ಅಡಿಕೆ ಸಸ್ಯಗಳು ಮುರುಟಿಕೊಳ್ಳುವುದೇಕೆ? ಪರಿಹಾರ ಏನು?

ಸುಳಿ ಮುರುಟಿದ ಅಡಿಕೆ ಗಿಡ

ಅಡಿಕೆ ಸಸ್ಯಗಳ ಸುಳಿ ಮುರುಟಿಕೊಳ್ಳುವಿಕೆ ಮತ್ತು ಶಿರಭಾಗ ಬಾಗಿ ತಿರುಗುವಿಕೆ, ಗರಗಸ ಗಂಟು ಇವೆಲ್ಲಾ ಒಂದು ಶಾರೀರಿಕ ಸಮಸ್ಯೆಗಳು.ಕೆಲವು ಪ್ರಾಥಮಿಕ ಹಂತದಲ್ಲಿರುವವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸ್ವಲ್ಪ ನಿಧಾನ ಪ್ರಕ್ರಿಯೆ. ಗೊಬ್ಬರ ನಿರ್ವಹಣೆ ಮತ್ತು ಅಗತ್ಯ ಬೇಸಾಯ ಕ್ರಮದಲ್ಲೇ ಇದನ್ನು  ಸರಿಪಡಿಸಿಕೊಳ್ಳಲು ಸಾಧ್ಯ.

  • ನೂರು ಅಡಿಕೆ ಮರಗಳಲ್ಲಿ ಕನಿಷ್ಟ 10 ಆದರೂ ಈ ತರಹ ಸುಳಿ ಮುರುಟುವುದು, ಗರಿ ಬಿಡಿಸಿಕೊಳ್ಳದೆ ಅಲ್ಲಿಗೆ ಗುಛ್ಛವಾಗುವುದು ಇರುತ್ತದೆ.
  • ಇದಕ್ಕೆ ಪ್ರಾದೇಶಿಕ ಇತಿ ಮಿತಿ ಇಲ್ಲ. ಇದನ್ನು ಕೆಲವರು ಹಿಡಿ ಮುಂಡಿಗೆ ಎನ್ನುತ್ತಾರೆ.
  • ಆದರೆ ಇದು ಪ್ರಾಮುಖ್ಯವಾಗಿ ಆಗುವುದು ಬೇಸಾಯ ಕ್ರಮ ಮತ್ತು ಕೆಲವು ಪೋಷಕಾಂಶಗಳ ಅಸಮತೋಲನ ( nutritinal imbalance in areca  plant ) ಹಾಗೂ ಕೆಲವು ಕೀಟ ಸಮಸ್ಯೆಗಳಿಂದ.
  • ಇದಕ್ಕೆ ಸೂಕ್ತ ಚಿಕಿತ್ಸೆ ಮಾಡದೆ ಇದ್ದರೆ ಮರ  ಸಾಯಬಹುದು.
ಕೀಟ ( ತಿಗಣೆ) ಗಳು ಎಲೆ ಕಂಕುಳಲ್ಲಿ ಇದೆಯೇ ಎಂಬುದನ್ನು ಹೀಗೆ ಬಿಡಿಸಿ ನೋಡಿ.
ಕೀಟ ( ತಿಗಣೆ) ಗಳು ಎಲೆ ಕಂಕುಳಲ್ಲಿ ಇದೆಯೇ ಎಂಬುದನ್ನು ಹೀಗೆ ಬಿಡಿಸಿ ನೋಡಿ.

