ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೃಷಿ ಶಿಕ್ಷಣದ ಅವಕಾಶಗಳು

ನಾಳೆಯೇ CET ಫಲಿತಾಂಶ. ಪಿಯುಸಿ ಪರೀಕ್ಷೆ ಬರೆದು ಸಿಇಟಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ  ಉನ್ನತ ವ್ಯಾಸಂಗದ ಆಯ್ಕೆಗೆ  ಇರುವ ಹಲವಾರು ಅವಕಾಶಗಳಲ್ಲಿ  ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ವಿಷಯಗಳು  ಜಾಗತಿಕ ಮನ್ನಣೆಯನ್ನು ಪಡೆದಿವೆ. ಇದರಲ್ಲಿ ಕೃಷಿಕರ ಮಕ್ಕಳಿಗೆ ಮೀಸಲಾತಿಯೂ ಇದೆ. ಈ ವರ್ಷ ಅದಕ್ಕಾಗಿಯೇ  ಇರುವ ಪರೀಕ್ಷೆಯೂ ಇಲ್ಲ. ಅದುದರಿಂದ ಈ ಕ್ಷೇತ್ರವು ನಿಮ್ಮ ಆಯ್ಕೆಗೆ ಸೂಕ್ತ ಎನ್ನಿಸುತ್ತದೆ.

  • ನಮ್ಮ ಮಕ್ಕಳನ್ನು ಯಾವ ದಾರಿಯಲ್ಲಿ ಮುನ್ನಡೆಸುವುದು ಎಂದು    ಪೋಷಕರು ಗೊಂದಲದಲ್ಲಿದ್ದಾರೆ.
  • ಪಡೆದಿರುವ ಅಂಕಗಳ ಕೊರತೆಯಿಲ್ಲದಿದ್ದರೂ ಇನ್ಯಾವುದೋ ಕಾರಣದಿಂದ ಆಯ್ಕೆಗಳಲ್ಲಿ ಗೊಂದಲ ಮತ್ತು ಮಾಹಿತಿಯ ಕೊರತೆ ಇರುತ್ತದೆ.
  •  ನಿಮ್ಮ ಆಯ್ಕೆಗೆ ಅನುಕೂಲವಾಗುವ  ಪದವಿ ಶಿಕ್ಷಣವನ್ನು ನೀಡಲು  ರಾಜ್ಯದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿ 6 ವಿಶ್ವವಿದ್ಯಾಲಯಗಳಿವೆ.

ಬಹು ಮುಖ ಅವಕಾಶಗಳು ಇವೆ:

  • ಇಂದು ಕೃಷಿ ಪದವಿಧರರು ಕಾರ್ಯ ನಿರ್ವಹಿಸದ ಕ್ಷೇತ್ರವೇ ಇಲ್ಲವೆನಿಸುತ್ತಿದೆ.
  • ಶಿಕ್ಷಣ, ಸಂಶೋಧನೆ, ಆಡಳಿತ, ಹಣಕಾಸು, ಸೇವಾಕ್ಷೇತ್ರ ಹಾಗೂ ಕೃಷಿ ಹೀಗೆ ಎಲ್ಲೆಲ್ಲೂ ಈ ಕ್ಷೇತ್ರದಲ್ಲಿ  ಅಧ್ಯ ಯನ ಮಾಡಿದವರು ಛಾಪು ಮೂಡಿಸಿದ್ದಾರೆ.
  • ಕೃಷಿ ಮತ್ತು ಕೃಷಿ ಸಂಬಂದಿ ಪದವಿಧರ ಸ್ಪೂರ್ತಿಯಿಂದಾಗಿ ಕೃಷಿ ಪದವಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಪೈಪೋಟಿ. 
  • ಕಳೆದ ಕೆಲವು ವರ್ಷಗಳಿಂದ ಕೃಷಿ ಪದವಿಯ ಪ್ರವೇಶವು ಕೂಡ ಸಿಇಟಿ ಮೂಲಕ ನಡೆಯುತ್ತಿದೆ.

