರೆ, ಮುಂತಾದ ಕಾರ್ಯಕ್ರಮಗಳು ಅಧಿಕ. ಬಳ್ಳಿ ತರಕಾರಿಗಳನ್ನು ಚಪ್ಪರ ಹಾಕಿ  ಬೆಳೆದರೆ ಗುಣಮಟ್ಟದ ತರಕಾರಿ ಸಿಗುತ್ತದೆ. ಸಾಂಪ್ರದಾಯಿಕ ಚಪ್ಪರ ಮಾಡುವ ವಿಧಾನ ಲಾಭದಾಯಕವಲ್ಲ. ಅದರ ಬದಲು ಚಪ್ಪರಕ್ಕಾಗಿಯೇ ಇರುವ ಬಲೆಗಳು ಅಥವಾ ಪ್ಯಾಕಿಂಗ್ ಹಗ್ಗ ಬಳಸಿದರೆ ಮರದ ಅಗತ್ಯ ತುಂಬಾ ಕಡಿಮೆ.

vegetable in pendal

ಬೇಸಿಗೆಯ ತರಕಾರಿ ಲಾಭದಾಯಕ:

  • ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಇಳುವರಿ ಹೆಚ್ಚು ಬರುತ್ತದೆ.  ಬೇಗ ಇಳುವರಿ ಬರುತ್ತದೆ.
  • ಬಿಸಿಲು ಚೆನ್ನಾಗಿ ಇರುವ ಕಾರಣ ರೋಗ, ಕೀಟ ಬಾಧೆಗಳು ತುಂಬಾ ಕಡಿಮೆ ಇರುತ್ತದೆ.
  • ಬೇಸಿಗೆಯಲ್ಲಿ ಬೆಳೆಯಲಾಗುವ  ಪ್ರಮುಖ ತರಕಾರಿಗಳಲ್ಲಿ ಅಲಸಂಡೆ, ಹೀರೆ, ಹಾಗಲಕಾಯಿ, ಪಡುವಲಕಾಯಿ, ಸೋರೆ,  ತೊಂಡೆ ಮುಖ್ಯವಾದುದು.
  • ಈ ಎಲ್ಲಾ ತರಕಾರಿಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಒಂದೇ ಒಂದು ಕಷ್ಟ ಅಂದರೆ, ಚಪ್ಪರ ಹಾಕುವ ಮಜೂರಿ ಮತ್ತು ಚಪ್ಪರಕ್ಕಾಗಿ ಬೇಕಾಗುವ ಮರಮಟ್ಟುಗಳ ಕೊರತೆ.
  • ಸಾಂಪ್ರದಾಯಿಕ ವಿಧಾನದಲ್ಲಿ ಬಳ್ಳಿ  ತರಕಾರಿಗಳನ್ನು ಮರಮಟ್ಟಿನ ಚಪ್ಪರ ಮಾಡಿಯೇ  ಬೆಳೆಸುತ್ತಿದ್ದರು.
  • ಒಂದು ತೊಂಡೆ ಚಪ್ಪರಕ್ಕೆ ಏನಿಲ್ಲವೆಂದರೂ ಮರ ಒಟ್ಟುಗೂಡಿಸಲು ಒಂದು ದಿನದ ಮಜೂರಿ ಬೇಕಾದೀತು.
  • ಮರ ಕೊಂಡು ತರುವುದಾದರೆ ಸಾವಿರಾರು ರೂ. ಬೇಕಾಗುತ್ತದೆ.
  • ಚಪ್ಪರವಲ್ಲದೆ ಬೇರೆ ಯಾವ ವಿಧಾನದಲ್ಲಿ ಬಳ್ಳಿ ತರಕಾರಿ ಬೆಳೆದರೂ ಅದರ ಗುಣಮಟ್ಟ ಕಡಿಮೆಯಾಗುತ್ತದೆ. ಮುರುಟುಕಾಯಿಗಳಾಗುತ್ತವೆ.