  ಯಾವ ಕಾರಣಗಳಿಂದ ಇದು ಆಗುತ್ತದೆ:

  • ಸುಳಿ ಭಾಗದ ವೈಪರೀತ್ಯ ಬೆಳೆವಣಿಗೆಗೆ ಒಂದೇ ನಿರ್ದಿಷ್ಟ ಕಾರಣ ಇರುವುದಿಲ್ಲ.
  • ಹಲವು ಕಾರಣಗಳಿಂದ ಇದು ಆಗುತ್ತದೆ. ಕಾರಣವನ್ನು ಅವರವರು ತಮ್ಮ ತೋಟದ ಪರಿಸ್ಥಿತಿ ಮತ್ತು ತಮ್ಮ ಬೇಸಾಯ ಕ್ರಮವನ್ನು ಪರಾಮರ್ಶೆ ಮಾಡಿ ತಿಳಿಯಬೇಕಾಗುತ್ತದೆ.
  • ಹಾನಿಯಾದ ಅಡಿಕೆ ಸಸ್ಯವು ಸಾಮಾನ್ಯವಾಗಿ ಹಚ್ಚ ಹಸುರಾಗಿರುತ್ತದೆ.(ಅಪವಾದವೂ ಇದೆ)  ಇಂಥಹ ಅಡಿಕೆ ಸಸಿಗಳಿಗೆ ಸಾರಜನಕದ ಅಂಶ ಹೆಚ್ಚಾಗಿ ಲಭ್ಯವಾಗಿದೆ, ಅಥವಾ ಉಳಿದ ಪೋಷಕಗಳಾದ ರಂಜಕ ಮತ್ತು ಪೊಟ್ಯಾಶ್  ಹಾಗೂ ಮೆಗ್ನೀಶಿಯಂ , ಗಂಧಕ, ಮತ್ತು ಕ್ಯಾಲ್ಸಿಯಂ ಕಡಿಮೆಯಾಗಿದೆ.

ಕೀಟ ( ತಿಗಣೆ) ಗಳು ಎಲೆಯಲ್ಲಿ ಕಂಡು ಬರುತ್ತವೆ

ಸಾರಜನಕ ಅತಿಯಾಗುವುದು:

  • ಸಾರಜನಕ ಹೆಚ್ಚಾದಾಗ ಸಸ್ಯಕ್ಕೆ ಶಕ್ತಿ ಇರುವುದಿಲ್ಲ. ಮರ ದಷ್ಟಪುಷ್ಟವಾಗಿರುತ್ತದೆ. ರೋಗ- ಕೀಟಗಳಿಗೆ ಬೇಗ ಆಕರ್ಷಿತವಾಗುತ್ತದೆ.( excess nitrogen leads health problems in plants )
  • ಕೆಲವು ಕಡೆ ಸಾರಜನಕ ಹೊರತಾಗಿ ಉಳಿದ ಪೋಷಕಗಳು ಕೊಟ್ಟಿದ್ದರೂ ಸಹ ಅವು ಲಭ್ಯವಾಗದೆ ಇದ್ದಿರಬಹುದು.
  •  ಬಹಳಷ್ಟು ಜನ ಸಾವಯವ ಗೊಬ್ಬರವಾಗಿ ಕುರಿ ಗೊಬ್ಬರ, ಕೋಳಿ ಗೊಬ್ಬರವನ್ನು ಒಂದು, ಎರಡು ಬುಟ್ಟಿ ತನಕ ಹಾಕುವುದುಂಟು.
  • ಹೀಗೆ ಹಾಕಿದಾಗ ಸಾರಜನಕ ಅಂಶ ಹೆಚ್ಚಳವಾಗಿ ಪೊಟ್ಯಾಶ್ ಹಾಗೂ ರಂಜಕ ಅಂಶ ಕೊರತೆ ಉಂಟಾಗುತ್ತದೆ.

ಮರದ ಹಚ್ಚ ಹಸುರಾದ  ದೊಡ್ದ ದೊಡ್ಡ ಗರಿಗಳು, ದಪ್ಪ ದಪ್ಪದ ಹಾಳೆಗಳು  ಅಲ್ಲಲ್ಲಿ ಮುರಿದು ಬೀಳುವ ಎಲೆಗಳು ಮತ್ತು ಕಾಂಡ ಹೆಚ್ಚು ದಪ್ಪವಾಗಿರುವುದು, ದೊಡ್ಡ ಹೂ ಗೊಂಚಲು ಬಂದು ಕಾಯಿಗಳು ಕೆಲವೇ ಕೆಲವು ಮಾತ್ರ ಸೆಟ್ ಆಗುವುದು, ಸಾರಜನಕ ಹೆಚ್ಚಾದುದನ್ನು ತೋರಿಸುವ ಲಕ್ಷಣಗಳು.