 ಕೃಷಿ ಪದವಿಗೆ ಸೇರುವುದು ಅಲ್ಲಿ ದೊರಕುವ ಮೀಸಲಾತಿ ಸೌಲಭ್ಯ, ಮೀಸಲಾತಿಗೆ ಬೇಕಾಗಿರುವ ಪ್ರಮಾಣ ಪತ್ರಗಳು, ಕೃಷಿಕರ ಮಕ್ಕಳಿಗಾಗಿ ಮೀಸಲಿರುವ ಸೀಟುಗಳು ಮತ್ತು ಅವುಗಳ ಹಂಚಿಕೆ, ರಾಜ್ಯದಲ್ಲಿರುವ ಕೃಷಿ ಮತ್ತು ಕೃಷಿ ಸಂಬಂದಿ ಕಾಲೇಜುಗಳು, ಕಾಲೇಜುಗಳ ಕುರಿತಾದ ಮಾಹಿತಿಗಾಗಿ ಆಯಾ ಕಾಲೇಜುಗಳ ವಿಶ್ವವಿದ್ಯಾಲಯಗಳು ವೆಬ್ ವಿಳಾಸದೊಂದಿಗೆ ಈ ಲೇಖನವನ್ನು ಪ್ರಸ್ತುತ ಪಡಿಸಲಾಗುತ್ತಿದೆ. 

Agriculture university Dharwada
ಕೃಷಿ ವಿಶ್ವ ವಿಧ್ಯಾನಿಲಯ ದ್ರಾರವಾಡ.

ಕೃಷಿಕರ ಮಕ್ಕಳಿಗೆ 40 % ಮೀಸಲಾತಿ:

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯ ಫಲಿತಾಂಶ ಹಾಗೂ ಪಿಯುಸಿಯಲ್ಲಿ ಪಡೆದ ಅಂಕ ಎರಡನ್ನು ಸೇರಿಸಿ ರ್‍ಯಾಂಕ್  ಪಟ್ಟಿ ತಯಾರಿಸಿ ಕೆಇಎ ಕೌನ್ಸಿಲಿಂಗ್ ಮೂಲಕ ಸೀಟುಗಳನ್ನು ಭರ್ತಿ ಮಾಡುತ್ತದೆ.
  • ಸಿಇಟಿ ಪರೀಕ್ಷೆ ಬರೆದ ವಿಧ್ಯಾರ್ಥಿಗಳ ಸಿಇಟಿ ರ್‍ಯಾಂಕ್ ಗಳನ್ನು ಆಧರಿಸಿ ಸೀಟು ಪಡೆಯಬಹುದು.
  • ಆದರೆ ಕೃಷಿ ಕುಟುಂಬದಿಂದ ಬಂದ ಮಕ್ಕಳಿಗೆ ವಿಶೇಷ ಮೀಸಲಾತಿ ಇದೆ.
  • ಕೃಷಿಯ ಆದಾಯವೆ ಮೂಲ ಆದಾಯ ಇರುವವರ ಮಕ್ಕಳಿಗೆ ಕೃಷಿ ಪದವಿಗಳಲ್ಲಿ ಪ್ರತಿಶತ 40ರಷ್ಟು ಸೀಟುಗಳನ್ನು ಮೀಸಲು ಮಾಡಲಾಗಿದೆ.
  • ಈ ಸೀಟುಗಳನ್ನು ಪಡೆಯಲು ಸಿಇಟಿ ಜೊತೆಗೆ ಕೃಷಿಕರ ಮೀಸಲಾತಿಯಡಿ ಪಡೆದ ಅರ್ಹತೆಯನ್ನು ಪರಿಗಣಿಸಿ ಪ್ರತ್ಯೇಕ ರ್‍ಯಾಂಕ್    ಪಟ್ಟಿಯನ್ನು ಕೆಇಎ ಸಿದ್ದಪಡಿಸಿ ಸೀಟುಗಳ್ನು ಕೌನ್ಸಿಲಿಂಗ್ ಮೂಲಕ ಹಂಚುತ್ತದೆ.
  • ಯಾವುದೆ ಕೃಷಿ ವಿಶ್ವವಿದ್ಯಾಲಯದಲ್ಲೂ ಕೃಷಿ ಪದವಿಗಳ ಪ್ರವೇಶ ಪ್ರಕ್ರಿಯೆ ನೇರವಾಗಿ ಇರುವುದಿಲ್ಲ.  
Agriculture and Horticulture university Shivamogga
ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿಧ್ಯಾನಿಲಯ ಶಿವಮೊಗ್ಗ.