ಕೃಷಿಯಲ್ಲಿ ಹೆಚ್ಚುವರಿ ಆದಾಯಕ್ಕೆ ತರಕಾರಿ ಬೆಳೆಸುವುದು ಸೂಕ್ತ. ಸಾಕಷ್ಟು ಜನ ರೈತರು  ಬೇಸಿಗೆ, ಚಳಿಗಾಲದಲ್ಲಿ  ವಾಣಿಜ್ಯಿಕವಾಗಿ  ತರಕಾರಿ ಬೆಳೆಸುವ ಮೂಲಕ ಜೀವನ ನಡೆಸುವವರಿದ್ದಾರೆ. ಮನೆ ಹಿತ್ತಲು ಉಳ್ಳವರೂ ಸಹ ಸಣ್ಣ ಪ್ರಮಾಣದಲ್ಲಿ ತರಕಾರಿ  ಬೆಳೆದರೆ  ಸ್ವಲ್ಪ ಮಟ್ಟಿಗೆ ಆದಾಯ ದೊರೆಯುತ್ತದೆ.

  • ಎಲ್ಲದಕ್ಕೂ ಸಮಸ್ಯೆ ಚಪ್ಪರಕ್ಕ ಬೇಕಾಗುವ ಮರಮಟ್ಟುಗಳನ್ನು ಎಲ್ಲಿಂದ ತರಲಿ ಎಂಬುದು.
fish net pendal

ಬಳ್ಳಿ ತರಕಾರಿಗಳಿಗೆ ಚಪ್ಪರ ಯಾಕೆ? :

  •  ಬಳ್ಳಿ ತರಕಾರಿಗಳಾದ ತೊಂಡೆ, ಹಾಗಲ, ಹೀರೆ, ಪಡುವಲ, ಮುಳ್ಳು ಸೌತೆ ಮುಂತದವುಗಳನ್ನು  ನೆಲದಮೇಲೆ ಹಬ್ಬಿಸಿ ಬೆಳೆಸಲಿಕ್ಕಾಗುವುದಿಲ್ಲ.
  • ಬೆಳೆಸಿದರೂ ಅದರ ಫಸಲು ಓರೆ ಕೋರೆಯಾಗಿ ಬೆಳೆದು ಅಂದಗೆಡುತ್ತದೆ.
  •  ಕಾಯಿಗಳು ನೆಲಮುಖವಾಗಿ ಬೆಳೆದಾಗ ಮಾತ್ರ ಅದು ನೇರವಾಗಿ ನೋಟ ಉತ್ತಮವಾಗಿ ಇರುತ್ತದೆ.  ಕೊಯಿಲು ಸುಲಭ.
  • ಇದಲ್ಲದೆ  ಮಣ್ಣು ಜನ್ಯ ರೋಗ ರುಜಿನಗಳೂ ಸಹ ಬರುವುದಿಲ್ಲ. ಅದಕ್ಕಾಗಿಯೇ  ಬಳ್ಳಿ ತರಕಾರಿಗಳನ್ನು  ಚಪ್ಪರಕ್ಕೆ  ಬಿಟ್ಟು ಬೆಳೆಸುವುದು ವಾಡಿಕೆ.
  • ಚಪ್ಪರಕೆ ಬೇಕಾಗುವ  ಸಾಮಾನು ಸರಂಜಾಮುಗಳಿಗೆ ಬೇಕಾಗುವ ಮರಮಟ್ಟು ಇಲ್ಲದಾಗಿದೆ.
  • ಹಿಂದೆ ಚಪ್ಪರಕ್ಕೆ ಬಿದಿರಾದರೂ ಲಭ್ಯವಿತ್ತು. ಈಗ ಅದೂ  ಹೂ ಬಿಟ್ಟು  ಬಿದಿರ ಮೆಳೆಗಳು ಕಡಿಮೆಯಾಗಿವೆ.
  •  ಸ್ವಂತ ಸ್ಥಳದ ಮರಮಟ್ಟುಗಳನ್ನು ಕಡಿದು ಕೃಷಿ ಮಾಡಲಾಗಿದೆ. ಆದಕಾರಣ ಎಲ್ಲೆಲ್ಲೂ  ಚಪ್ಪರಕ್ಕೆ ಬೇಕಾದ ಮರಮಟ್ಟುಗಳು ಲಭ್ಯವಿಲ್ಲ.
tonde cappara