ಕೀಟ ( ತಿಗಣೆ) ಗಳು ಸುಳಿಯಲ್ಲಿ  ಇದ್ದಾಗ ಸುಳಿ ಅಲ್ಲಿಗೆ ಬಂದ್ ಆಗುತ್ತದೆ.
ಕೀಟ ( ತಿಗಣೆ) ಗಳು ಸುಳಿಯಲ್ಲಿ ಇದ್ದಾಗ ಸುಳಿ ಅಲ್ಲಿಗೆ ಬಂದ್ ಆಗುತ್ತದೆ.

ನೀರು ಸರಿಯಾಗಿ ಬಸಿಯದೆ ಇರುವಿಕೆ:

  • ಯಾವುದೇ ಸಸ್ಯಕ್ಕೆ ನೀರು ಬೇಕು. ಅದು ತೇವಾಂಶ ಮಾತ್ರ. ಒಂದು ಹಿಡಿ ಮಣ್ಣನ್ನು  ಕೈಯಲ್ಲಿ ಗಟ್ಟಿ ಅದುಮಿದಾಗ ತೊಟ್ಟೂ ಸಹ ನೀರು ನೀರು ಬಿಡದಿರುವಷ್ಟು ಮಾತ್ರ ನೀರಿನ ತೇವ ಬೇಕು.
  • ಇದು ಮಳೆಗಾಲಲ್ಲೂ, ಬೇಸಿಗೆಯಲ್ಲು ಏಕಪ್ರಕಾರ.
  • ಮಳೆಗಾಲದಲ್ಲಿ ಸಹಜವಾಗಿ ನೀರು ಹೆಚ್ಚಾಗುತ್ತದೆ. ಆದರೆ ಅದು ನಿರಂತತ ಬಸಿಯುತ್ತಿರಬೇಕು. ಅದಕ್ಕೆ ಅಡ್ಡಿಯಾರೆ ಆ ನೀರು ವಿಷ( Toxicity or salt) ಆಗುತ್ತದೆ.

ತೋಟದಲ್ಲಿ ಕಣ್ಣಿಗೆ ನೀರು ಕಾಣಿಸದೇ ಇದ್ದರೂ ಸಹ ಮಣ್ಣಿನಲ್ಲಿ ನೀರು ಹೆಚ್ಚು ಹೊತ್ತು ನಿಲ್ಲುವ ಪರಿಸ್ಥಿತಿ ಇದ್ದರೆ ಅಲ್ಲಿಯೂ ಹೀಗೆ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ ಬೇರಿಗೆ ಹಾನಿಯಾಗಿ ಎಲೆ ಬೆಳವಣಿಗೆಗೆ ತೊಂದರೆಯಾಗುತ್ತದೆ. ಕವಲು ಬೇರುಗಳು ಕೊಳೆಯುತ್ತವೆ. ಬೇರಿನ ಹೊರ ತೊಗಟೆ ಕೊಳೆಯುತ್ತದೆ. ಕೆನೆ ಬಣ್ಣದಲ್ಲಿರಬೇಕಾದ ಬೇರು ವರ್ಣ ಕಳೆದುಕೊಂಡಿರುತ್ತದೆ. ಆ ಸಮಯದಲ್ಲಿ ಆಹಾರ ಪೂರೈಕೆಗೆ ಅಡ್ಡಿಯಾಗುತ್ತದೆ. ಕೆಲವು ಪೋಷಕಾಂಶಗಳು ಬಂಧಿ (Bonding) ಆಗುತ್ತದೆ.

  • ಆಹಾರದ ಸಮರ್ಪಕ ಪೂರೈಕೆಯಿಂದ ಸುಳಿಗಳು ಕಿರಿದಾಗುತ್ತದೆ. ಅದು ಶಕ್ತಿ ಇಲ್ಲದೆ ಮುರುಟಿಕೊಳ್ಳುತ್ತವೆ.

