ಲಕ್ಷ್ಮಣ ಫಲ – ಇದು ಕ್ಯಾನ್ಸರ್ ನಿವಾರಕವೇ? ಇಲ್ಲಿದೆ ವಾಸ್ತವ.

Lakshmana phala

ಕೆಲವು ಹಣ್ಣು ಹಂಪಲುಗಳಲ್ಲಿ ಒಮ್ಮೊಮ್ಮೆ ಭಾರೀ ಔಷಧೀಯ ಮಹತ್ವ ಬಂದು ಅದಕ್ಕೆ ಬೆಲೆ ಬರುತ್ತದೆ. ಹಾಗೆ ನೋಡಿದರೆ  ಇಂತಹ ಔಷಧೀಯ ಗುಣದ ಹಣ್ಣು ಹಂಪಲುಗಳು, ಕಾಯಿ, ಎಲೆ ಸೊಪ್ಪುಗಳು ಎಷ್ಟು ನಮ್ಮಲ್ಲಿವೆಯೋ ಯಾರಿಗೆ ಗೊತ್ತು? ಕೆಲವು ಪ್ರಚಾರಕ್ಕೆ ಬಂದು ಕೆಲವರಿಗೆ ಅದು ಲಾಭ ಮಾಡಿಕೊಡುತ್ತವೆ. ಇಂತಹ ಹಣ್ಣುಗಳ ಸಾಲಿನಲ್ಲಿ ಬಂದ ಒಂದು ಹಣ್ಣು ಲಕ್ಷ್ಮಣ ಫಲ ಎಂಬ ಒಂದು ಹುಳಿ ಹಣ್ಣು. ಯಾರೋ ಲಕ್ಷ್ಮಣ ಫಲ ಎಂಬುದು ಭಾರೀ  ಔಷಧೀಯ ಮಹತ್ವವನ್ನು ಹೊಂದಿದೆ ಎಂದರು ಅದಕ್ಕೆ ಈಗ ಭಾರೀ ಬೇಡಿಕೆ ಬಂದಿದೆ.

Soar apple fruit

ಎನಿದು ಲಕ್ಷ್ಮಣ ಫಲ:

  • ಇದು ಸೀತಾಫಲ- ರಾಮ ಫಲ ಕುಂಟುಂಬಕ್ಕೆ ಸೇರಿದ ಒಂದು ಫಲ.
  • ಇದು ಬಹಳ ಹಿಂದಿನಿಂದಲೂ ನಮ್ಮಲ್ಲಿ ಬೆಳೆಯುತ್ತಿತ್ತು.
  • ಇದರ ಹಣ್ಣಿನ ತಿರುಳು ಸಿಹಿ ಅಲ್ಲ. ಸ್ವಲ್ಪ ಹುಳಿ. (Soarsop apple or Prickly fruit)
  • ಆದ ಕಾರಣ ಇದಕ್ಕೆ ಹಣ್ಣಿನ ಮಾರುಕಟ್ಟೆಯಲ್ಲಿ ಸ್ಥಾನ ದೊರೆತಿಲ್ಲ ಆದರೆ ಅದರ ಔಷಧೀಯ ಗುಣದಿಂದಾಗಿ ಈಗ ಮಾರುಕಟ್ಟೆ ಮೌಲ್ಯ ಬಂದಿದೆ.
  • ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆ ಎಂಬ ಕಾರಣಕ್ಕೆ ಈ ಹಣ್ಣಿಗೆ ಈಗ ಮಾರುಕಟ್ಟೆಯಲ್ಲಿ ಕಿಲೋ 200 ರೂ. ಗಳಿಗೂ ಹೆಚ್ಚಿನ ಬೆಲೆ ಇದೆ.
  • ರೈತರಿಂದ ಇದನ್ನು ಬೇಡಿಕೆ ಹೊಂದಿ 100 ರೂ ತನಕವೂ ಖರೀದಿ ಮಾಡಲಾಗುತ್ತಿದೆ.
  • ಈಗ ಬಹಳ ಜನ ಇದನ್ನು ಬೆಳೆಸಿದ್ದಾರೆ. ಅಪರೂಪವಾಗಿದ್ದ ಹಣ್ಣು ಈಗ ಎಲ್ಲೆಡೆಯಲ್ಲೂ ಲಭ್ಯವಿದೆ.