ಸುಲಭ ಮತ್ತು ಮಿತವ್ಯಯ:

  • ನೈಲಾನ್ ಬಲೆಗಳು ಮತ್ತು  ನೈಲನ್ ಪ್ಯಾಕಿಂಗ್ ಹಗ್ಗಗಳು. ಚಪ್ಪರಕ್ಕಾಗಿಯೇ ವಿಶೇಷವಾಗಿ ತಯಾಸಲ್ಪಟ್ಟ ಪಾಲಿಮರ್ ಹಗ್ಗಗಳೂ ಈಗ ಲಭ್ಯವಿದೆ.
  • ನೈಲಾನ್ ಬೆಲೆಗಳೆಂದರೆ ಮೀನು ಹಿಡಿಯಲು  ಬಳಕೆ ಮಾಡುವ ತರಹದ  ಬಲೆ. ಇದರಲ್ಲಿ ½ ಅಡಿ, 1 ಅಡಿ ತೂತಿನ ಬಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
  •  ಕರಾವಳಿಯ ಕೆಲವು ಕಡೆ ಮೀನು ಹಿಡಿದು ಉಪಯೋಗಿಸಿ ಬಿಟ್ಟ  ಬಲೆಗಳೂ  ಲಭ್ಯವಿರುತ್ತವೆ.
  • ನಾಲ್ಕು ಗೂಟಗಳಿದ್ದರೆ ದಿಡೀರ್ ಆಗಿ  ಚಪ್ಪರ ಸಿದ್ದವಾಗುತ್ತದೆ. ಬಲೆಗಳು   ಕಿಲೋ ಲೆಕ್ಕದಲ್ಲಿ  ಲಭ್ಯವಿರುತ್ತದೆ.
  •  ಹೊಸತಕ್ಕೆ ಕಿಲೋಗೆ 300 ರೂ ತನಕವೂ ಹಳೆಯದಕ್ಕೆ 100 ರೂ ತನಕವೂ ಇರುತ್ತದೆ.
  • ಹೊಸ ಬಲೆಯನ್ನು ನಮಗೆ ಬೇಕಾದಷ್ಟೇ ಉದ್ದಗಲಕ್ಕೆ  ಮಾಡಿಸಿಕೊಳ್ಳಬಹುದು. ಹಳೆಯದಾದರೆ  ಪರಸ್ಪರ ಜೋಡಿಸಿಕೊಳ್ಳಬೇಕು. ಹೊಸತು ಜೋಡನೆ ಸುಲಭ.
  • ಈ ಬಲೆಗಳು  ಕರಾವಳಿಯ ಮಂಗಳೂರು, ಮಲ್ಪೆ,  ಉಡುಪಿ, ಕುಂದಾಪುರ, ಹೊನ್ನಾವರ ಮುಂತಾದ ಕಡೆ ಲಭ್ಯವಿದ್ದು, ಅಲ್ಲೆಲ್ಲಾ ಬಲೆ ಹೆಣೆಯುವವರೂ ಸಹ ಇದ್ದಾರೆ.
  • ಗೂಟಕ್ಕೂ ಸಹ  ಮರವನ್ನೇ ಆಶ್ರಯಿಸಬೇಕಾಗಿಲ್ಲ. ಕಲ್ಲು ಕಂಬ, ಅಥವಾ ಕಾಂಕ್ರೀಟು ಗೂಟಗಳನ್ನು ಹಾಕಿದರೆ ಅದನ್ನು  ಮುಂದಿನ ಸೀಸನ್‍ಗೆ ಸಹ ಬಳಸಬಹುದು.
penda by nylon packing ropes

