ಕೀಟನಾಶಕ ಇಲ್ಲದೆ ಅಡಿಕೆ ಉಳಿಸಬಹುದು.

ಕೀಟನಾಶಕ ಬಳಸದೆ ಅಡಿಕೆ ಉಳಿಸಿಕೊಂಡವರು ಇದ್ದಾರೆ. ಕೆಲವರು ಅಡಿಕೆ ಮಿಡಿ ಉಳಿಸಲು ಪ್ರತೀ ಹೂ ಗೊಂಚಲಿಗೂ ತಿಂಗಳು ತಿಂಗಳು ಕೀಟ ನಾಶಕ ಸಿಂಪಡಿಸುವವರೂ ಇದ್ದಾರೆ. ಸಿಂಪಡಿಸದವರಲ್ಲೂ ಫಸಲು ಇದೆ. ಸಿಂಪಡಿಸಿದಲ್ಲಿಯೂ ಫಸಲು ಇದೆ. ಹೀಗಿರುವಾಗ ಅಡಿಕೆ ಮರದ ಆರೋಗ್ಯ ಹೊಂದಿಕೊಂಡು ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು.

ಮೊದಲ ಹೂಗೊಂಚಲು ಹಾಳಾದರೂ ನಂತರ ಒಂದರ ನಂತರ ಒಂದರಂತೆ ಹೂ ಗೊಂಚಲು ಇದ್ದಾಗ ಕಾಯಿ ಸೆಟ್ ಆಗುತ್ತದೆ.
  • ಅಡಿಕೆ ಮರದ ಹೂ ಗೊಂಚಲಿಗೆ ಬರುವ ಕೀಟಗಳಲ್ಲಿ ಈ ತನಕ ಗುರುತಿಸಲಾದದ್ದು,
  • ಸಿಂಗಾರ ತಿನ್ನುವ ಕಂಬಳಿ ಹುಳ. ಬಸವನ ಹುಳ ಪೆಂಟಟೋಮಿಡ್  ಬಗ್.
  • ಇದಲ್ಲದೆ ಬೇರೆ ಕೀಟಗಳನ್ನು ಗುರುತಿಸಲಾಗಿಲ್ಲ.


Click to WhatsApp us and build your website now! 

  • ಕೆಲಮೊಮ್ಮೆ ಅಧಿಕ ತಾಪಮಾನ ಉಂಟಾದಾಗ ಕೆಂಪು ಮೈಟ್ ಗಳು ಎಲೆಗೆ ಬಾಧಿಸಿ ಮಿಡಿ ಕಾಯಿಗೂ ಬಾಧಿಸುವುದಿದೆ.
  • ಇವುಗಳನ್ನು ರಾಸಾಯನಿಕ ಕೀಟನಾಶಕ ಇಲ್ಲದೆ ನಿವಾರಣೆ ಮಾಡಲು ಅಸಾಧ್ಯವೇನೂ ಇಲ್ಲ.

ಕಾಯಿ ಕಚ್ಚುವ ಪ್ರಕ್ರಿಯೆ:

ಈ ಹಂತದಲ್ಲಿ ಪರಾಗ ದೊರೆಯಬೇಕು.
  • ಅಡಿಕೆ ಮರದಲ್ಲಿ ಸಿಂಗಾರದಲ್ಲಿ ಮಿಡಿ ಉದುರುವುದಕ್ಕೆ 10-15 % ಕಾರಣ  ಕೀಟ.
  • ಬಹುತೇಕ ಕಾರಣ ಮರದ ಆರೋಗ್ಯ ಮತ್ತು ಸಮಯಕ್ಕನುಗುಣವಾಗಿ ದೊರೆಯುವ ಪೋಷಕಾಂಶ.
  • ಅಡಿಕೆ ಮರದ ಹೂ ಗೊಂಚಲಿನಲ್ಲಿ ಸುಮಾರು 300-500 ತನಕ ಹೆಣ್ಣು ಹೂವುಗಳಿರುತ್ತವೆ.
  • ಇವುಗಳಲ್ಲಿ ಎಲ್ಲವೂ ಕಾಯಿ ಕಚ್ಚಿ ಸೆಟ್ ಆಗುವುದ್ದಿಲ್ಲ.
  • ಪ್ರಾರಂಭದ್ದು ಮತ್ತು ಕೊನೆಯ ಹೂ ಗೊಂಚಲಿನಲ್ಲಿ ಕಾಯಿ ಕಚ್ಚುವಿಕೆ ತುಂಬಾ ಕಡಿಮೆ.
  • ಮಧ್ಯದ ಹೂ ಗೊಂಚಲಿನಲ್ಲಿ ಜಾಸ್ತಿ.
  • ಮಧ್ಯದ ಹೂ ಗೊಂಚಲು ಅರಳುವ ಸಮಯದಲ್ಲಿ ಮರದಲ್ಲಿ ಕನಿಷ್ಟ ಮೂರು ಅರಳಿದ ಹೂ ಗೊಂಚಲುಗಳು ಇರುತ್ತವೆ.
  • ಮೂರರಲ್ಲಿ ಕೆಳಭಾಗದ ಒಂದು ಗೊಂಚಲು ಕಾಯಿ ಕಚ್ಚಿ ಮಿಡಿಯಾಗಿರುತ್ತದೆ.
  • ಅದರ ಮೇಲ್ಭಾಗದ ಹೂಗೊಂಚಲು, ಪರಾಗ ಸ್ವೀಕಾರಕ್ಕೆ ಸಿದ್ದವಾಗಿರುತ್ತದೆ.
  • ಮೂರನೆಯದ್ದು ಆಗಷ್ಟೇ ಹೂ ಗೊಂಚಲು ಅರಳಿ ಅದರಲ್ಲಿ ಗಂಡು ಹೂವುಗಳು ಅರಳುತ್ತಿರುತ್ತವೆ.
ಪರಾಗ ಕಣಗಳುಳ್ಳ ಗಂಡು ಹೂವು ಹೆಚ್ಚುಇದ್ದಾಗ ಕಾಯಿ ಸೆಟ್ಟಿಂಗ್ ಜಾಸ್ತಿ
  • ಇಂತಹ ಸನ್ನಿವೇಶದಲ್ಲಿ ಮಧ್ಯಭಾಗದ ಹೂ ಗೊಂಚಲಿನಲ್ಲಿ ಹೆಚ್ಚು ಕಾಯಿ ಕಚ್ಚಲು  ಗರಿಷ್ಟ ಪರಾಗ ದೊರೆಯುತ್ತದೆ.
  • ಆಗ ತೋಟದ ಬೇರೆ ಬೇರೆ ಮರಗಳಲ್ಲೂ ಹೂ ಗೊಂಚಲು ಅರಳಿದ್ದು ಬಹುತೇಕ ಎಲ್ಲಾ ಮರಗಳಲ್ಲೂ  ಹೂ ಗೊಂಚಲು ಇರುತ್ತವೆ.
  • ಹೀಗಿರುವಾಗ ಕಾಯಿ ಕಚ್ಚಲು  ಬೇಕಾದಷ್ಟು ಪರಾಗ ಕಣಗಳೂ ಗಾಳಿಯಲ್ಲಿ  ಇರುತ್ತದೆ.
  • ಈ ಕಾರಣದಿಂದ ನಡು ಗೊನೆಗಳಲ್ಲಿ ಕಾಯಿ ಹೆಚ್ಚು. ಉಳಿದವುಗಳಲ್ಲಿ ಕಡಿಮೆ.

ಕೀಟ ನಾಶಕ ಬೇಕೇ:

  • ಮೊದಲ ಹೂ ಗೊಂಚಲು ಬರುವ ಸಮಯದಲ್ಲಿ ಹೆಚ್ಚಾಗಿ ಹೂ ಗೊಂಚಲು ತಿನ್ನುವ ಹುಳು ಇರುವ ಸಾಧ್ಯತೆ ಇರುತ್ತದೆ.
  • ಅಂತಹ ಹೂ ಗೊಂಚಲಿನಲ್ಲಿ ಕಾಯಿ ಕಚ್ಚುವಿಕೆ ಕಡಿಮೆ.
  • ಹಾಳೆ ಉದುರಿ ಮೂರು ನಾಲ್ಕು ದಿನ ಕವಚ ಬಿಡಿಸಿಕೊಳ್ಳದೇ ಇದ್ದರೆ, ಹೊರ ನೋಟಕ್ಕೆ ಗಂಟು ಕಟ್ಟಿದಂತೆ ಕಂಡರೆ,  ಸಣ್ಣ ಗಾತ್ರದ ಹೂಗೊಂಚಲು ಆಗಿದ್ದರೆ ಅದನ್ನು ಗೊನೆ ತೆಗೆದಂತೆ ದೋಟಿಯಲ್ಲಿ ತೆಗೆದು ಸುಡುವುದು ಉತ್ತಮ. ಆಗ ಹುಳ ನಾಶವಾಗುತ್ತದೆ.
  • ಈ ಕ್ರಮದಲ್ಲಿ ಸಿಂಗಾರ ತಿನ್ನುವ ಹುಳವನ್ನು ಬಹುತೇಕ ನಾಶ ಮಾಡಬಹುದು. ಸಿಂಪರಣೆಗೆ ತಗಲುವ ಮಜೂರಿ ಮಾತ್ರ ನಷ್ಟ. ಕೀಟನಾಶಕದ ಖರ್ಚು ಉಳಿತಾಯ.

