ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ ನಷ್ಟವಾಗುವ ಪೋಷಕಗಳು.
- ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ
- ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ.
- ಪೋಷಕಗಳು ಲಭ್ಯ ಸ್ಥಿತಿಗೆ ಬರುತ್ತವೆ ಮತ್ತು ಉಪಕಾರೀ ಬ್ಯಾಕ್ಟೀರಿಯಾಗಳಿಗೆ ಅನುಕೂಲವಾಗಿ, ಸಾವಯವ ಪದಾರ್ಥದ ಕಳಿಯುವಿಕೆ ವೇಗವಾಗುತ್ತದೆ.
- ಮಣ್ಣಿನಲ್ಲಿ ವಿಷಕಾರಕ ಪದಾರ್ಥಗಳ ನಾಶವಾಗಿ ಮಣ್ಣು ಜೀವ ಚೈತನ್ಯ ಹೊಂದುತ್ತದೆ.
ಯಾವ ಮಣ್ಣಿಗೆ ಸುಣ್ಣ ಕೊಡಬೇಕು:
- ನಿಮ್ಮ ಹೊಲದ ಮಣ್ಣಿನ ರಸಸಾರ (pH ‘potential of hydrogen’ or ‘power of hydrogen’ )ಎಷ್ಟಿದೆ ಎಂಬುದನ್ನು ಪ್ರಥಮತಹ ಕಂಡುಕೊಳ್ಳಬೇಕು.
- ಇದನ್ನು ಮಣ್ಣು ಪರೀಕ್ಷೆಯ ಆಧಾರದಲ್ಲ್ಲೇ ತಿಳಿಯಬೇಕು.
- ರಸ ಸಾರ 6.5 ಕ್ಕಿಂತ ಕಡಿಮೆ ಇದ್ದಾಗ ಮಾತ್ರ ಅಡಿಕೆ, ತೆಂಗು ಭತ್ತ ಮುಂತಾದ ಧೀರ್ಘಾವಧಿ ಬೆಳೆಗಳಿಗೆ ಸುಣ್ಣ ಕೊಟ್ಟು ಅದನ್ನು ಸರಿಪಡಿಸಿದರೆ ಸಾಕು.
- ರಾಸಾಯನಿಕ ಗೊಬ್ಬರ ಕೊಡುವ ಮಣ್ಣಿನಲ್ಲಿ ಅದನ್ನು ಕೊಟ್ಟ ನಂತರ ಮಣ್ಣು ಆಮ್ಲೀಯವಾಗುತ್ತದೆ.
- ಅದಕ್ಕಾಗಿ ರಾಸಾಯನಿಕ ಗೊಬ್ಬರ ಕೊಡುವ ಮುನ್ನ ಮಣ್ಣನ್ನು ತಟಸ್ಥ ಅಥವಾ ತುಸು ಕ್ಷಾರೀಯ ಮಟ್ಟಕ್ಕೆ ತಂದು ನಂತರ ಗೊಬ್ಬರ ಕೊಟ್ಟರೆ ಅದು ಮಣ್ಣಿನ ರಸಸಾರವನ್ನು ಸರಿಯಾಗಿಸುತ್ತದೆ.
- ಅಮೋನಿಯಂ ಸಲ್ಫೇಟ್ ನಂತಹ ಸಾರಜನಕ ಕೊಡುವಾಗ ಮಣ್ಣು ಹೆಚ್ಚು ಆಮ್ಲೀಯವಾಗುತ್ತದೆ.
- ಯೂರಿಯಾ ಕೊಟ್ಟಾಗ ಅಷ್ಟು ಆಮ್ಲೀಯ ಆಗುವುದಿಲ್ಲ.
ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಸುಣ್ಣ ಹಾಕಬೇಕಾದ ಅಗತ್ಯವೇ ಇಲ್ಲ. ಸುಣ್ಣ ಯುಕ್ತ ಮಣ್ಣುಗಳೂ ಬಯಲು ಸೀಮೆ ಹಾಗೂ ಅರೆ ಮಲೆನಾಡಿನ ಕೆಲವು ಕಡೆ ಇರುತ್ತದೆ. ಅಂತಹ ಕಡೆ ಸುಣ್ಣ ಹಾಕ ಬೇಕಾಗಿಲ್ಲ.