  • ಪ್ಯಾಕಿಂಗ್ ರೋಪು (ಸುತ್ಲಿ ಹಗ್ಗ) ಬಳಸಿಯೂ  ಚಪ್ಪರ ಮಾಡಿಕೊಳ್ಳಬಹುದು. ಆವರವರೇ  ಹೆಣೆಯುವುದಾದರೆ  ಇದು ಸುಲಭ.
  • ಬಲೆಯ ಚಪ್ಪರ ಮಾಡಲಿ  2-3 ಜನ ಇದ್ದರೆ ಒಂದು ದಿನದಲ್ಲಿ 1/2 ಎಕ್ರೆ ಚಪ್ಪರ ಮಾಡಬಹುದು.
  • ಬಳ್ಳಿಯನ್ನು ಚಪ್ಪರದ ವರೆಗೆ  ಹಬ್ಬಿಸಲಿಕ್ಕೂ ಮರಮಟ್ಟುಗಳನ್ನು ಆಶ್ರಯಿಸಬೇಕಾಗಿಲ್ಲ. ಅದಕ್ಕೂ  ಬಲೆಯನ್ನು ಹೆಣೆದರೆ ಸಾಕಾಗುತ್ತದೆ.
  • ಬಲೆ ಜೋತು ಬೀಳದಂತೆ ಹಳದಿ ಬಿದಿರು, ಸತ್ತ ಅಡಿಕೆ ಮರ ಮುಂತಾದವುಗಳನ್ನು  ಆಧಾರವನ್ನು ಕೊಡಬೇಕಾಗುತ್ತದೆ.
  • ಹಳದಿ ಬಿದಿರು  ಬೇಗ ಸುರಿ ಬೀಳುವಂತದ್ದಾಗಿದ್ದು, ಇದನ್ನು ಈ ಉದ್ದೇಶಕ್ಕೆ ಬಳಕೆ ಮಾಡಬಹುದು.
  • ಈಗ ಮಾರುಕಟ್ಟೆಯಲ್ಲಿ ಯು ವಿ ನಿರೋಧಕ ಶಕ್ತಿ ಹೊಂದಿದ ಪಾಲಿಮರ್ ಚಪ್ಪರದ ಹಗ್ಗಗಳು  ಸಹ ಲಭ್ಯವಿದೆ.

ಇದು ಪರಿಸರ ಸ್ನೇಹಿಯಾಗಿದ್ದು, ಮರಮಟ್ಟು ನಾಶವಾಗುವುದಿಲ್ಲ.  ಪರಿಸರ ಉಳಿಯುತ್ತದೆ. ಈ ನೈಲಾನ್ ಹಗ್ಗಗಳು ಕರಗದೇ ಮಣ್ಣಿಗೆ ಸೇರುವುದರಿಂದ ತೊಂದರೆಯಲ್ಲವೇ ಎಂದು ತರ್ಕ ಮಾಡುವವರಿರಬಹುದು. ಆದರೆ ಈ ವಸ್ತುಗಳು ಮೂರು ನಾಲ್ಕು ಸೀಸನ್ ಬಳಕೆ ಮಾಡಲ್ಪಟ್ಟ ನಂತರ ಬಿಸಿಲಿಗೆ ಕರಗಿ ಹುಡಿಯಾಗುತ್ತದೆ.  ಮರಮಟ್ಟು ಕಡಿಯುವುದಕ್ಕಿಂತ ಇದು ಉತ್ತಮ.
end of the article:————————————————————-
search words:  vegetable growing# how to grow vegetable?# pendal for vegetable growing# Ridge gourd # bitter gourd# sponge gourd # cucumber# easy method of vegetable cultivation#

Leave a Reply

Your email address will not be published. Required fields are marked *

error: Content is protected !!