ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.

Ginger yield

ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ.

Ginger planting in arecanut

 • ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ.
 • ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ.
 • ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ.
 • ಹಾಗೆಯೇ ಒಂದು ಹಂತದ ತನಕ ಸಸ್ಯ ಬೆಳವಣಿಗೆಯೇ ಇರುತ್ತದೆ.
 • ನಂತರ ಗಡ್ಡೆ ಬೆಳವಣಿಗೆ ಪ್ರಾರಂಭವಾಗುತ್ತದೆ.
 • ಆಗ   ಗಡ್ಡೆಯಲ್ಲಿ ನಾರು ಹುಟ್ಟಿಕೊಂಡು  ಪಕ್ವತೆಗೆ  ತಿರುಗಿ ತೂಕ ಬರುತ್ತದೆ.

ಸಂಶೋಧನೆಗಳು ಹೀಗೆ ಹೇಳುತ್ತವೆ:

 • ಶುಂಠಿ ಬೆಳೆಗೆ ರೈತರು ಭಾರೀ ಪ್ರಮಾಣದಲ್ಲಿ ರಸಗೊಬ್ಬರ, ಹಾರ್ಮೋನು, ಸೂಕ್ಷ್ಮ ಪೊಷಕಾಂಶಗಳನ್ನು ಕೊಡುತ್ತಾರೆ.
 • ಇದೆಲ್ಲವೂ ಸಸ್ಯಕ್ಕೆ ಬೇಕಾದುದಕ್ಕಿಂತ ಹೆಚ್ಚು. ಒಂದು ಎಕ್ರೆ ಶುಂಠಿ ಬೆಳೆಗೆ ಬೇಕಾಗುವ NPK ಗೊಬ್ಬರಗಳು 30N:20P:20K (ಕಿಲೋ) ಎಂದು ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯು ಹೇಳುತ್ತದೆ.
 • ಈ ಪ್ರಮಾಣಕ್ಕಿಂತ ದುಪ್ಪಟ್ಟು ಗೊಬ್ಬರವನ್ನು  ರೈತರು ಬಳಸುತ್ತಿದ್ದಾರೆ.
 • ಮೇಲಿನ ಪ್ರಮಾಣದ  ಗೊಬ್ಬರ ಕೊಟ್ಟಾಗ ಎಕ್ರೆಗೆ 9 ಟನ್  ಹಸಿ ಶುಂಠಿಯ ಇಳುವರಿ ಪಡೆಯಬಹುದಂತೆ.
 • ಆಲ್ಲಿ ಮಣ್ಣಿಗೆ ಸಾವಯವ ಗೊಬ್ಬರ ಎಕ್ರೆಗೆ 10 ಟನ್ ಗೂ ಹೆಚ್ಚು ಕೊಡಬೇಕಾಗುತ್ತದೆ. ಜೊತೆಗೆ ಮಣ್ಣು ಅಧಿಕ ಫಲವತ್ತತೆಯಿಂದ ಕೂಡಿರಬೇಕು.

ಸಾವಯವ ಗೊಬ್ಬರವನ್ನು ಹೆಚ್ಚಿನ ರೈತರು ಸಾಕಷ್ಟು ಕೊಡುತ್ತಿಲ್ಲ. ಅದಕ್ಕಾಗಿ ಕಾರಣ ಹೆಚ್ಚು ಹೆಚ್ಚು ರಸ  ಗೊಬ್ಬರ ಕೊಡುತ್ತಾರೆ. ಸಂಶೋಧನಾ ಸಂಸ್ಥೆಯ ಇಳುವರಿಗಿಂತ ದುಪ್ಪಟ್ಟು ಇಳುವರಿಯನ್ನು ನಮ್ಮ ರೈತರು ಪಡೆಯುತ್ತಾರೆ.  ಆದು ಹೆಚ್ಚುವರಿ ಗೊಬ್ಬರಗಳನ್ನು ಕೊಡುವ  ಕಾರಣದಿಂದ.