- ರಸಸಾರ ಕಡಿಮೆ ಇರುವ ಮಣ್ಣು ಗಟ್ಟಿಯಾಗಿರುತ್ತದೆ.
- ಅಂತಹ ಮಣ್ಣಿಗೆ ಎಕ್ರೆಗೆ 500 ಕಿಲೋ ಪ್ರಮಾಣದಲ್ಲಿ ಸುಣ್ಣವನ್ನು ಹಾಕಬೇಕು.
- ಸಾಮಾನ್ಯವಾಗಿ pH 5.5 ಕ್ಕಿಂತ ಕಡಿಮೆ ಇರುವ ಮಣ್ಣು ತುಂಬಾ ಕಡಿಮೆ.
- ಇಂತಹ ಮಣ್ಣಿಗೆ ಎಕ್ರೆಗೆ 500 ಕಿಲೋ ಸುಣ್ಣ ಸಾಕು.
ನಮಗೆ ಕೃಷಿಯಲ್ಲಿ ಯಶಸ್ಸು ಬೇಕೆಂದಾದರೆ ಬೆಳೆ ಬೆಳೆಯುವ ಮಣ್ಣು ತಟಸ್ಥ ಸ್ಥಿತಿಯಲ್ಲಿರಬೇಕು. ಈ ಸ್ಥಿತಿಯಲ್ಲಿ ಮಣ್ಣು ನಮ್ಮ ಕೃಷಿಗೆ ಸ್ಪಂದಿಸುತ್ತದೆ. ಗೊಬ್ಬರ ಕಡಿಮೆ ಸಾಕಾಗುತ್ತದೆ. ರೋಗ ರುಜಿನ ಕಡಿಮೆಯಾಗುತ್ತದೆ. ಉತ್ತಮ ಇಳುವರಿ ಬರುತ್ತದೆ. ಆದ ಕಾರಣ ಮಣ್ಣು ಹುಳಿ ಆಗುವುದಿದ್ದರೆ ಸುಣ್ಣ ಹಾಕಿ ಸರಿಪಡಿಸಲೇ ಬೇಕು..
ಸುಣ್ಣ ಹಾಕುವ ವಿಧಾನ:
- ಸುಣ್ಣವನ್ನು ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣವಾಗುವಂತೆ ಮಾಡಬೇಕು ಎಂಬುದು ಕ್ರಮ.
- ಕಾರಣ ಅದು ಮಣ್ಣಿನ ಕಣ ಕಣದಲ್ಲೂ ಸೇರಿ ಆಮ್ಲೀಯತೆಯನ್ನು ಕಡಿಮೆ ಮಾಡಬೇಕು.
- ಆದರೆ ಹೀಗೆ ಮಾಡುವುದು ಸುಣ್ಣಕ್ಕಿಂತ ದುಬಾರಿಯ ಖರ್ಚು.
- ಉಳುಮೆ ಮಾಡುವ ಭತ್ತದ ಹೊಲಕ್ಕೆ ಹೀಗೆ ಮಾಡಬಹುದು. ತೋಟದ ಬೆಳೆಗಳಿಗೆ ಅದು ಅಸಾಧ್ಯ.
- ಬದಲಿಗೆ ಇಡೀ ಹೊಲಕ್ಕೆ ಹಿತ ಮಿತವಾಗಿ ಮಳೆ ಇರುವ ಸಮಯದಲ್ಲಿ ಸಮನಾಗಿ ಚೆಲ್ಲುವುದು ( broadcasting to whole area)ಸೂಕ್ತ ವಿಧಾನ.
- ಹೀಗೆ ಚೆಲ್ಲಿ ಅದರ ಮೇಲೆ ಸಾವಯವ ವಸ್ತುಗಳನ್ನು ಹರಡಬಹುದು.
- ಇಲ್ಲವೇ ಹುಲ್ಲು ಇತ್ಯಾದಿಗಳಿದ್ದರೆ ಒಳ್ಳೆಯದು. ಇದು ನೀರಿನಲ್ಲಿ ಕರಗಿ ಮಣ್ಣಿಗೆ ಸೇರ್ಪಡೆಯಾಗಬೇಕು.
- ಮಣ್ಣಿನ ಆಮ್ಲಗಳ ಜೊತೆ ಬೆರೆತು ಅದು ಕರಗಲ್ಪಡುತ್ತದೆ.