  ಮೀಸಲಾತಿಗಾಗಿ ಪರೀಕ್ಷೆ;

  • ಕೃಷಿಗೆ ಸಂಬಂಧಿಸಿದ ಐವತ್ತು ಚಿತ್ರ/ವಸ್ತು ಮಾದರಿಗಳನ್ನು ಇಡಲಾಗಿರುತ್ತದೆ. ಅವುಗಳನ್ನು ಗುರುತಿಸುವ ಅಧವಾ ಅವುಗಳಿಗೆ ಸಂಬಂಧಿಸಿದ ಪುಟ್ಟ ಪ್ರಶ್ನೆಗೆ ಉತ್ತರಿಸುವ ರೀತಿಯ ಬಹು ಆಯ್ಕೆ (ಮಲ್ಟಿಪಲ್ ಚಾಯ್ಸ್) ಪ್ರಶ್ನೆಗಳಿರುತ್ತವೆ.
  • ಇವುಗಳಿಗೆ ಉತ್ತರಿಸಲು ಸಿಇಟಿ ಮಾದರಿಯ ಓಎಂಆರ್ ಉತ್ತರ ಪತ್ರಿಕೆ ಇರುತ್ತವೆ.
  • ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳಂತೆ 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.
  • ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಸಾಮಾನ್ಯವಾಗಿ ಅರ್ಧನಿಮಿಷಗಳ ಕಾಲಾವಧಿ ನೀಡಲಾಗುತ್ತದೆ.

ಆದರೆ ಪ್ರಸಕ್ತ ಸಾಲಿನಲ್ಲಿ ಕರೋನ ಸಾಂಕ್ರಾಮಿಕ ರೋಗದಿಂದಾಗಿ ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ ಕೃಷಿಕರ ಮಕ್ಕಳಿಗೆ ನಡೆಸುವ ಪರೀಕ್ಷೆಯನ್ನು ರದ್ದುಪಡಿಸಿ ಮೀಸಲಿರುವ ಸೀಟುಗಳನ್ನು ಅರ್ಹರಿರುವ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಹಂಚಲಾಗುವುದು.

University of Horticulture sciences Bagalakote
ತೋಟಗಾರಿಕಾ ವಿಶ್ವ ವಿಧ್ಯಾನಿಲಯ ಬಾಗಲಕೊಟೆ