 ಕೀಟ ಸಮಸ್ಯೆ:

ಇಂತಹ ಕೀಟ ( ತಿಗಣೆ) ಗಳು ಸುಳಿಯಲ್ಲಿ ಇರುತ್ತವೆ.
ಇಂತಹ ಕೀಟ ( ತಿಗಣೆ) ಗಳು ಸುಳಿಯಲ್ಲಿ ಇರುತ್ತವೆ.
  • ಅಡಿಕೆ ಸುಳಿಗಳು ಸರಾಗವಾಗಿ ಮೂಡುತ್ತಾ ಸಹಜವಾಗಿ ಗರಿ ಬಿಡಿಸಿಕೊಳ್ಳದ  ಸಮಯದಲ್ಲಿ ಆ ಭಾಗದಲ್ಲಿ ಕೆಲವು ರಸ ಹೀರುವ ಕೀಟಗಳು ಪ್ರವೇಶವಾಗುತ್ತದೆ.
  • ಸ್ಪಿಂಡಲ್ ಬಗ್, ಅದೇ ರೀತಿ ಇನ್ನೂ ಕೆಲವು ಬಗ್ ಗಳು ಬರುತ್ತದೆ.
  • ಅದರ ಜೊತೆಗೆ ಹಿಟ್ಟು ತಿಗಣೆ ಪ್ರ ವೇಶವಾಗುತ್ತದೆ. ಅದನ್ನು ತಿನ್ನಲು ಇರುವೆಗಳು ಬರುತ್ತವೆ.
  • ಇವೆಲ್ಲವೂ ಸೇರಿ ಸುಳಿಯನ್ನು ಸರಾಗವಾಗಿ ಮುಡಲು ಬಿಡುವುದಿಲ್ಲ.
  • ಒಂದು ಕುಬ್ಜ ಸುಳಿ ಬಂದರೆ ಮತ್ತೆ ಬರುವುದು ಸಹ ಕುಬ್ಜವಾಗಿಯೇ ಇರುತ್ತವೆ.

ಬೇರು ಜಂತು ಹುಳ:

ಆರೋಗ್ಯವಂತ ಮರದ ಬೇರು ಹೀಗೆ ಇರಬೇಕು.
ಆರೋಗ್ಯವಂತ ಮರದ ಬೇರು ಹೀಗೆ ಇರಬೇಕು.
  • ಅಡಿಕೆ ಸಸ್ಯಗಳಿಗೆ ಬೇರನ್ನು ಹಾಳು ಮಾಡುವ ನಮಟೋಡು ತೊಂದರೆ ಇದೆ. ಇದು ಸಪುರದ ಕವಲು ಬೇರುಗಳನ್ನು ಹಾಳು ಮಾಡಿ ಆಹಾರ ಸರಬರಾಜಿಗೆ ತೊಂದರೆ ಮಾಡುತ್ತವೆ.
  • ಇಂತಹ ಚಿನ್ಹೆ ಇರುವ ಮರದ ಬೇರನ್ನು ಒಂದು ಭಾಗದಲ್ಲಿ ಅಗೆದು ನೋಡಿದರೆ ಮುಖ್ಯ ಬೇರು ಇರುತ್ತದೆ.
  • ಅದಕ್ಕೆ ಕವಲು ಬೇರುಗಳು ಇದ್ದರೂ ಅಲ್ಪ ಸ್ವಲ್ಪ ಸಣ್ಣದಾಗಿ ರಿತ್ತವೆ. ಬೇರಿನ ತುದಿ ಭಾಗ ಕಪ್ಪಾಗಿರುತ್ತದೆ.
  • ಬೇರಿನ ಒಳಗೆ ಆಹಾರ, ನೀರು ಸರಬರಾಜು ಮಾಡುವ ಜೈಲಮ್ ಮತ್ತು ಪ್ಲೋಯೆಂ ಹಾನಿಗೊಳಗಾಗಿರುತ್ತದೆ.
  • ಬೇರುಗಳು ಗಂಟು ಗಂಟು ಇರುತ್ತವೆ. ಇದರಿಂದ ಸುಳಿಗಳು ಗಿಡ್ಡವಾಗಿ ಬಿಡಿಸಿಕೊಳ್ಳದಂತಾಗುತ್ತದೆ.