- ಹಾಕಿದ ಸುಣ್ಣವು ತೊಳೆದು ಹೋಗಬಾರದು.
- ಬರೇ ಅಡಿಕೆ, ತೆಂಗು ಬೆಳೆಗಳ ಬುಡಕ್ಕೆ ಮಾತ್ರ ಸುಣ್ಣ ಹಾಕುವುದಕ್ಕಿಂತ ಬೇರು ಎಲ್ಲೆಲ್ಲಾ ಪ್ರಸಾರವಾಗುತ್ತದೆಯೋ ಅಲ್ಲೆಲ್ಲಾ ಲಭ್ಯವಾಗುವಂತೆ ಚೆಲ್ಲುವುದು ಉತ್ತಮ.
- ಸುಣ್ಣ ಕರಗುವುದು ತುಂಬಾ ನಿಧಾನ. ಅದು ಮಣ್ಣಿನಲ್ಲಿ ಸಂಯೋಜನೆಗೊಂಡು ನಿಧಾನವಾಗಿ ಕರಗುತ್ತದೆ ಎನ್ನುತ್ತಾರೆ. ಅದು ಭಾಗಶಃ ಸತ್ಯ.
- ಈಗ 100 ಮೈಕ್ರಾನ್ ಗಿಂತಲೂ ಸಣ್ಣಗೆ ಹುಡಿ ಮಾಡಿದ ಸುಣ್ಣ ಲಭ್ಯವಿರುವ ಕಾರಣ ಬೇಗ ಕರಗಿ ಮಣ್ಣಿಗೆ ಸೇರ್ಪಡೆಯಾಗುತ್ತದೆ.
ಪ್ರತೀ ವರ್ಷ ಸುಣ್ಣ ಹಾಕಬೇಕೇ?
- ಇದು ಬೆಳೆ, ಮಳೆಗನುಗುಣವಾಗಿ ನಿರ್ಧರಿಸುವಂತದ್ದು.
- ಹಿಂದೆ ಹೇಳಿದಂತೆ ಅಡಿಕೆ ಮರದ ಪ್ರತೀ ಗರಿ ಒಣಗಿ ಬೀಳುವಾಗಲೂ ಅದರ ಜೊತೆಗೆ ಸ್ವಲ್ಪ ಕ್ಯಾಲ್ಸಿಯಂ ನಷ್ಟವಾಗುತ್ತದೆ.
- ಫಸಲಿನಲ್ಲೂ ನಷ್ಟವಾಗುತ್ತದೆ. ಮಳೆಗೂ ನಷ್ಟವಾಗುವ ಕಾರಣ ವರ್ಷವೂ ಸುಣ್ಣವನ್ನು ಹಾಕಿದರೆ ತೊಂದರೆ ಉಂಟಾಗಲಾರದು.
- ಅಗತ್ಯಕ್ಕಿಂತ ಹೆಚ್ಚು ಹಾಕಬಾರದು.
- ಯಾವಾಗಲೂ ಬರೇ ಕ್ಯಾಲ್ಸಿಯಂ ಮಾತ್ರ ಇರುವ ಸುಣ್ಣವನ್ನು ಒದಗಿಸುತ್ತಾ ಇದ್ದರೆ ಆ ಮಣ್ಣಿನಲ್ಲಿ ಮೆಗ್ನೀಶೀಯಂ ಕೊರತೆ ಉಂಟಾಗುತ್ತದೆ.
ಸುಣ್ಣ ಹೆಚ್ಚಾದರೆ ಏನಾಗುತ್ತದೆ?
- ಸುಣ್ಣ ಎಂಬುದು ಕಡಿಮೆ ಬೆಲೆಗೆ ದೊರೆಯುವ ವಸ್ತು. ಟನ್ ಗೆ ಹೆಚ್ಚು ಕಡಿಮೆ 4000 ರೂ ಗಳಿಗೆ ದೊರೆಯುವ ಕಾರಣ ಇದನ್ನು ಎಕ್ರೆಗೆ 500 ಪ್ರಮಾಣದಲ್ಲಿ ಬಳಸಿದರೆ ತೊಂದರೆ ಇಲ್ಲ.