ಶಿಲೀಂದ್ರ ಮತ್ತು ನೀರಾವರಿ:

ಇಂತಹ ಹೂ ಗೊಂಚಲಿನಲ್ಲಿಹೆಣ್ಣು ಹೂವುಗಳೇ ಇಲ್ಲದ ಕಾರಣ ಅದು ಒಣಗುವುದು ಸಹಜ
ಹೂ ಗೊಂಚಲುಗಳಿಗೆ ತಾಪಮಾನ ಹೆಚ್ಚಾಗುವ ಕಾರಣ ಶಿಲೀಂದ್ರ ಬಾಧೆ Colletotrichum gloeosporioides   ಬರಬಹುದು. ಪೆಂಟಟೋಮಿಡ್ ಬಗ್ ಬರಲೂ ಬಹುದು. ಇದರ ನಿವಾರಣೆಗೆ ಕೀಟ ನಾಶಕ ರಹಿತ ಪರಿಹಾರ ಇಲ್ಲದಿಲ್ಲ.
  • ಅಡಿಕೆ ಮರಗಳಿಗೆ ಆತಿಯಾಗಿ ನೀರುಣಿಸುವುದು ಸೂಕ್ತವಲ್ಲ.
  • ಒಂದು ಅಡಿಕೆ ಮರಕ್ಕೆ ದಿನಕ್ಕೆ 20 ಲೀ. ಗರಿಷ್ಟ ನೀರಿನ ಅವಶ್ಯಕತೆ.
  • ಇದಕ್ಕಿಂತ ಹೆಚ್ಚಾದರೆ ಶಿಲೀಂದ್ರ ಬೆಳೆವಣಿಗೆಗೆ ಅನುಕೂಲವಾಗುತ್ತದೆ.
  • ನೆಲವನ್ನು ನೆನೆಯುವಂತೆ ನೀರಾವರಿ ಮಾಡಬಾರದು.
  • ಈ ಶಿಲೀಂದ್ರ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದಾಗ  ಜಾಸ್ತಿ.
  • ಎಷ್ಟು ಬೇಕೋ ಅಷ್ಟೇ ನೀರನ್ನು ಕೊಡುವುದರಿಂದ ಇದರ ತೊಂದರೆ ಕಡಿಮೆ ಮಾಡಬಹುದು.
  • ಒಣ ಹೂ ಗೊಂಚಲಿನಲ್ಲಿ ಶಿಲೀಂದ್ರ ಇರುವ ಕಾರಣ ಅದನ್ನು ಸ್ವಲ್ಪವೂ ಮರದಲ್ಲಿ ಉಳಿಸದೇ ಅಡಿಕೆ ತೆಗೆಯುವಾಗ ಸ್ವಚ್ಚವಾಗಿ ತೆಗೆಯ ಬೇಕು.
ಈ ತೊಂದರೆ ನಿವಾರಣೆಗೆ ಪೊಟ್ಯಾಶಿಯಂ ಫೋಸ್ಫೈಡ್ ಆಗುತ್ತದೆ
ಮಲೆನಾಡಿನಲ್ಲಿ ಕೆಂಪಡಿಕೆ ಮಾಡುವವರು ಗೊನೆಯನ್ನು ತೆಗೆಯುವ ಕಾರಣ ಈ ಶಿಲೀಂದ್ರ ಬಾಧೆಯ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಶಿಲೀಂದ್ರ  ನಿವಾರಣೆಗೆ ಪೊಟಾಶಿಯಂ ಫೋಸ್ಫೆಡ್ Potassium phosphite ಸಹ ಆಗುತ್ತದೆ ಎಂಬುದು ಸಂಶೋಧನೆಯಿಂದ ದೃಢ ಪಟ್ಟಿದೆ. ಇದು ವಿಷಕಾರಿ ಅಲ್ಲ.

ಕೀಟಗಳ ನಿಯಂತ್ರಣ:

ಈ ಹಂತದ ಹೂ ಗೊಂಚಲಿಗೆ ಸಿಂಪರಣೆ ಅಗತ್ಯವಿಲ್ಲ. ಇದು ಪರಾಗದಾನಿಗಳಿಗೆ ತೊಂದರೆ
  • ಪೆಂಟಟೋಮಿಡ್ ಬಗ್ ಮತ್ತು ಕೆಂಪು ಮೈಟ್ ಹಾವಳಿಗೆ ಪ್ರಭಲ ವಿಷ ರಾಸಾಯನಿಕ ಬಳಕೆ ಮಾಡಬೇಕಾಗಿಲ್ಲ.
  • ನೀರಿನಲ್ಲಿ ಕರಗುವ ಗಂಧಕ( wetteble sulphur) ವನ್ನು ಜನವರಿ ತಿಂಗಳಲ್ಲಿ ಒಮ್ಮೆ ಮರದ ಎಲೆಗಳಿಗೆ ಮತ್ತು ಹೂ ಗೊಂಚಲಿಗೆ ಸಿಂಪರಣೆ ಸಾಕಾಗುತ್ತದೆ.
  • ಇದು ಬರೇ ಕೀಟ ನಿಯಂತ್ರಕವಲ್ಲದೆ ಗಂಧಕ ಪೋಷಕಾಂಶವನ್ನೂ ಸಸ್ಯಕ್ಕೆ ಒದಗಿಸುತ್ತದೆ.
  • ಗಂಧಕವು ಮೈಟ್ ಮತ್ತು ಬಗ್ ಗಳ ವಿರುದ್ಧ  ಕೆಲಸ ಮಾಡುತ್ತದೆ.
  • ಸಸ್ಯಗಳಿಗೆ ಬರ ನಿರೋಧಕ ಶಕ್ತಿಯನ್ನು ಕೊಡುತ್ತದೆ.
  • ಇದು ಹಾನಿ ರಹಿತ ಕೀಟ ನಾಶಕ.

ಕೀಟನಾಶಕವನ್ನೇ ಬಳಸುವುದಾದರೆ ಮೆಲಾಥಿಯಾನ್ ನನ್ನು ಬಳಸಭುದು. ಇದು ಎರಡು ದಿನಗಳ ವಾಯಿದೆಯ ಕೀಟನಾಶಕ.

ಪೆಂಟಟೋಮಿಡ್ ಬಗ್ ನಿಂದ ಹಾನಿ

ಸಸ್ಯಗಳ ಆರೋಗ್ಯ:

  • ಅಡಿಕೆ ಮರಗಳಿಗೆ ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಷಕಗಳನ್ನು ಕೊಡುವುದು ಅಗತ್ಯ.
  • ಫೆಬ್ರವರಿ ತಿಂಗಳಿನಿಂದ ಮೇ ತನಕ ಅಧಿಕ ಪೋಷಕಗಳ ಬಳಕೆ ಆಗುತ್ತದೆ.
  • ಆಗ ಪ್ರತೀ ತಿಂಗಳೂ ಗೊಬ್ಬರ ಕೊಡುವುದರಿಂದ ಕಾಯಿ ಕಚ್ಚಲು ಅನುಕೂಲವಾಗುತ್ತದೆ.
  • ಬರೇ ಪೋಷಕಾಂಶ ಅಲ್ಲದೆ ಲಘು ಪೋಷಕಾಂಶವನ್ನೂ ತಿಂಗಳಿಗೆ ಒಂದು ಸಸಿಗೆ 1  ಗ್ರಾಂ ಪ್ರಮಾಣದಲ್ಲಿ ಕೊಡುವುದು ಉತ್ತಮ.

ಮರ ಅರೋಗ್ಯವಾಗಿದ್ದರೆ ಉದುರುವಿಕೆ ತುಂಬಾ ಕಡಿಮೆ

 
ಸಾವಯವ ಸಮೃದ್ಧ ಮಣ್ಣಿನಲ್ಲಿ ಕಾಯಿ ಕಚ್ಚುವ ಪ್ರಮಾಣಕ್ಕೂ ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಕಾಯಿ ಕಚ್ಚುವುದಕ್ಕೂ ವೆತ್ಯಾಸ ಇರುತ್ತದೆ. ಅದು ಇದೇ ಕಾರಣದಿಂದ.   

ಕೀಟನಾಶಕಗಳು- ರೋಗನಾಶಕಗಳು ಈಗ ಅಗ್ಗ ಅಲ್ಲ. ಅದರನ್ನು ಪೂರ್ತಿಯಾಗಿ ನಂಬುವುದೂ ಸಾದ್ಯವಿಲ್ಲ. ಶಿಲೀಂದ್ರ ನಾಶಕ ಒಂದರ ಭಾರೀ ಮಾರಾಟ ಜಾಲ ಅಡಿಕೆ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿದೆ. ಕರಾವಳಿ ಮಲೆನಾಡಿನ ಅಡಿಕೆ ಬೆಳೆಗಾರರಿಗಾಗಿ ಪ್ರತೀ ವರ್ಷ ಲೋಡ್ ಗಟ್ಟಲೆ ವ್ಯವಹಾರ ಮಾಡುತ್ತಿರುವುದು ಸತ್ಯ.

Leave a Reply

Your email address will not be published. Required fields are marked *

error: Content is protected !!