  • ಅರ್ಹ ಅಭ್ಯರ್ಥಿಗಳು ಸಲ್ಲಿಸುವ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸುವ ಬದಲಾಗಿ, ಆನ್‍ಲೈನ್ ಪರೀಶೀಲನೆ ಕೈಗೊಳ್ಳುತ್ತಿ ದೆ .
  • ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸುವಾಗ ಯಾವ ಕೇಂದ್ರದಲ್ಲಿ ದಾಖಲಾತಿ ಪರೀಶೀಲನೆಗೆ ಆಯ್ಕೆ ಮಾಡಿರುವರೋ ಅದೇ ಕೇಂದ್ರದಲ್ಲಿ ಸಂಬಂಧಿತ ವಿಶ್ವವಿದ್ಯಾಲಯಗಳಿಂದ ನಿಯೋಜಿಸಿದ ಸಮಿತಿ ಪರೀಶೀಲನೆ ಮಾಡುವುದು.
  • ಆನ್‍ಲೈನ್ ಪರೀಶೀಲನೆಗೆ ಸಿಇಟಿ ಪರೀಕ್ಷಾ ಪ್ರವೇಶ ಪತ್ರ, ವ್ಯವಸಾಯಗಾರರ ಪ್ರಮಾಣ ಪತ್ರ -3, ವ್ಯವಸಾಯದ/ಕೃಷಿ ಆದಾಯದ ಪ್ರಮಾಣ ಪತ್ರ -3, ವೇತನ  ದೃಢೀಕರಣ ಪತ್ರ -4, ಖಾಸಗಿ ವೃತ್ತಿಯಿಂದ ಆದಾಯದ ಪತ್ರ- 5, ಅಫಿಡವಿಟ್ (ಕೇವಲ 8ಇ, 8ಈ ಮತ್ತು 8ಉ ಒಟ್ಟು ಆದಾಯಕ್ಕೆ ಸಂಬಂಧಿಸಿದಂತೆ ಮಾತ್ರ) ದಾಖಲಾತಿಗಳನ್ನು ಆಗಸ್ಟ್ 18ರೊಳಗಾಗಿ ಎಲ್ಲಾ ವಿಶ್ವವಿದ್ಯಾಲಯಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಾಲತಾಣಗಳಲ್ಲಿ ಕಾಣಿಸುನ ಕೊಂಡಿಗಳಲ್ಲಿ ಲಾಗ್‍ಇನ್ ಮಾಡಿ ಸಲ್ಲಿಸಬೇಕು.
  • ಆನ್‍ಲೈನ್ ಪರೀಶೀಲನೆಗೆ ಸಲ್ಲಿಸಬೇಕಾದ ಶುಲ್ಕ ಸಾಮಾನ್ಯ ರೂ. 200/- ಮತ್ತು ಇತರೆ (ಪ.ಜಾ/ಪ.ಪ./ಪ ವರ್ಗ-1) ರೂ. 100/- ಗಳನ್ನು ಜಾಲತಾಣಗಳಲ್ಲಿ ನೀಡಿರುವ ಆನ್‍ಲೈನ್ ಸೌಲಭ್ಯ ಮೂಲಕ ತುಂಬಬಹುದಾಗಿದೆ.
  • ಶುಲ್ಕವನ್ನು ತುಂಬಿದ ನಂತರವೇ ಶುಲ್ಕ ರಶೀದಿ ಹಾಗೂ ದಾಖಲಾತಿಗಳನ್ನು ಒದಗಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದು.

University of Agriculture sciences Bangalore
ಕೃಷಿ ವಿಶ್ವ ವಿಧ್ಯಾನಿಲಯ ಬೆಂಗಳೂರು ಜಿಕೆವಿಕೆ.
ಚಿತ್ರ; ಇಂಟರ್‍ ನೆಟ್

 

ಕೃಷಿ ಮೀಸಲಾತಿಗಾಗಿ ಬೇಕಾಗುವ ದಾಖಲಾತಿಗಳು;

