ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ.
- ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು.
- ಉಳಿದವರು ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು.
- ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು ಗಂಡಸು ಬಳಸಿಕೊಳ್ಳುತ್ತಾನೆ.
- ಇದರ ಉಲ್ಲೇಖ ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ ಇರುವಂತದ್ದು ಸಸ್ಯ.
- ಅದಕ್ಕೆ ಮೊಳೆ ಹೊಡೆದರೂ ಮಾತಾಡುವುದಿಲ್ಲ. ಕೊಡಲಿ ಏಟು ಕೊಟ್ಟರೂ ಮಾತಾಡುವುದಿಲ್ಲ.
- ಯಾವ ಪ್ರಯೋಗ ಮಾಡುವುದಿದ್ದರೂ ಕೈಕಾಲು ಕಟ್ಟಿ ಹಾಕಬೇಕಾದ ಕಷ್ಟ ಇಲ್ಲ.
- ಹಾಗಾಗಿ ಕೆಲವು ಜನ ಮರ/ಸಸ್ಯಗಳಲ್ಲಿ ತಮ್ಮ ಪ್ರಯೋಗ ಕೈಗೊಳ್ಳುತ್ತಿರುತ್ತಾರೆ.
- ಅಂತದ್ದರಲ್ಲಿ ಒಂದು ಮರಕ್ಕೆ ಮೊಳೆ ಹೊಡೆಯುವುದು .
- ಕೇರಳದ ಒಂದು ಊರಿನಲ್ಲಿ ರೈತರೊಬ್ಬರು ಆಡಿಕೆ ಮರದ ಮಹಾಳಿ ರೋಗ ತಡೆಗೆ ಮರದ ಬುಡದ ಬೇರಿನ ಸಮೀಪದ ಕಾಂಡಕ್ಕೆ ಮೊಳೆ ಹೊಡೆದು ನಿಯಂತ್ರಿಸಿದ್ದಾರಂತೆ.
- ಹಿಂದೆ ಇವರು ವರ್ಷಕ್ಕೆರದು ಬಾರಿ ಬೋರ್ಡೋ ದ್ರಾವಣವನ್ನು ಬಳಸುತ್ತಿದ್ದರಂತೆ.
- ಇನ್ನು ಅದನ್ನು ಬಿಟ್ಟು ಇದೇ ಕ್ರಮ ಅನುಸ್ರಿಸುವುದರಲ್ಲಿದ್ದಾರೆ ಎಂಬ ವರದಿ TwoCercles.net ನಲ್ಲಿ ಪ್ರಕಟವಾಗಿದೆ.
ಈ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಬಹಳ ಜನರಿಗೆ ಇದು ಕುತೂಹಲ ಮೂಡಿಸಿದೆ. ಕೆಲವರು ನಷ್ಟ ಇಲ್ಲ ಎಂದು ಇದನ್ನು ಅನುಸರಿಸಲು ಮುಂದಾಗಿದ್ದಾರೆ.
- ಇದರ ಸಂಶೋಧಕರು ವಿಚಾರವನ್ನು ಹೆಚ್ಚಿನ ಅಧ್ಯಯನಕ್ಕಾಗಿ ಕೇರಳ ಕೃಷಿ ವಿಶ್ವವಿಧ್ಯಾನಿಲಯದ ವಿಜ್ಞಾನಿಗಳ ಗಮನಕ್ಕೂ ತಂದಿದ್ದಾರಂತೆ.
ಇದು ಹೊಸತಲ್ಲ:
- ಯಾವಾಗಲೂ ನಮ್ಮ ರೈತರಿಗೆ ಹೊಸತು ಕೇಳಿದರೆ ಸಾಕು ಅವರ ಕಿವಿ ನೆಟ್ಟಗಾಗುತ್ತದೆ.
- ಅದು 2004-05 ನೇ ಇಸವಿ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂತಹ ಒಂದು ಸುದ್ದಿ ಪ್ರಚಾರ ಪಡೆದಿತ್ತು
- ಆಗ ತೆಂಗಿನ ಮರಕ್ಕೆ ನುಶಿ ಕಾಟ ವಿಪರೀತವಾಗಿತ್ತು. ಈ ನುಶಿ ಕಾಟ ತಡೆಯಲು ಮರದ ಕಾಂಡಕ್ಕೆ ತಾಮ್ರದ ಮೊಳೆ ಹೊಡೆಯುವುದು ಸೂಕ್ತ ಎಂಬ ಪರಿಹಾರ.