Good growth of ginger

ಹೇಗೆ ಗೊಬ್ಬರ ಕೊಡಬೇಕು:

 • ಬಿತ್ತನೆ ಸಮಯದಲ್ಲಿ 1/2  ಪಾಲು ರಂಜಕ ಗೊಬ್ಬರವನ್ನು ಕೊಡಬೇಕು. 1/4  ಪಾಲು ಪೊಟ್ಯಾಶ್ ಗೊಬ್ಬರವನ್ನು  ಆಗಲೇ ಕೊಡಬೇಕು.
 • ನಾಟಿ ಸಮಯದಲ್ಲಿ ಸಾರಜನಕ ಗೊಬ್ಬರವನ್ನು ಕೊಡಬಾರದು. ಕೊಟ್ಟರೆ ಕೊಳೆ ಹೆಚ್ಚುತ್ತದೆ.
 • ಅದು ಸಾವಯವ ಗೊಬ್ಬರಗ ಮೂಲಕವೇ ಲಭ್ಯವಾಗಬೇಕು.
 • ಸಾವಯವ ಗೊಬ್ಬರ ಮತ್ತು ಸಮತೋಲನ ಗೊಬ್ಬರ ಕೊಡುವುದರಿಂದ ರೋಗ ಕೀಟ ಬಾಧೆ ಕಡಿಮೆಯಾಗುತ್ತದೆ.
 • ಸಸ್ಯಕ್ಕೆ 40 ದಿನಗಳಾದ ನಂತರ  ಪ್ರತೀ ತಿಂಗಳೂ ಅಥವಾ 15 ದಿನಕ್ಕೊಮ್ಮೆಯಂತೆ ಸಾರಜನಕ ಗೊಬ್ಬರ ಕೊಡಬೇಕು.
 •  5  ತಿಂಗಳಿಗೆ 5 ಪಾಲು, 15 ದಿನಕ್ಕೆ 10 ಪಾಲು  ಮಾಡಿ ಹಂಚಿ ಕೊಡುತ್ತಾ ಇರಬೇಕು.
 • 2 ನೇ ತಿಂಗಳಿನ ನಂತರ ಸಸ್ಯವು 5-6 ತಿಂಗಳು ಬೆಳೆಯುವ ತನಕ ಪ್ರತೀ ತಿಂಗಳೂ ಅಥವಾ 15 ದಿನಕ್ಕೊಮ್ಮೆ ಉಳಿದ ಅರ್ಧ ಭಾಗ ರಂಜಕ ಗೊಬ್ಬರವನ್ನು ಹಂಚಿ ಕೊಡುತ್ತಿರಬೇಕು.
 • ಸಸ್ಯಕ್ಕೆ 6 ತಿಂಗಳು ಆಗುವಾಗ ರಂಜಕ ಕೊಟ್ಟು ಮುಗಿಯಬೇಕು. ಇದು ಉತ್ತಮ ಶುಂಠಿ ಬೆಳೆಗಾರರ ಬೇಸಾಯ ಕ್ರಮ.

ಶುಂಠಿ ಈಗ ನೆಟ್ಟರೆ ಬೆಳೆಗೆ ರೋಗ ಕಡಿಮೆ ಹೇಗೆ?.

ಸಸ್ಯಕ್ಕೆ 90 ದಿನಗಳಾಗುವಾಗ ಉಳಿದ ಪ್ರಮಾಣದ ಪೊಟ್ಯಾಶಿಯಂ ಗೊಬ್ಬರವನ್ನೂ ಹಂಚಿ ಗಿಡ ಒಣಗುವ ತನಕ ಕಂತನ್ನು ವಿಭಜಿಸಿ ಕೊಡಬೇಕು. 6 ತಿಂಗಳ ಬೆಳವಣಿಗೆಯ ಸಸ್ಯ ಸುಮಾರು 20-30 ಮೊಳಕೆಗಳನ್ನು ಬಿಟ್ಟಿರಬೇಕು. 6 ತಿಂಗಳ ನಂತರ ಪ್ರತೀ 15 ದಿನಕ್ಕೊಮ್ಮೆಯಂತೆ ಸಲ್ಫೇಟ್ ಆಫ್ ಪೊಟ್ಯಾಶ್ ಶೇ.2.5 (1 ಕಿಲೋ  200 ಲೀ. ನೀರು ) ದ್ರಾವಣವನ್ನು ಸಸ್ಯ ಒಣಗುವ ತನಕವೂ ಸಿಂಪರಣೆ ಮಾಡುತ್ತಿರಬೇಕು.