ಇದಕ್ಕೆ ಕ್ಯಾನ್ಸರ್ ಗಡ್ಡೆಗಳನ್ನು ಕೊಲ್ಲುವ ಗುಣ ಇದೆ ಎಂಬ ಪ್ರಚಾರ ಇದೆ. ಇದರ ಹಣ್ಣಿನ ತಿರುಳಿನಲ್ಲಿ actogenins ಅಂಶ ಇದ್ದು ಇದು ಆ ಕೆಲಸವನ್ನು ಮಾಡುತ್ತದೆ ಎಂಬುದಾಗಿ ಹೇಳುತ್ತಾರೆ. ಈ ಬಗ್ಗೆ ವಿದೇಶಗಳಲ್ಲೂ ಸಂಶೋಧನೆಗಳು ಆದ ಬಗ್ಗೆ ಕೆಲವು ಬರಹಗಳು ಇವೆ.( Cancer Association of South Africa (CANSA), Soursop is 10,000 times stronger in slowing growth of cancer cells compared to chemotherapy without the side effects of the latter.)

  • ಇದರ ಹಣ್ಣು, ಎಲೆ ಬೇರು ಗಳಿಗೆ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದೆ ಎನ್ನುತ್ತದೆ ಕೆಲವು ಸಂಶೊಧನಾ ವರದಿಗಳು.
  • ಇದು ಕಲ್ಪಿತ  ವರದಿಯೋ ನೈಜವೋ ಎಂಬುದರ ಬಗ್ಗೆ ಸಾಕಷ್ಟು ಪುರಾವೆಗಳು ಸಿಗುತ್ತಿಲ್ಲ.
  • ಇರುವ ಪುರಾವೆಗಳು ಹೇಳುವುದು ಹೀಗೆ. People claim it helps kill cancerous cells better than chemotherapy and has no side effects.
  • ಯಾವ ಅಧ್ಯಯನದಿಂದ ಸಾಬೀತಾಗಿದೆ ಎಂಬ ಬಗ್ಗೆ ಸ್ಪಷ್ಟ ವರದಿಗಳಿಲ್ಲ.

Soar apple sales

ಪ್ರಚಾರದ ಭರ:

  • ಸುಮಾರು 10 ವರ್ಷಕ್ಕೆ ಹಿಂದೆ ಈ ಪ್ರಚಾರ ಪ್ರಾರಂಭವಾಯಿತು.
  • ಆಗಿಂದಲೇ  ಇದರ ಸಸ್ಯೋತ್ಪಾದನೆ ಪ್ರಾರಂಭವಾಗಿದೆ.
  • ಆ ತನಕ ಇದರ ಬಗ್ಗೆ ಯಾವ ಔಷಧೀಯ ಗುಣಗಳ ಬಗ್ಗೆ ಪ್ರಚಾರ ಇರಲಿಲ್ಲ.
  • ಬಹುಷಃ ಇದು ಮಹಾರಾಷ್ಟ್ರ  ಮೂಲದಿಂದ ಉಂಟಾದ ಪ್ರಚಾರ ಇರಬೇಕು.
  • ಗೋವಾ ಸುತ್ತಮುತ್ತ ನರ್ಸರಿಗಳಲ್ಲಿ ಈ ಪ್ರಚಾರ ಪ್ರಾರಂಭವಾದ ಸಮಯದಲ್ಲಿ ಭಾರೀ ಸಸ್ಯ ವ್ಯಾಪಾರ ನಡೆಯುತ್ತಿತ್ತು.
  • ಮೂಲತಹ ಇದು ಮಹಾರಾಷ್ಟ್ರದ  ಕೆಲವು ಭಾಗಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ ಎಂಬ ಬಗ್ಗೆ  ವೆಂಗುರ್ಲಾದ ಹಣ್ಣಿನ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು 2007 ರಲ್ಲಿಯೇ  ಹೇಳಿದ್ದರು.
  • ಎಲ್ಲಿಂದ ಪ್ರಚಾರದ ಗಾಳಿ ಬೀಸಿತೋ ತಿಳಿಯದು ಈ ಹಣ್ಣಿಗೆ ಬೇಡಿಕೆ ಪ್ರಾರಂಭವಾಯಿತು.
  • ತೀರಾ ಅಪರೂಪದಲ್ಲಿ ಅಲ್ಲಲ್ಲಿ ಕಾಣ ಸಿಗುತ್ತಿದ್ದ ಮರಗಳು ಈಗ  ಪ್ರತೀ ಮನೆಯಲ್ಲೂ ಇರುವಂತಾಗಿದೆ.
  • ಇದರ ಬೀಜ ಹುಟ್ಟಿ ಸಸಿಯಾಗುತ್ತದೆ. ಸಸಿ ನೆಟ್ಟು 3 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ.