- ಸಾಗರದ ಒಂದು ಅಂಗಡಿಯವರು ಕ್ವಿಂಟಾಲು ಗಟ್ಟಲೆ ತಾಮ್ರದ ಮೊಳೆಗಳು ಮಾರಿದ್ದುಂಟು.
- ನೂರಾರು ಜನ ತಮ್ಮ ತೆಂಗಿನ ಮರದ ಕಾಂಡಕ್ಕೆ ಮೊಳೆ ಹೊಡೆದದ್ದಿದೆ
- ಆದರೆ ನುಶಿ ಪೀಡೆ ಹೋಗಲೇ ಇಲ್ಲ. ಅಂತದ್ದೇ ಇದು ಒಂದು ಎಂದರೂ ತಪ್ಪಾಗಲಾರದು.
ಮೊಳೆಯಿಂದ ಏನಾಗುತ್ತದೆ:
- ಕೊಳೆಯುವ ಮಹಾಳಿ ರೋಗ ಬರುವುದು ಒಂದು ಶಿಲೀಂದ್ರದ ಕಾರಣದಿಂದ.
- ಈ ಶಿಲೀಂದ್ರಕ್ಕೂ ಕಬ್ಬಿಣದ ತುಕ್ಕ್ಕು ಹಿಡಿದ ಮೊಳೆಗೂ ಯಾವ ಸಂಬಂಧವೋ ತಿಳಿಯುತ್ತಿಲ್ಲ.
ಆದರೆ ಮೊಳೆ ಹೊಡೆದದ್ದರಿಂದ ಕಬ್ಬಿಣದ ಆಕ್ಸೈಡ್ ಅತೀ ಅಲ್ಪ ಪ್ರಮಾಣದಲ್ಲಿ ಅಡಿಕೆ ಮರದ ಅಂಗಾಂಶಗಳಿಗೆ ಸೇರಬಹುದೇ ಹೊರತು ಅದರಿಂದ ಕೊಳೆ ರೋಗದ ಶಿಲೀಂದ್ರ ಸಾಯುವ ಸಾಧ್ಯತೆ ಇಲ್ಲ.
- ಇಷ್ಟಕ್ಕೂ ಏಕದಳ (ಮೋನೋಕೋಟ್) ಸಸ್ಯಗಳಾದ ಅಡಿಕೆ, ತೆಂಗು ಮುಂತದ ತಾಳೆ ಜಾತಿಯ ಸಸ್ಯಗಳ ಕಾಂಡಕ್ಕೆ ಆಗುವ ಗಾಯ ಮತ್ತೆ ಅಲ್ಲಿಗೆ ಕೂಡಿಕೊಳ್ಳುವುದಿಲ್ಲ ಎಂಬುದು ಅಧ್ಯಯನ.
- ಗಾಯವಾದ ಭಾಗದಲ್ಲಿ ರಸ ಸ್ರವಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಮೊಳೆ ಹೊಡೆಯುವುದು ಮುಂತಾದ ಅವೈಜ್ಞಾನಿಕ ವಿಧಾನಗಳಿಂದ ಸಸ್ಯ ರೋಗಗಳನ್ನುಗುಣಪಡಿಸುವುದು ಅಸಾಧ್ಯ. ಇವು ಬರೇ ಪ್ರಚಾರ ಪಡೆಯುವ ತಂತ್ರಗಳು.
- ಒಂದೆರಡು ಕಡೆ ಯಾವುದೋ ಕಾಕತಾಳಿಯ ಘಟನಾವಳಿಗಳಿಂದ ಸಸ್ಯ ರೋಗಗಳು ಇಂತಹ ಕ್ರಮಗಳಿಂದ ಹತೋಟಿಗೆ ಬಂದಿರಬಹುದಾದರೂ ಅದು ಸಾರ್ವಕಾಲಿಕ ಸತ್ಯ ಆಗಿರಲಾರದು.
ರೈತರೇ ಇಲ್ಲಸಲ್ಲದ ವೈಜ್ಞಾನಿಕ ಆಧಾರಗಳಿಲ್ಲದ ಮಾಹಿತಿಗಳಿಗೆ ಬೆಲೆ ಕೊಡಬೇಡಿ.