  • ತಹಶೀಲ್‍ದಾರರಿಂದ ಇವರು ಕೃಷಿಕರು/ಕೃಷಿ ವೃತ್ತಿಯವರು ಎನ್ನುವ ದೃಢಿಕರಣದ ಜೊತೆ ಇವರ ಮೂಲ ಆದಾಯ ಕೃಷಿಯಿಂದಲೇ ಬರುತ್ತಿದೆ ಎಂಬ ಬಗ್ಗೆ  ದೃಢಿಕರಣವಿರಬೇಕು.
  • ಸಿಇಟಿ ಮಾಹಿತಿ ಪುಸ್ತಕದಲ್ಲಿರುವ ಪ್ರಮಾಣ ಪತ್ರ ತರುವುದು ಸೂಕ್ತ. ಯಾವುದೇ ರೀತಿ ಪ್ರಮಾಣ ಪತ್ರವಾದರು ಕೃಷಿ ಕುಟುಂಬದವರು ಹಾಗೂ ಮೂಲ ಆದಾಯ ಕೃಷಿಯಿಂದಲೆ ಎನ್ನುವ ಎರಡು ಅಂಶಗಳು ಕಡ್ಡಾಯವಾಗಿರಬೇಕು.
  • ಕೃಷಿ ಮೂಲ ಆದಾಯವೆಂದರೆ ಹಲವು ವೃತ್ತಿಯನ್ನು ಮಾಡುತ್ತಿದ್ದರೂ ಅತೀ ಹೆಚ್ಚಿನ ಆದಾಯ ಕೃಷಿಯಿಂದಲೇ ಬರುತ್ತಿರಬೇಕು. 
  • ಉದಾಹರಣೆಗೆ: ನೌಕರಿಯಲ್ಲಿದ್ದು ಸಂಬಳ ಪಡೆಯುತ್ತಿದ್ದರೆ ಸಂಬಳದ ಒಟ್ಟು ಮೊತ್ತಕ್ಕಿಂತ ಕೃಷಿ ಆದಾಯ ಹೆಚ್ಚಿದ್ದರೆ ಮಾತ್ರ ಕೃಷಿ ಮೂಲ ಆದಾಯವಾಗುತ್ತದೆ.
University of agriculture sciences Raichur
ಕೃಷಿ ವಿಶ್ವ ವಿಧ್ಯಾನಿಲಯ ರಾಯಚೂರು.

ರಾಜ್ಯದಲ್ಲಿ ಲಭ್ಯವಿರುವ ಕೃಷಿ ಪದವಿಗಳು;

  • ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ಕೃಷಿ ಮಾರುಕಟ್ಟೆ), ಬಿ.ಎಸ್ಸಿ (ತೋಟಗಾರಿಕೆ), ಬಿ.ಎಸ್ಸಿ (ರೇಷ್ಮೆ), ಬಿ.ಎಸ್ಸಿ (ಅರಣ್ಯ), ಬಿ.ಹೆಚ್. ಎಸ್ಸಿ., ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಕೃಷಿ ಇಂಜಿನಿಯರಿಂಗ್), ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಟೆಕ್ (ಆಹಾರ ತಂತ್ರಜ್ಞಾನ), ಬಿ.ಟೆಕ್ (ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಡೈರಿ ಟೆಕ್ನಾಲಜಿ), ಬಿ.ಎಫ್. ಎಸ್ಸಸಿ. ಮತ್ತು ಬಿ.ವಿ.ಎಸ್ಸ್.ಸಿ & ಎ.ಹೆಚ್. ಇವು ವಿವಿಧ ವಿಶ್ವವಿದ್ಯಾಲಯಗಳಿಂದ ನೀಡಲ್ಪಡುವ ಪದವಿಗಳು. ಬಿ.ವಿ.ಎಸ್ಸ್.ಸಿ & ಎ.ಹೆಚ್ ಪದವಿಯು ಐದು ವರ್ಷದ ಅವಧಿಯದ್ದಾಗಿದ್ದು ಉಳಿದೆಲ್ಲಾ ಪದವಿಗಳು ನಾಲ್ಕು ವರ್ಷಗಳ ಅವಧಿಯ ಪದವಿಗಳಗಿರುತ್ತವೆ.

Agriculture universities of Karnataka

Agriculture and horticulture Universities of Karnataka

ಕೃಷಿ ಪದವಿ ಸೇರಲು ಎಐಇಇಎ ಪರೀಕ್ಷೆ:

  • ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್) ರಾಷ್ಟ್ರಮಟ್ಟದಲ್ಲಿ ಎಪಿಇಇಎ-ಯುಜಿ ಎಂಬ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.
  • ಈ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರತಿಶತ 15ರಷ್ಟು ಸೀಟುಗಳಿಗೆ ಆಯ್ಕೆ ಮಾಡಲಾಗುವುದು.
  • ವಿಶ್ವವಿದ್ಯಾಲಯ ಆಯ್ಕೆ ಅವಕಾಶವನ್ನು ರ್ಯಾಂಕ್ ಆಧರಿಸಿ ನೀಡಲಾಗುವುದು.
  • ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸೀಟು ತೆಗೆದುಕೊಂಡವರಿಗೆ ಶಿಷ್ಯವೇತನ ಸಹ ನೀಡಲಾಗುವುದು. ವಿವರಗಳು icar.org.in ನಲ್ಲಿ ಲಭ್ಯವಿದೆ.

