ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ

by | Nov 23, 2020 | Arecanut (ಆಡಿಕೆ), Krushi Abhivruddi, Pest Control (ಕೀಟ ನಿಯಂತ್ರಣ) | 0 comments

ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ  ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ.

ಸಿಂಬಳದ ಹುಳು ಅಡಿಕೆ ಹಾಳೆಯಲ್ಲಿ  snail  which harm inflorescence

  • ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ.
  • ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ ಬದುಕುತ್ತವೆ.
  • ನೆಲದಲ್ಲೇ ಸಂತಾನಾಭಿವೃದ್ದಿಯಾಗುತ್ತದೆ.
  • ಅವು  ನೆಲದಲ್ಲಿ ಆಹಾರದ ಕೊರತೆ ಆದಾಗ ಬೇರೆ ಆಹಾರವನ್ನು ಹುಡುಕುತ್ತವೆ.
  • ಅಡಿಕೆ ತೋಟದಲ್ಲಿ ಹುಲ್ಲು ಇತ್ಯಾದಿ ಕಳೆಗಳು ಇರುವಾಗ ಅದಕ್ಕೆ ಬೇಕಾದ ತಂಪು ವಾತಾವರಣ   ಸಿಕ್ಕುತ್ತದೆ.
  • ಅಲ್ಲಿ ಅವು ತಮ್ಮ ಆಹಾರ ಹುಡುಕುತ್ತಾ ಮರವನ್ನು ಏರಿ ಸಿಂಗಾರವನ್ನು  ತಿನ್ನುತ್ತವೆ.

ಅಡಿಕೆ ಮರದ ಸಿಂಗಾರಕ್ಕೆ ಹಾನಿ:

ಸಿಂಬಳ ಹುಳುವಿನ ಮರಿ.

  • ಅಡಿಕೆ ಮರದಲ್ಲಿ ಅದರಲ್ಲೂ ಸಣ್ಣ ಮರಗಳಿಗೆ , ಹೊಸತಾಗಿ ಫಲ ಕೊಡಲು ಪ್ರಾರಂಭವಾದ ಮರಗಳಿಗೆ ಇದರ ಉಪಟಳ ಹೆಚ್ಚು.
  • ತೀರಾ ಎಳೆ ಭಾಗವನ್ನು ಇದು ತಿನ್ನುತ್ತದೆ, ಬುಡ ಭಾಗದಲ್ಲಿ ತಿನಲು ಪ್ರಾರಂಭಿಸಿದರೆ ಅರ್ಧ ಕ್ಕೂ ಹೆಚ್ಚು ಸಿಂಗಾರವನ್ನು ತಿನ್ನುವುದೂ ಉಂಟು.
  • ಹೆಚ್ಚು ಆಹಾರ ಸಿಕ್ಕಿದಷ್ಟೂ ಇವುಗಳ ಸಂತಾನಾತೋತ್ಪತ್ತಿಯೂ ಅಲ್ಲಿ ನಡೆದು ಸಂಖ್ಯೆ ಹೆಚ್ಚುತ್ತದೆ.
  • ಇದನ್ನು ನಿರ್ಲಕ್ಷ್ಯ ಮಾಡದೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು.
  • ಹಾಗೆಂದು ಇದನ್ನು ಕೊಲ್ಲವಿ ವಿಷ ಪ್ರಯೋಗ ಅಥವಾ ಇನ್ನೇನಾದರೂ ಬೇರೆ ಜೀವಿಗಳಿಗೆ ತೊಂದರೆ ಉಂಟಾಗುವ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಲ್ಲ.
  • ಸುರಕ್ಷಿತ ವಿಧಾಅನಗಳಿಂದ ಇದನ್ನು ನಿಯಂತ್ರಣ ಮಾಡುವುದು ಉತ್ತಮ.

ಯಾವ ವಿಧಾನ ಸೂಕ್ತ:

  • ಬಸವನ ಹುಳು ನಿಯತ್ರಣಕ್ಕೆ ವಿಷ ಪ್ರಯೋಗ ಮಾಡುವುದು ಸೂಕ್ತವಲ್ಲ.
  • ಬಸವನ ಹುಳವನ್ನು ಭಕ್ಷಿಸುವ  ಕೆಲವು ಜೀವಿಗಳಿದ್ದು,
  • ಅವುಗಳಿಗೆ ಇದರಿಂದ ತೊಂದರೆ ಉಂಟಾಗುತ್ತದೆ.
  • ಸುರಕ್ಷಿತ ವಿಧಾನವಾಗಿ ಬಸವನ ಹುಳವನ್ನು ನಿಯಂತ್ರಿಸಲು ಇರುವ ವ್ಯವಸ್ಥೆ ಎಂದರೆ  ನೆಲದಲ್ಲೇ ಇವುಗಳನ್ನು ಬಂಧಿಸುವುದು,ಮತ್ತು ನಾಶ ಮಾಡುವುದು.
  • ಒಂದು ಒದ್ದೆ ಗೋಣಿ ಚೀಲವನ್ನು  ನೆರಳು ಇರನೆಲದಲ್ಲಿ ಹಾಸಿದರೆ ಅದರ ಅಡಿ ಭಾಗದಲ್ಲಿ ಬಸವನ ಹುಳು  ಬರುತ್ತದೆ.
  • ಹೆಚ್ಚಾಗಿ ಇದು ಕತ್ತಲೆಯಲ್ಲಿ ಈ  ಭಾಗದಲ್ಲಿ ಅಡಗಿರುತ್ತವೆ.
  • ಹಗಲಿನಲ್ಲೂ ಆಲ್ಲಿ ಇರುತ್ತವೆ.
  • ಆ ಭಾಗಕ್ಕೆ ಉಪ್ಪಿನ ದ್ರಾವಣವನ್ನು ಸಿಂಪರಣೆ ಮಾಡುವುದರಿಂದ ಸಿಂಬಳದ ಹುಳು ಸಾಯುತ್ತದೆ.

ನೆಲಕ್ಕೆ ಸುಣ್ಣ   ಹಾಕಿದರೆ ಸ್ಪರ್ಶವಾದ ಬಸವನ ಹುಳ ಸಾಯುತ್ತದೆ.   ಕಳೆಗಳನ್ನು ತೆಗೆದು ನೆಲಕ್ಕೆ ಬಿಸಿಲು ಬಿದ್ದರೆ  ಹುಳ ದೂರವಾಗುತ್ತದೆ. ಬಿದ್ದ ಅಡಿಕೆ ಹಾಳೆಗಳನ್ನು ತೆಗೆದು ದೂರ ಹಾಕಬೇಕು. ಸತ್ತ ಬಾಳೆಗಳನ್ನು ಬಾಳೆ ಎಲೆಗಳನ್ನು ದೂರ ಹಾಕಬೇಕು.

  • ಮರದ ಕಾಂಡಕ್ಕೆ ಸುಣ್ಣ ಮತ್ತು ಮೈಲು ತುತ್ತೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ  ಪೈಂಟ್ ತರಹ ಲೇಪನ ಮಾಡುವುದರಿಂದ ಸಿಂಬಳದ ಹುಳು ಅದರ ಮೇಲೆ ಹತ್ತುವುದಿಲ್ಲ.
  • ಸುಣ್ಣ ಮತ್ತು ಮೈಲು ತುತ್ತೆ ಸಿಂಬಳದ ಹುಳಗಳನ್ನು   ಸಾಯುವಂತೆ   ಮಾಡುತ್ತದೆ.
  • ಡೆಟ್ಟಾಲ್ (dettol) ಎಂಬ ಸೋಕು ನಿವಾರಕವು ಸಹ ದ್ರವೀಕರಿಸಿದಾಗ ಸಿಂಬಳದ ಹುಳುವನ್ನು ಸಾಯುವಂತೆ ಮಾಡುತ್ತದೆ.
  • ಆದನ್ನು ದ್ರವೀಕರಿಸಿ ಎಲ್ಲಿ ಸಂಖ್ಯೆ ಹೆಚ್ಚು ಇರುತ್ತದೆಯೋ ಅಲ್ಲಿಗೆ ಸಿಂಪರಣೆ ಮಾಡಬೇಕು.

ತೋಟದಲ್ಲಿ ಹುಲ್ಲುಗಳನ್ನು ತೆಗೆದು ಸ್ವಚ್ಚಮಾಡಿ, ಸಿಂಬಳದ ಹುಳುಗಳಿಗೆ ಅನನುಕೂಲವಾಗುವಂತೆ ಮಾಡಬೇಕು. ಸತ್ತ ಬಾಳೆ ದಂಟು, ಅಡಿಕೆ  ಹಾಳೆ ಇತ್ಯಾದಿಗಳನ್ನು ಬುಡದಲ್ಲಿ ಹಾಕದೆ ಬೇರೆ ಕಡೆ ಹಾಕಬೇಕು. ಇದರ ಅಡಿಯಲ್ಲಿ ತಂಪು ಇರುವ ಕಾರಣ ಅಲ್ಲಿ ಇವು ವಾಸವಾಗುತ್ತದೆ. ನೆಲಕ್ಕೆ ಸರಿಯಾಗಿ ಬಿಸಿಲು  ಬೀಳುವಾಗ ಅವು ತನ್ನಷ್ಟಕ್ಕೇ ನಾಶವಾಗುತ್ತವೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!