ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಿಯಂತ್ರಣ ಆದರೆ ದೊಡ್ದ ಪರೀಕ್ಷೆ ಪಾಸ್. ಇದನ್ನು ಪಾಸ್ ಮಾಡಿಸಿದ ಔಷಧಿಯೇ ಬಯೋ ಔಷಧಿಗಳು. ಏನು ಹೆಸರೋ, ಒಳಗೆ ಏನು ಇರುವುದೋ ಯಾರಿಗೂ ಗೊತ್ತಿಲ್ಲ. ಸಾವಯವ, ಜೈವಿಕ, ಹರ್ಬಲ್ ಎಂಬ ಹೆಸರಿನಲ್ಲಿ ರೈತರ ಉದ್ದಾರಕ್ಕೆ ಅದೆಷ್ಟೋ ಜನ ಬಂದರು, ಹೋದರು.
- ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಬೆಳೆಗಾರರು ವ್ಯಯಿಸುವ ಮೊತ್ತ ಕೋಟ್ಯಾಂತರ ರೂಪಾಯಿಗಳು.
- ನಮ್ಮ ಅಡಿಕೆ ತೋಟಗಳಿಗೆ ಏನಿಲ್ಲವೆಂದರೂ 10,000 ಟನ್ ಗೂ ಹೆಚ್ಚು ಮೈಲುತುತ್ತೆ ಬೇಕಾಗುತ್ತದೆ.
- ಇದನ್ನು ಮನಗಂಡ ಕೆಲವರು ಬದಲಿ ಉತ್ಪನ್ನದ ತಲಾಷೆಯಲ್ಲಿ ತೊಡಗಿದರು.
- ಅಂತರ್ಜಾಲ ಮೂಲದಲ್ಲಿ ಹುಡುಕಾಡಿ ಮಾರುಕಟ್ಟೆಗೆ ಬಿಟ್ಟರು.
- ಅದುವೇ ಬಯೋ ಎಂಬ ನಾಮಾಂಕಿತ ಪೊಟಾಶಿಯಂ ಫೋಸ್ಫೋನೇಟ್ ಅಥವಾ ಸಾಲ್ಟ್ ಆಫ್ ಫೋಸ್ಫೋನಿಕ್ ಅಸಿಡ್.
- ಇದು ಶಿಲೀಂದ್ರಗಳು ಯಾವುದೇ ರೀತಿ ಧಾಳಿ ಮಾಡದಂತೆ ಸಸ್ಯಕ್ಕೆ ಕೆಲವು ಸಮಯದ ತನಕ ನಿರೋಧಕ ಶಕ್ತಿಯನ್ನು ಕೊಡುತ್ತದೆ.
- ಬರೇ ಫೈಟೋಪ್ಥೆರಾ ಶಿಲೀಂದ್ರ ಅಲ್ಲದೆ ಇನ್ನೂ ಹಲವು ಶಿಲೀಂದ್ರಗಳ ನಿಯಂತ್ರಣ ಮಾಡಬಲ್ಲ ಆಂತರ್ ವ್ಯಾಪೀ ಶಿಲೀಂದ್ರ ನಿಯಂತ್ರಕ.
- ದ್ರಾಕ್ಷಿ, ದಾಳಿಂಬೆ, ಮುಂತಾದ ಬೆಳೆಯ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ರೋಗಕ್ಕೆ ಇದು ಈಗಲೂ ಬಳಕೆಯಲ್ಲಿದೆ.
ಏನಿದು ಬಯೋ ಔಷಧಿ:
- ಬಯೋ ಎಂದರೆ ಅದು ನಾಮಕರಣ ಮಾಡಲ್ಪಟ್ಟ ಮಾರಾಟದ ಹೆಸರು.
- ಅದರಲ್ಲಿ ಇರುವ ಕ್ರಿಯಾತ್ಮಕ ಅಂಶ ಫೋಸ್ಪರಸ್ ( ರಂಜಕ) ಮತ್ತು ಪೊಟ್ಯಾಶಿಯಂ ಗಳು.