laxmana phala tree

ವಾಸ್ತವಿಕತೆ:

  • ಕೆಲವೇ ಕೆಲವು ಜನರಿಗೆ ಇದು ಕ್ಯಾನ್ಸರ್ ಅನ್ನು ಗುಣ ಪಡಿಸಿದ್ದು ಇರಬಹುದಾದರೂ ಬಹಳಷ್ಟು ಜನರಿಗೆ ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ.
  • ಮಾರಾಟ ಮಾಡಿದ ಅಂಗಡಿಯವನನಲ್ಲಿ  ಇದರಿಂದ ಗುಣಮುಖರಾದವರ ಯಾವ ವಿಳಾಸವೂ ಸಿಗುವುದಿಲ್ಲ.
  • ಇದನ್ನು ತಿಂದು ನನಗೆ ಕ್ಯಾನ್ಸರ್  ಗುಣವಾಗಿದೆ ಎಂದು ಹೇಳುವವರು ಬಹುಷಃ ಯಾರೂ ಇಲ್ಲವೇನೋ?
  • ಮುಳುಗುವವನಿಗೆ  ಹುಲ್ಲು ಕಡ್ಡಿಯೂ ಆಸರೆಯಾದಂತೆ ಕ್ಯಾನ್ಸರ್ ಖಾಯಿಲೆ ಬಂದವರು ಇದನ್ನು ಕೊಂಡು ಬಳಸುವುದು ಹೌದು.
  • ಆದರೆ ಅದರಿಂದ ಗುಣವಾಗುತ್ತದೆ ಎಂಬ ಆಶೆಯಲ್ಲಿ ಅಷ್ಟೇ.
  • ಇದು ಕೆಲವು ಸಾಮಾನ್ಯ ಕ್ಯಾನ್ಸರ್ ಗಡ್ಡೆಗಳನ್ನು ಬೆಳೆಯದಂತೆ ಮಾಡಬಹುದು.
  • ಅಥವಾ ನಮ್ಮ  ನಂಬಿಕೆಯ ಮೇಲೆ ಕೆಲವು ಸಮಯದ ತನಕ  ಉಲ್ಬಣ ಆಗದೆ ಇರಬಹುದು.
  • ಆದರೆ ಇದು ಸಾರ್ವತ್ರಿಕ ಸತ್ಯ ಅಲ್ಲ. ಇದನ್ನು ಬೆಳೆಸುವಷ್ಟು  ಲಾಭದಾಯಕ ಬೆಳೆ ಅಲ್ಲ.
  • ಇದರ ಒು ಎರಡು ಗಿಡಗಳು ಹೊಲದ ಯಾವುದಾದರೂ ಸಂದಿನಲ್ಲಿ ಬೆಳೆಯುತ್ತಿದ್ದರೆ ಅದನ್ನು  ಬೇಕಿದ್ದರೆ ಮಾತ್ರ ಬಳಕೆ ಮಾಡಬಹುದು.
  • ಇದೆಲ್ಲಾ ಪ್ರಚಾರ ಬಾಯಿಯಿಂದ ಬಾಯಿಗೆ ಬಂದ ಪ್ರಚಾರವೇ ಹೊರತು ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ಸಾಬೀತಾದುದು ಅಲ್ಲ.

ಕೆಲವು ಜನ ಯಾವುದಾದರೂ ಒಂದು ದಾರಿಯ ಮೂಲಕ ಸಂಪಾದನೆ  ಮಾಡಲು ಏನಾದ್ರೂ ಒಂದು ದಾರಿ ಹುಡುಕುತ್ತಾ ಇರುತ್ತಾರೆ. ಒಮ್ಮೊಮ್ಮೆ ಒಂದೊಂದು ವೇಷಗಳನ್ನು ಹಾಕಿ ಇದರಲ್ಲಿ ಸಂಪಾದನೆ ಮಾಡಿಕೊಳ್ಳುತಾರೆ. ಹೀಗೆ ಅದ  ಹಣ್ಣು ಇದು ಎಂದರೆ ತಪ್ಪಾಗಲಾರದು. ಲಕ್ಷ್ಮಣ ಫಲ ಬಳಸಿ  ಕ್ಯಾನ್ಸರ್ ಖಾಯಿಲೆ ಗುಣಮುಖವಾದವರು ಇದ್ದರೆ ತಿಳಿಸಿ. ಇದು  ಓದುಗರಿಗೆ ಮಾಹಿತಿ ಅಷ್ಟೇ.

Leave a Reply

Your email address will not be published. Required fields are marked *

error: Content is protected !!