 ಪರಿಹಾರಗಳು:

  • ಅಡಿಕೆ ಇರಲಿ ಯಾವುದೇ ಬೆಳೆ ಇರಲಿ ಅಗತ್ಯ ಮೂರು (NPK)ಪೋಷಕಗಳನ್ನು ಸಮತೋಲನ  ಪ್ರಮಾಣದಲ್ಲಿ ಕೊಡಬೇಕು.
  • ಹಚ್ಚ ಹಸುರಾಗಿ ಸಾರಜನಕ ಹೆಚ್ಚಾದ ಲಕ್ಷಣ ಇದ್ದಾಗ ಇದ್ದಾಗ ಆ ಪೋಷಕವನ್ನು ಬಿಟ್ಟು ಬೇರೆ ಪೋಷಕ ಇರುವ ಗೊಬ್ಬರವನ್ನು ಕೊಡಬೇಕು.
  • ರಾಸಾಯನಿಕ ಮೂಲದಲ್ಲಿ 0:52:34  ಪೋಷಕವನ್ನು ಕೊಟ್ಟರೆ ಅದರಲ್ಲಿ ಸಾರಜನಕ ಇರುವುದಿಲ್ಲ.
  • ಒಂದು ಮರಕ್ಕೆ ತಿಂಗಳಿಗೆ 25  ಗ್ರಾಂ ನಂತೆ 2-3 ತಿಂಗಳು ಕೊಟ್ಟಾಗ  ಸಮತೋಲನಕ್ಕೆ ಬರುತ್ತದೆ.

ಅಡಿಕೆ ತೋಟ, ತೆಂಗಿನ ತೋಟಕ್ಕೆ ನೀರು ಹೆಚ್ಚು ಇಲ್ಲವೆಂದು ಬಸಿ ವ್ಯವಸ್ಥೆ ಮಾಡದೆ ಇರಬೇಡಿ. ಎರಡು ಮರಗಳಿಗೆ ಒಂದರಂತೆ ಬಸಿ ವ್ಯವಸ್ಥೆ ಅಗತ್ಯವಾಗಿ ಬೇಕು.  ಇದು ನೀರು ಬಸಿಯುವಿಕೆ ಮತ್ತು ಬೇರಿನ ಶ್ವಾಸೋಛ್ವಾಸ ಕ್ರಿಯೆಗೆ ಮತ್ತು  ಕೆಲವು  ವಿಷ( Toxic, or salt) ಕಾರಕಗಳೂ ಇದರಲ್ಲಿ ಇಳಿದು ಹೋಗುತ್ತದೆ. ಅಡಿಕೆ ತೋಟದಲ್ಲಿ ಕನಿಷ್ಟ 2 ಅಡಿ ಆಳದ ಬಸಿಗಾಲುವೆ ಅಗತ್ಯವಾಗಿ ಬೇಕು.