- ಇದನ್ನು ಫಾಸ್ಫೋನಿಕ್ ಆಮ್ಲದ ಪೊಟ್ಯಾಶಿಯಂ ಉಪ್ಪು KH2PO3. ಇದನ್ನು ಜರ್ಮನಿ ಮುಂತಾದ ದೇಶಗಳಲ್ಲಿ ಸಾವಯವ ಎಂದು ಪರಿಗಣಿಸಲಾಗಿದೆ ಎಂಬ ಮಾಹಿತಿ ಇದೆ.
- ಅದನ್ನು ಅರಿತ ನಮ್ಮವರು ಇಲ್ಲಿಗೆ ಸುರಕ್ಷಿತ ಹೆಸರಾದ ಬಯೋ ಎಂಬುದನ್ನು ನಾಮಕರಣ ಮಾಡಿದ್ದಾರೆ.
- ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಇದನ್ನು ಅಲ್ಪಾವಧಿ ಮತ್ತು ಧೀರ್ಘಾವಧಿ ಬೆಳೆಗಳಿಗೆ ಶಿಲೀಂದ್ರ ರೋಗ ನಿರೋಧಕವಾಗಿ ಬಳಕೆ ಮಾಡುತ್ತಾರೆ.
- ಇದರ ಮೂಲ ರೂಪ ಪುಡಿಯಾಗಿರುತ್ತದೆ. ಇದರ ಸಾಂದ್ರತೆ 99% ಇರುತ್ತದೆ.
- ಇದನ್ನು ಡಿಸ್ಟಿಲ್ದ್ ವಾಟರ್ ( ಭಟ್ಟಿ ಇಳಿಸಿದ ನೀರು) ನಲ್ಲಿ ಕರಗಿಸಿ 45% ಮಾಡಿ ನಮಗೆ ಬಯೋ ಹೆಸರಿನಲ್ಲಿ ಕೊಡಲಾಗುತ್ತಿತ್ತು.
- ಇದರಲ್ಲಿ ಪ್ರಾರಂಭದ ಕೆಲವು ವರ್ಷಗಳಲ್ಲಿ ಕ್ರಿಯಾತ್ಮಕ ಅಂಶ ನಮೂದಾಗಬೇಕಾದ ಸ್ಥಳದಲ್ಲಿ ಮೂಲಿಕಾ ಮೂಲದಿಂದ ( ಹುರ್ಬಲ್ ಎಕ್ಸ್ಟ್ರಾಕ್ಟ್ ) ಎಂದು ನಮೂದಾಗಿರುತ್ತಿತ್ತು.
- ಕ್ರಮೇಣ ಈ ವ್ಯವಹಾರ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಜನ ಬಂದಂತೆ ಅದರ ಬಣ್ಣ ಬದಲಾಗತೊಡಗಿತು.
- ಅದರಲ್ಲಿ ಎಲ್ಲರೂ ಇರುವ ಕ್ರಿಯಾತ್ಮಕ ಅಂಶವನ್ನು ನಮೂದಿಸಲು ಪ್ರಾರಂಭಿಸಿದರು.
- ಸಾಮಾನ್ಯವಾಗಿ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಮತ್ತು ರಂಜಕ ಇರುತ್ತಿತ್ತು.
- ಕೆಲವರು ಇದಕ್ಕೆ ಮೂಲಿಕಾ ಸಾರಗಳನ್ನೂ ಸೇರಿಸಿ ತಮ್ಮ ಉತ್ಪನ್ನದ ವ್ಯವಹಾರ ಗುಟ್ಟನ್ನು ಉಳಿಸಿಕೊಂಡಿದ್ದರು.
ಇದರ ಬಗ್ಗೆ ದ್ವಂದ್ವಗಳು:
- ಮೊದಲು ಇದು ಮೈಲುತುತ್ತೆಯ ಬಹುತೇಕ ಮಾರಾಟ ವಹಿವಾಟನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
- ಕ್ರಮೇಣ ಸಂಬಂಧಿಸಿದ ಅಭಿವೃದ್ದಿ ಇಲಾಖೆಗಳು ಈ ಉತ್ಪನ್ನಗಳ ಬಗ್ಗೆ ತಮ್ಮ ಸಹಮತವನ್ನು ನೀಡದೆ ರೈತರನ್ನು ದ್ವಂದ್ವಕ್ಕೆ ಈಡು ಮಾಡಿದವು.