Ginger collection

 • ಮಣ್ಣಿಗೆ ಸಾಕಷ್ಟು ಸಾವಯವ ವಸ್ತು ಸೇರಿಸದೇ ಇದ್ದಲಿ, ಫಲವತ್ತತೆ ಇಲ್ಲದ ಮಣ್ಣು ಆಗಿದ್ದರೆ  ಎಕ್ರೆಗೆ 20ಕಿಲೋ ಮೆಗ್ನೀಶಿಯಂ ಸಲ್ಫೇಟ್ ಮತ್ತು 15 ಕಿಲೋ ಝಿಂಕ್ ಸಲ್ಫೇಟ್ ಅನ್ನು ಸಾಲುಮಾಡುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.
 • ಸಸ್ಯಕ್ಕೆ 40 ದಿನ ಅಗುವಾಗ ಪ್ರಾರಂಭಿಸಿ 6 ತಿಂಗಳ ತನಕ ಪ್ರತೀ 15 ದಿನಕ್ಕೊಮ್ಮೆ 19:19:19 1 ಕಿಲೋ ಮತ್ತು 200 ಗ್ರಾಂ ಮೈಕ್ರೋ ನೂಟ್ರಿಯೆಂಟ್ ಮಿಶ್ರಣವನ್ನು 200 ಲೀ. ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪರಣೆ ಮಾಡುತ್ತಿರಬೇಕು.
 • ಇದು ಸಸ್ಯದ ಸುಪ್ತ ಪೋಷಕಾಂಶದ ಹಸಿವನ್ನು ನೀಗಿಸುತ್ತದೆ.
 • 3 ನೇ ತಿಂಗಳಿಗೆ ಮತ್ತು 5 ನೇ ತಿಂಗಳಿಗೆ ಒಮ್ಮೆ ಇದೇ ದ್ರಾವಣಕ್ಕೆ 4-5  ಗ್ರಾಂ ಜಿಬ್ಬರಲಿಕ್ ಆಮ್ಲವನ್ನು ಸೇರಿಸಿ ಸಿಂಪಡಿಸಿದರೆ ಎಲೆಗಳು ಅಗಲವಾಗಿ ಸಸ್ಯ ಬೆಳವಣಿಗೆ ಮೊಳಕೆ ಒಡೆಯುವಿಕೆ ಹೆಚ್ಚಾಗುತ್ತದೆ.
 • ಕೊನೇ ಹಂತದಲ್ಲಿ ಕೆಲವರು  ಹಾರ್ಮೋನನ್ನು ಸಿಂಪರಣೆ ಮಾಡಿ ತೂಕ ಹೆಚ್ಚಿಸುತ್ತಾರೆ.
 • ಇದರಿಂದ ಗಡ್ಡೆ ತೂಕ ಸ್ವಲ್ಪ ಹೆಚ್ಚುತ್ತದೆಯಾದರೂ, ಇಂತಹ ಗಡ್ಡೆಯನ್ನು  ಬಿತ್ತನೆಗೆ ಬಳಸಿದಾಗ ಕೊಳೆ ರೋಗ ಖಾತ್ರಿ.
 •  ಇದನ್ನು ಒಣ ಶುಂಠಿ ಮಾಡಿದಾಗ  ತೂಕ  ಕಡಿಮೆಯಾಗುತ್ತದೆ.
 • ಹಸಿ ಶುಂಠಿ ಯಾಗಿ ಮಾರಾಟಕ್ಕೆ ಒಳ್ಳೆಯದು. ಇದು ತುಂಬಾ ಹಾನಿಕಾರಕ ರಾಸಾಯನಿಕ ಆದ ಕಾರಣ ಇದನ್ನು ಬಳಸದೆ ಇರುವುದು ಸೂಕ್ತ.
 • ಸುಮಾರು 10% ತೂಕ ಕಡಿಮೆಯಾದರೂ ಸಲ್ಫೇಟ್ ಆಫ್ ಪೊಟ್ಯಾಶ್ (SOP) ಸಿಂಪರಣೆ ಉತ್ತಮ.
 • ಇದರಲ್ಲಿ ಗಡ್ಡೆ ಚೆನ್ನಾಗಿ ಬಲಿಯುತ್ತದೆ. ನಾರು ಬಂದು ತೂಕ ಬರುತ್ತದೆ. ಹಾಳಾಗುವುದಿಲ್ಲ.ರೋಗ ನಿರೋಧಕ ಶಕ್ತಿ ಇರುತ್ತದೆ.