  • ಸುಳಿಯಲ್ಲಿ ಬರುವ ತಿಗಣೆಯ ನಿಯಂತ್ರಣಕ್ಕೆ ಸುಳಿ ಭಾಗಕ್ಕೆ ಮೊನೋಕ್ರೋಟೋಫೋಸ್ ಕೀಟನಾಶಕವನ್ನು 2.5 ಮಿಲಿ 1 ಲೀ. ನೀರು ಬೆರೆಸಿ ಸಿಂಪಡಿಸಬೇಕು.
  • ಇದು ಲಭ್ಯವಿಲ್ಲದಿದ್ದರೆ ಬೇರೆ ಬದಲಿ ಕೀಟನಾಶಕವನ್ನು ಸಿಂಪಡಿಸಬಹುದು.
  • ಪೋಷಕಗಳಾಗಿ ಬರೇ NPK ಅಲ್ಲದೆ  ಗಂಧಕ, ಮೆಗ್ನೀಶಿಯಂ, ಕ್ಯಾಲ್ಸಿಯಂ ಪೋಷಕವನ್ನು ಕೊಡಬೇಕು.
  • ವರ್ಷದಲ್ಲಿ 2-3 ಸಲ ಸೂಕ್ಷ್ಮ ಪೋಷಕಾಂಶ ಮಿಶ್ರಣ 200 ಗ್ರಾಂ /200 ಲೀ. ನೀರು, ಬೆರೆಸಿ ಎಲೆಗಳಿಗೆ ಸಿಂಪಡಿಸಿದರೆ ಲಘು ಪೋಷಕಾಂಶದ ತೃಷೆ ನೀಗುತ್ತದೆ.

 ವರ್ಷಕ್ಕೆ ಒಮ್ಮೆಯಾದರೂ ಜೀವಾಣು ಗೊಬ್ಬರ( ಸಾರಜನಕ ಸ್ಥಿರೀಕರಿಸುವ(Fixing) ರಂಜಕ( mobilizing) ಸಂಚಲನ ಮತ್ತು ಪೊಟ್ಯಾಶ್ ಕರಗಿಸಿಕೊಡಬಲ್ಲ (Solublizing) ಮಣ್ಣಿಗೆ ಸಿಂಪರಣೆ ಮೂಲಕ ಕೊಡಬೇಕು.

  • ಜಂತು ಹುಳ ಇರಲಿ, ಇಲ್ಲದಿರಲಿ ಜೀವಾಣು ಗೊಬ್ಬರದ ಜೊತೆಗೆ ಜೈವಿಕ ಜಂತು ನಾಶಕವಾದ ಪೆಸಿಲೋಮೈಸಿಸ್ (pessilomisis) ಸೇರಿಸಿ ಸಿಂಪಡಿಸುವುದು ಉತ್ತಮ ಫಲಿತಾಂಶ ಕೊಡುತ್ತದೆ.
  • ಕೀಟ ಸಮಸ್ಯೆ ಆಗಿದ್ದರೆ, 2-3 ತಿಂಗಳಲ್ಲಿ ಹೊಸ ಸುಳಿ ಮೂಲಕ ಫಲಿತಾಂಶ ತಿಳಿಯುತ್ತದೆ.
  • ಬೇರೆ ಕಾರಣಗಳಾಗಿದ್ದರೆ 3-5 ತಿಂಗಳ ತನಕ ಸಮಯಾವಕಾಶ ಬೇಕಾಗುತ್ತದೆ.

ಬಹುತೇಕ ಸಸ್ಯ ಬೆಳವಣಿಗೆಯಲ್ಲಿ ಆಗುವ ತೊಂದರೆಗಳಿಗೆ ಇದೇ ಕಾರಣ. ಬೀಜದಿಂದ ಉಂಟಾಗುವ ಸಮಸ್ಯೆ ಇದಕ್ಕಿಂತ ಭಿನ್ನವಾಗಿರುತ್ತದೆ. ಅಡಿಕೆ ಕೃಷಿಕರು ಅಡಿಕೆಗೆ ಬೇಕಾಗುವ ಬೇಸಾಯ ಕ್ರಮವನ್ನು ಚಾಚೂ ತಪ್ಪದೆ ಅನುಸರಿಸಬೇಕು. ವ್ಯತ್ಯಾಸಗಳು ಕೆಲವೊಮ್ಮೆ ಬೆಳವಣಿಗೆಯಲ್ಲಿ ನ್ಯೂನತೆಯನ್ನು ತೋರ್ಪಡಿಸುತ್ತವೆ.
end of the article:—————————————————-
search words: exorbitent growth of areca palm# areca palm # areca palm  and its growth# areca garden management# areca nutrition management#  nutrition deficiencies in arecanut palm#

Leave a Reply

Your email address will not be published. Required fields are marked *

error: Content is protected !!