- ವಾಸ್ತವಗಾಗಿ ಇದು ಒಂದು ಉತ್ತೇಜಕ ಅಷ್ಟೇ.
- ಇದರಲ್ಲಿ ಇರುವ ಸಾರಗಳು ಕೊಳೆ ರೋಗದ ರೋಗಾಣುವನ್ನು ಕೆಲವು ಸಮಯದ ತನಕ ಪ್ರವೇಶ ಮಾಡದಂತೆ ತಡೆಯುತ್ತದೆ.
- ಅದನ್ನು ಕೆಲವರು ಕೆಲವು ನಮೂನೆಯಲ್ಲಿ ಹೇಳುತ್ತಾರೆ.
- ಸಾಧಾರಣವಾಗಿ ಇದನ್ನು ಬಳಸಿದವರಲ್ಲಿ 60 ದಿನಗಳ ಕಾಲ ಕೊಳೆ ರೋಗ ಬರಲಿಲ್ಲ ಎಂಬುದಂತೂ ವಾಸ್ತವ ಸಂಗತಿಯಾಗಿದೆ.
ಇದನ್ನು ನಿರಂತರವಾಗಿ ಬಳಸಿದರೆ ಮರದ ಶಿರ ಭಾಗ ಸಣಕಲಾಗುತ್ತದೆ. ಕೊನೆಗೆ ಕೊಳೆ ರೋಗದ ರೋಗಾಣು ರೋಗ ನಿರೋಧಕ ಶಕ್ತಿ ಪಡೆದು ಏನೇನೋ ಆಗಬಹುದು. ಇದು ಒಳ್ಳೆಯದಲ್ಲ ಎಂಬಿತ್ಯಾದಿ ಹೇಳಿಕೆಗಳನ್ನು ಕೊಡುವುದರ ಮೂಲಕ ಬೆಳೆಗಾರರನ್ನು ದ್ವಂದ್ವಕ್ಕೆ ಈಡು ಮಾಡಿದರು. ಜನ ಹೆದರಿ ಬಳಕೆ ಕಡಿಮೆ ಮಾಡಲಾರಂಭಿಸಿದರು.
- ಇದರ ಪರಿಣಾಮವೋ ಅಥವಾ ಅವರ ಹೊಟ್ಟೆ ತುಂಬುವಷ್ಟು ಹಣ ಆಯಿತೋ , ಈಗ ಬಯೋ ಔಷದಿಗಳು ಮಾರುಟ್ಟೆಯಿಂದ ಕಣ್ಮರೆಯಾದವು.
ವಾಸ್ತವಿಕತೆಯೇ ಬೇರೆ ಇದೆ:
- ಬಯೋ ಒಳೆ ನಿಯಂತ್ರಕಗಲ್ಲಿ ಏನಿದೆ , ಇದರ ನೈಜ ಪರಿಣಾಮ ಏನು ಎಂಬುದನ್ನು ಯಾರೂ ಫೀಲ್ಡ್ ಟ್ರಯಲ್ ಮಾಡಿದ್ದಿಲ್ಲ.
- ಎಲ್ಲರೂ ಪೂರ್ವಗ್ರಹ ಪೀಡಿತರಾಗಿ ಇದು ಒಳ್ಳೆಯದಲ್ಲ ಎಂದು ಹೇಳಿದ್ದೇ ಹೊರತು ಯಾಕೆ ಏನು ಎಂದು ಕೆಲವು ವರ್ಷಗಳ ತನಕ ಪರಿಶೀಲಿಸಿ ನೋಡೀದ್ದಿಲ್ಲ.
- ನಾವು ನೊಡಿದಂತೆ ಕಳೆದ 10-12 ವರ್ಷಗಳಿಂದ ಇದನ್ನು ಸಿಂಪಡಿಸಿ ಆದರಲ್ಲಿ ಯಾವ ಅಡ್ದ ಪರಿಣಾಮವನ್ನು ಗುರುತಿಸದೆ ಅದನ್ನು ಮುಂದುವರಿಸಿದವರು ಇದ್ದಾರೆ.
