krushiabhivruddi

ಸಾವಯವ ಕೃಷಿ- ಇದು ವ್ಯವಸ್ಥಿತ ರಾಜಕೀಯ.

ರೈತರೇ ನೀವು ಕೃಷಿ ಮಾಡುವವರೇ ಹೊರತು ಪಕ್ಷ ಕಟ್ಟುವವರಲ್ಲ. ಪಕ್ಷ ಕಟ್ಟುವ, ರಾಜಕೀಯ ಮಾಡುವ ಮನೋಸ್ಥಿತಿಯವರು ನಾವಲ್ಲ. ನಾವು ಸಾಧ್ಯವಾದಷ್ಟು ಒಗ್ಗಟ್ಟಾಗುವ ಬಗ್ಗೆ ಶ್ರಮಿಸೋಣ. ನಮಗೆ ಯಾವ ವಿಧಾನದ ಕೃಷಿ ಲಾಭದಾಯಕ ಎಂದೆಣಿಸುತ್ತದೆಯೋ ಅದನ್ನು ಮಾಡೋಣ.. ಕೃಷಿ ಮಾಡುವುದು ನಮ್ಮ ಬದುಕುವ ದಾರಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ತಾನೇ? ಇಲ್ಲಿ ಇದರ ಪ್ರಸ್ತಾಪ ಯಾಕೆಂದರೆ ಕೃಷಿಕರು ಅವರ ಹೊಟ್ಟೆ ಪಾಡಿಗಾಗಿ  ವೃತ್ತಿ ಮಾಡುವವರು. ಇವರ ಶ್ರಮದಲ್ಲಿ ಸ್ವಾರ್ಥ ಅಲ್ಲದೆ ಸಾಮಾಜಿಕ ಕಳಕಳಿಯೂ ಇದೆ. ಇದರಲ್ಲಿ ಮಧ್ಯಪ್ರವೇಶಕ್ಕೆ ಮೂರನೆಯವರಿಗೆ…

Read more

ಇದು ಹಲಸಿನ ಹೊಸ ತಳಿ.

ಹಲಸಿನಲ್ಲಿ ಕೆಲವು ತಳಿಗಳ ಗುಣಗಳನ್ನುಅಧ್ಯಯನ ನಡೆಸಿ ಉತ್ತಮ ತಳಿ ಎಂದು ಸಂಶೋಧನಾ ಕೇಂದ್ರಗಳು ಬಿಡುಗಡೆ ಮಾಡಿವೆ. ಕೆಲವು ರೈತರೇ ಬಿಡುಗಡೆ ಮಾಡಿದ್ದೂ ಇದೆ!! ಹಲಸಿಗೆ ಘಮ ಘಮ ಸುವಾಸನೆ  ಬಂದದ್ದು  ಅದಕ್ಕೆ  ದೊರೆತ  ಪ್ರಚಾರದ ಕಾರಣದಿಂದ. ಇವೆಲ್ಲಾ ಪ್ರಚಾರ ಗಳಿಗೂ ಮುಂಚೆಯೇ  ಬೆಂಗಳೂರಿನ ಕೃಷಿ ವಿಶ್ವವಿಧ್ಯಾನಿಲಯದ ತೋಟಗಾರಿಕಾ ವಿಭಾಗದಲ್ಲಿ ಸಾಕಷ್ಟು  ಹಲಸಿನ ಬೇರೆ  ಬೇರೆ ತಳಿಗಳ  ಸಂಗ್ರಹ ಇತ್ತು. ಅಲ್ಲಿ ಅದರ ಅಧ್ಯಯನ ನಡೆಯುತ್ತಿತ್ತು. ಆದರೆ ಆಂಥ ಪ್ರಚಾರ ಇರಲಿಲ್ಲ. ಇಲ್ಲಿ ಅಧಿಕ ಇಳುವರಿ, ಗುಣ ಮಟ್ಟದ…

Read more
ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more

ಪಶು ಆಹಾರ ನೀವೇ ಮಾಡಿಕೊಳ್ಳಿ-ಲಾಭವಿದೆ.