Horticulture and veterinary Universities of Karnataka

ಕೃಷಿ ಶಿಕ್ಷಣ ಒದಗಿಸುವ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ವಿವರ;

  • ಕೃಷಿ ಮತ್ತು ಕೃಷಿ ಸಂಬಂಧಿತ ಶಿಕ್ಷಣವನ್ನು ರಾಜ್ಯದಲ್ಲಿ ಒಟ್ಟು 6 ವಿಶ್ವವಿದ್ಯಾಲಯಗಳಲ್ಲಿನ 35 ಮಹಾವಿದ್ಯಾಲಯಗಳಲ್ಲಿ ನೀಡಲಾಗುತ್ತದೆ.
  • ರಾಜ್ಯದಲ್ಲಿರುವ ಯಾವುದೇ ಕೃಷಿ ಮತ್ತು ಕೃಷಿ ಸಂಬಂದಿತ ವಿಶ್ವವಿದ್ಯಾಲಯಗಳಲ್ಲಿ ಡೋನೇಶನ್ ಸೀಟುಗಳು ಲಭ್ಯವಿರುವುದಿಲ್ಲ.
  • ಬದಲಾಗಿ ಎನ್.ಆರ್.ಐ (ಅನಿವಾಸಿ ಭಾರತೀಯರು/Non resident Indians) ಕೊಟಾದಡಿ ಸೀಟಗಳನ್ನು ಪಡೆಯಲು ಅವಕಾಶವಿದೆ.
ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವ ವಿದ್ಯಾನಿಲಯ ಬೀದರ್
Veterinary and fisheries university Bidar

ಭಾರತೀಯ ಕೃಷಿಗೆ ವಿಶ್ವ ಮನ್ನಣೆ ಇದೆ:

  • ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ದೇಶೀಯ ಕೃಷಿಯನ್ನು ವಿಶ್ವವಾಣಿಜ್ಯ (WTO) ಒಪ್ಪಂದಕ್ಕೆ ಒಳಪಡಿಸಲಾಗಿದೆ.
  • ಜಗತ್ತಿನ ವ್ಯಾಪಾರ – ವಹಿವಾಟಿನ ನೀತಿ ನಿಯಮಗಳು ಭಾರತದ ಕೃಷಿಯ ಮೇಲೆ ಪ್ರಭಾವ ಬೀರುತ್ತವೆ.
  • ಗುಣಮಟ್ಟ ಆಹಾರ ಉತ್ಪನ್ನಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
  • ನಾವು ಭಾರತೀಯ ಕೃಷಿಕರು ಪ್ರಮಾಣಕ್ಕಿಂತಲೂ ವಿಶ್ವ ಮಾರುಕಟ್ಟೆಗೆ ತಕ್ಕ ಗುಣವುಳ್ಳ ಆಹಾರ ಉತ್ಪನ್ನ ಬೆಳೆಯ ಬೇಕಾಗಿದೆ.
  • ಕೊಯ್ಲೋತ್ತರ ನಿರ್ವಹಣೆ, ಮೌಲ್ಯವರ್ಧಿತ ಸಿದ್ಧ ವಸ್ತುಗಳ ತಯಾರಿಕೆ ಮಾರಾಟ ಕೌಶಲ್ಯ, ಯಂತ್ರಗಳ ಬಳಕೆಯಲ್ಲಿ ರೈತರ ಮಕ್ಕಳು ಕೃಷಿ ವಿಜ್ಞಾನ ಪದವಿಗಳಲ್ಲಿ ಕಲಿತು ಕೃಷಿ ನೈಪುಣ್ಯತೆಯನ್ನು ಸಾಧಿಸಬೇಕಾಗಿದೆ.
  • ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ತೋಟಗಾರಿಕೆ), ಬಿ.ಎಸ್ಸಿ (ಅರಣ್ಯ), ಇವುಗಳಲ್ಲದೇ SSLC ನಂತರ ಕೃಷಿ ಡಿಪ್ಲಮೋ ಇವುಗಳನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿದರೆ ಮುಂದಿನ ದಿನಮಾನಗಳಲ್ಲಿ “ಕೃಷಿಯನ್ನು ಒಂದು ಉದ್ಯಮವನ್ನಾಗಿಸ ಬೇಕಾಗುತ್ತದೆ.