One rhizome of ginger

ಎಷ್ಟು ಇಳುವರಿ ಸಿಗಬೇಕು:

 • ಸಾಮಾನ್ಯವಾಗಿ ಶುಂಠಿ ನಾಟಿ ಮಾಡುವವರು ಎಕ್ರೆಗೆ 8-10 ಕ್ವಿಂಟಾಲು  ಬಿತ್ತನೆ ಗಡ್ಡೆ ಬಳಕೆ ಮಾಡುತ್ತಾರೆ.
 • ಇದರಲ್ಲಿ ಕಡಿಮೆ ಎಂದರೆ 1:10 ಕ್ವಿಂಟಾಲು ಸಾಧಾರಣ ಆದರೆ  1:20 ಕ್ವಿಂಟಾಲು ಮತ್ತು  ಗರಿಷ್ಟ 1:30 ಕ್ವಿಂಟಾಲು ಇಳುವರಿ ಪಡೆಯುವವರಿದ್ದಾರೆ.
 • ಸರಾಸರಿ 200 ಕ್ವಿಂಟಾಲು ಇಳುವರಿ ಬರಬೇಕು.

 ಶುಂಠಿ ಬೆಳೆಯ ಒಟ್ಟಾರೆ ಗುಟ್ಟು ಮಣ್ಣಿನ ಫಲವತ್ತತೆ. ಎರಡನೆಯದ್ದು, ಗರಿಷ್ಟ ಮೊಳಕೆಗಳನ್ನು ಪಡೆಯುವುದು ಮೂರನೆಯದ್ದು ಕೊನೆ ಹಂತದಲ್ಲಿ ಸಲ್ಫೇಟ್ ಆಫ್ ಪೊಟ್ಯಾಶ್ ಸಿಂಪರಣೆ ಮಾಡುವುದು. ಬೆಳೆ ಬೆಳೆಯುತ್ತಿರುವಾಗ ಸುಮಾರು 6 ತಿಂಗಳ ತನಕ ಹೂ ಬಿಡಬಾರದು. ಹೂ ಬಿಟ್ಟರೆ ಗಡ್ಡೆಯ ಬೆಳವಣಿಗೆ ನಿಲ್ಲುತ್ತದೆ. ಅದು ಪಕ್ವತೆಗೆ ಹೋಗುತ್ತದೆ. ಬೆಳೆಯನ್ನು ಸುಮಾರು 8-9 ತಿಂಗಳ ತನಕ ಹೊಲದಲ್ಲಿ ಬೆಳೆಯಲು ಬಿಟ್ಟಾಗ ನಾರು ಬಂದು  ತೂಕ ಬರುತ್ತದೆ. ಉತ್ಪಾದನೆ ಹೆಚ್ಚಾಗುತ್ತದೆ.
end of the article:———————————————-
search words: Ginger cultivation# ginger manure schedule# ginger growing technique# how to get good yield in ginger# ginger growing method# manure schedule# high yield in ginger#

Leave a Reply

Your email address will not be published. Required fields are marked *

error: Content is protected !!