- ಬೇಯಿಸಿ ಹುಡಿ ಮಾಡಿದ ( Calcium hydroxide) ಚಿಪ್ಪು ಸುಣ್ಣವನ್ನು ಎಕ್ರೆಗೆ 250-300 ಕಿಲೋ ಬಳಕೆ ಮಾಡಿದರೆ ಸಾಕು.
- ಅತಿಯಾದ ಪ್ರಮಾಣದಲ್ಲಿ ಸುಣ್ಣ ಹಾಕಿದರೆ ಮಣ್ಣು ಕ್ಷಾರವಾಗುತ್ತದೆ.
- ಇದು ಬೆಳೆಗಳಿಗೆ ಒಳ್ಳೆಯದಲ್ಲ.
- ಹೆಚ್ಚು ಸುಣ್ಣ ಹಾಕಿದಾಗ ಮಣ್ಣಿನಲ್ಲಿ ಪೊಟ್ಯಾಶ್, ಅಮೋನಿಯಾ, ಮೆಗ್ನೀಶಿಯಂ, ಬೋರಾನ್, ಸತು, ತಾಮ್ರ ಮುಂತಾದವುಗಳ ಸಮತೋಲತ್ವ ಕೆಡುತ್ತದೆ.
- ಬೇಸಿಗೆಯ ಅವಧಿ ಅಥವಾ ಸಸ್ಯ ಬೆಳೆವಣಿಗೆ ತೀವ್ರ ಗತಿಯಲ್ಲಿ ಇರುವ ಸಮಯದಲ್ಲಿ ಸುಣ್ಣ ಹಾಕಬಾರದು.
ಸಾವಯವ ವಸ್ತುಗಳನ್ನು ಮಣ್ಣಿಗೆ ಕೊಡುತ್ತಿದ್ದರೆ ಅದರಲ್ಲಿ ಹ್ಯೂಮಸ್ ಅಂಶ ಹೆಚ್ಚಾಗುವ ಕಾರಣ, ಅಂದರೆ ಸೊಪ್ಪು, ತರಗೆಲೆ ಇತ್ಯಾದಿಗಳಲ್ಲಿ ಸುಣ್ಣದ ಅಂಶ ಹೆಚ್ಚು ಇರುತ್ತದೆ. ಬೆಳೆ ಉಳಿಕೆಗಳನ್ನು ಗರಿ, ಸಿಪ್ಪೆ, ಇನ್ನಿತರ ಅದೇ ಬೆಳೆ ತ್ಯಾಜ್ಯಗಳನ್ನು ಕೊಡುತ್ತಿದ್ದರೆ ಸುಣ್ಣ ಹೆಚ್ಚು ಬೇಕಾಗುವುದಿಲ್ಲ. ರಂಜಕ ಮೂಲವಾಗಿ ಎಲುಬಿನ ಹುಡಿಯನ್ನು ಕೊಡುತ್ತಿದ್ದರೆ ಅದರಲ್ಲಿ ಕ್ಯಾಲ್ಸಿಯಂ ಅಂಶ ಇರುವ ಕಾರಣ ಬೇಕಾದರೆ ಮಾತ್ರ ಸುಣ್ಣ ಕೊಡಬೇಕು.
ಮಣ್ಣಿಗೆ ಗೊಬ್ಬರ ಹಾಕಿ ಬೆಳೆ ತೆಗೆಯುವುದಾದರೆ ಮಾತ್ರ ಸುಣ್ಣದ ಫಲ ಇರುತ್ತದೆ. ಇಲ್ಲವಾದರೆ ಇದರ ಫಲಿತಾಂಶ ಇಲ್ಲ. ಯಾವುದೇ ಗೊಬ್ಬರ ಹಾಕದಿದ್ದ ಪಕ್ಷದಲ್ಲಿ ಸುಣ್ನವನ್ನು ಹಾಕಿದರೆ ಮಣ್ಣಿನ ಉತ್ಪಾದಕ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ.
ನಿಮ್ಮ ಸಂದೇಹಗಳು ಮತ್ತು ಸಲಹೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.
End of the article———————————
Search words: soil pH# lime application # method of lime application # acid soil treatment # lime and crop # soil treatment # soil neutralization # excess lime and its effect #
kannada agriculture news krushiabhivruddi , best agriculture news website krushi abhivruddi , Krushi abhivruddi news website,agriculture ,
Is it good to lime between October and December. Or during the month of February while irrigating.??