ಕೃಷಿಯು ಆಹಾರ ಉತ್ಪಾದನೆಗೆ ಸಂಬಂಧಿಸಿದ್ದಾದ್ದರಿಂದ ಆಹಾರದ ಬೇಡಿಕೆ ಇರುವವರೆಗೂ ಅದು ಬೆಳೆಯುತ್ತಿರು ಕ್ಷೇತ್ರವಾಗಿರುತ್ತದೆ. ಹಾಗಾಗಿ ಕೃಷಿ ಕ್ಷೇತ್ರದ ಮಾನವ ಸಂಪನ್ಮೂಲದ ಬೇಡಿಕೆ ಹೆಚ್ಚುತ್ತಲೇ ಹೋಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಜೊತೆಗೆ ಎಲ್ಲಾ ಸೇವಾ ಹಾಗೂ ಆಡಳಿತ ಇಲಾಖೆಗಳಲ್ಲಿನ ಉನ್ನತ ಹುದ್ದೆಗಳಿಗೆ ಕೃಷಿ ಪಧವೀಧರರು ಅರ್ಹರಿರುತ್ತಾರೆ. ಇತರೆ ವಿವಿಧ ಇಲಾಖೆಗಳಲ್ಲೂ ಅವಕಾಶಗಳನ್ನು ಅರಸಿರುವುದಲ್ಲದೇ ಅತಿ ಉತ್ತಮ ದಕ್ಷತೆಯನ್ನು ತೋರಿದ್ದಾರೆ. ಕೃಷಿಕರಾಗಿ, ಕೃಷಿ ಸಲಹೆಗಾರರಾಗಿ ಸಾಧನೆ ಮಾಡಿದವರನ್ನೂ ಕಾಣಬಹುದು.  ದೇಶದ ಆಹಾರ ಭದ್ರತೆಯನ್ನು ಗ್ರಾಮಿಣ ಜನರ ಉದ್ಯೋಗ ಭದ್ರತೆಯನ್ನು ಕಾಪಾಡುವ ಭಾರತೀಯ ಕೃಷಿಯೂ ಉನ್ನತ ಶಿಕ್ಷಣಕ್ಕೆ ಯೋಗ್ಯ. ಹೆಚ್ಚು ಅವಕಾಶಗಳಿರುವುದರಿಂದಲೇ ಕೃಷಿ ಪದವಿ ಸೇರಲು ಬೇಡಿಕೆ ಹೆಚ್ಚುತ್ತಿದೆ
ಲೇಖಕರು:    ಡಾ.ಟಿ.ಎಂ.ಸೌಮ್ಯ  ಸಹಾಯಕ ಪ್ರಾಧ್ಯಾಪಕರು, ಕೃ.ತೋ.ವಿ.ವಿ, ಶಿವಮೊಗ್ಗ.
 
End of the article:—————————————————————–
Search words: Agriculture education# Agriculture courses  #  Horticulture education# Fisheries education#  Veterinary  education # veterinary college# fisheries college # agriculture college# Horticulture college# scope of agriculture education# university of agriculture sciences Bangalore# University of agriculture sciences Raicure# University of agriculture and horticulture sciences Shivamogga#  university of agriculture sciences Dharwada#

Leave a Reply

Your email address will not be published. Required fields are marked *

error: Content is protected !!