ಯಾರೂ ತಯಾರಿ ಮಾಡಿದವರಿಲ್ಲ:
- ಪೊಟ್ಯಾಶಿಯಂ ಫೋಸ್ಫೋನೇಟ್ ಅಥವಾ ಕೊಳೆ ನಾಶಕವನ್ನು ಯಾರೂ ತಮ್ಮ ಸಂಶೋಧನೆ ಮತ್ತು ಅಭಿವೃದ್ದಿ ಕಾರ್ಯಗಳಿಂದ ತಯಾರಿಸಿದ್ದು ಅಲ್ಲ.
- ಇದರ ಮೂಲ ಸಮಾಗ್ರಿಯನ್ನು ತಂದು ಇಲ್ಲಿ ತಮ್ಮ ಬ್ರಾಂಡ್ ನಲ್ಲಿ ಪ್ಯಾಕಿಂಗ್ ಮಾಡಿದ್ದು ಅಷ್ಟೇ. ಇದರಲ್ಲಿ ಕೆಲವು ಕಳಪೆ ಸಾಮಾಗ್ರಿಯಲ್ಲಿ ತಯಾರಾದ ಉತ್ಪನ್ನ ರೈತರಿಗೆ ಕೈ ಕೊಟ್ಟಿರಬಹುದು.
ಎಲ್ಲರೂ ರೈತರನ್ನುದೋಚಿದವರೇ:
- ಬಯೋ ಹೆಸರಿನ ಔಷದಿ ಬಂದಾಗ ಅದಕ್ಕೆ ಲೀ. ಗೆ 500 ರೂ. ತನಕ ಇತ್ತು.
- ಆಗಲೇ ಇದನ್ನು ಕೆಲವರು ರೂ.200 ಕ್ಕೆ ಕೊಡುವವರು ಇದ್ದರು. ಬನವಾಸಿಯ ಅಬ್ದುಲ್ ರಹುಪ್ ಸಾಹೇಬರು ಇದೆಲ್ಲಾ ನೊಡಿ ಅದರ ಬೆನ್ನು ಹತ್ತಿ ಇದನ್ನು ತಯಾರಿಸಿ ಲೀ. 150 ರೂ. ಗಳಿಗೇ ಕೊಟ್ಟಿದ್ದರು.
- ಅದನ್ನು ತಂದು ಬಳಸಿದ ನಾನೇ ಕೊಳೆ ರೋಗದಿಂದ 70 ದಿನ ನಿರಾತಂಕವಾಗಿದ್ದೆ.
- ಈಗಲೂ ಇದರ ಹುಡಿ ರೂಪದ ತಯಾರಿಕೆ 400-450 ರೂ.. ಆಸುಪಾಸಿನಲ್ಲಿ ದೊರೆಯುತ್ತದೆ.
- ದ್ರವ 200-225 ರೂ. ಆಸು ಪಾಸಿನಲ್ಲಿ ದೊರೆಯುತ್ತದೆ.
ರೈತರೇ ನೀವು ಎನು ನಿಮ್ಮ ಬೆಳೆಯಲ್ಲಿ ಫಲಿತಾಂಶವನ್ನು ಕಂಡಿದ್ದೀರಿ ಅದೇ ಸತ್ಯ. ಯಾವ ಸಂಶೋಧನಾ ಸಂಸ್ಥೆಯವರೂ, ಯಾವ ಇಲಾಖೆಯವರೂ ಕೃಷಿಕರ ವಿಚಾರದಲ್ಲಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ದಿನ ಬೆಳಗಾದರೆ ಸಂಬಳ,ಡಿಎ, ಹಾಗೂ ಪ್ರಮೋಷನ್ ವಿಷಯಗಳ ಚರ್ಚೆ ಮಾಡುವುದಕ್ಕೆ, ಹಾಗೂ ಸರಕಾರಕ್ಕೆ ಕಾಲ ಕಾಲಕ್ಕೆ ತಮ್ಮ ಕೆಲಸದ ವರದಿಯನ್ನು ಸಲ್ಲಿಸಲೇ ಬಿಡುವಿಲ್ಲದ ಇವರು ನಿಮಗಾಗಿ ಕನಿಷ್ಟ 6-7 ವರ್ಷ ಇದನ್ನು ಅಭ್ಯಸಿಸಿ ಅದರ ಫಲಿತಾಂಶ ಹೇಳಲು ಎಲ್ಲಿಂದ ಬಿಡುವು ಮಾಡಿಕೊಳ್ಳಬಲ್ಲರು.