ಹೈನುಗಾರಿಕೆ ಮಾಡುತ್ತಿದ್ದಿರಾ? ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮ ಆ ವೃತ್ತಿಯನ್ನು  ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನು ಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ. ಕೊಂಡು ತರುವ ಪಶು ಆಹಾರ: ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ. ಸ್ಪರ್ಧೆಗಾಗಿ  ದರ ವೆತ್ಯಾಸಗಳೂ ಇವೆ. ಹಾಲು…

Read more
ರಾಸಾಯನಿಕ ಮುಕ್ತ ಕೀಟ ನಿಯಂತ್ರಣ

ರಾಸಾಯನಿಕ ಮುಕ್ತ ಕೀಟ-ರೋಗ ನಿಯಂತ್ರಿಸುವ ವಿಧಾನಗಳು.

ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ, ಸುರಕ್ಷಿತ ಬೆಳೆ ಸಂರಕ್ಷಣಾ ವಿಧಾನಗಳು  ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕವಾಗಿ  ರಾಸಾಯನಿಕ  ಬಳಕೆ ಇಲ್ಲದೆ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು  ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ಜೀವಾಣುಗಳಾಗಿದ್ದು, ಎಲ್ಲದರ ಮೂಲ ಮಣ್ಣೇ ಆಗಿರುತ್ತದೆ. ಒಂದು ತೋಟದಲ್ಲಿ ಎಲ್ಲದಕ್ಕೂ ರೋಗ ಅಥವಾ ಕೀಟ ಸಮಸ್ಯೆ ಉಂಟಾಗಿ,ಕೆಲವು…

Read more
ಹಾಲು ಕರೆಯುವುದು

ಕರು ಹಾಕದಿದ್ದರೂ ಹಾಲು ಕರೆಯಬಹುದು.

ಕರು ಇಲ್ಲದೆ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅದರಿಂದ ಹಾಲು ಕರೆಯಬಹುದು,  ಮತ್ತೆ ಆ ಹಸು ಕರು ಹಾಕುವಂತೆ  ಮಾಡಲೂ ಇದು ಸಹಕಾರಿ. ಹಲವು ಕಾರಣಗಳಿಂದ ರಾಸುಗಳು ಬೆದೆಗೆ ಬಾರದೇ ಇರುವುದು, ಬೆದೆಗೆ ಬಂದರೂ ಗರ್ಭ ಕಟ್ಟದೇ ಇರುವುದು, ಗರ್ಭ ಕಟ್ಟಿದರೂ ಪದೇ ಪದೇ ಗರ್ಭಪಾತವಾಗುವುದು ಇತ್ಯಾದಿ ಕಾರಣಗಳಿಂದ ರಾಸುಗಳು ಕರು ಹಾಕಲು ಸಾಧ್ಯವಾಗದೇ ಬರಡು ಜಾನುವಾರುಗಳೆಂದು ಕರೆಯಿಸಿಕೊಳ್ಳುತ್ತವೆ.. ಅದಕ್ಕೆ ತಜ್ಞ ವೈದ್ಯರಿಂದ ಆಧುನಿಕ ಚಿಕಿತ್ಸೆಗಳ ಮೂಲಕ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ರೈತರು ಹತಾಶೆಯಿಂದ…

Read more
ಶುಂಠಿ - ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿ – ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿಯ ಬಿತ್ತನೆ  ಗಡ್ಡೆ ಮಾರಲು ಅದೆಷ್ಟು ಏಜೆಂಟರೋ. ಈಗಲೇ ಅವರ ವ್ಯವಹಾರ ಕುದುರುವುದು. ಅಮಾಯಕ  ಹೊಸ ಬೆಳೆಗಾರರು ಇವರ ಬಲೆಗೇ ಬೀಳುವುದು.  ಹೆಚ್ಚಿನ ರೈತರು ಬೀಜದ ಗಡ್ಡೆ ಆಯ್ಕೆ ಮಾಡುವಾಗ ತಪ್ಪುತ್ತಾರೆ. ಇದರಿಂದ ಮುಂದೆ ಬೆಳೆಯಲ್ಲಿ ರೋಗಗಳು ಖಾಯಂ ಆಗುತ್ತವೆ.ಶುಂಠಿಯ ಬೆಳೆಯಲ್ಲಿ ರೋಗ ಮುಕ್ತ  ಬಿತ್ತನೆ ಗಡ್ದೆಯೇ ಪ್ರಮುಖ ಹೆಜ್ಜೆ ! ಶುಂಠಿ ಬೆಳೆಸಬೇಕೆಂದಿರುವಿರಾದರೆ ನೀವು ಬೆಳೆ  ಇರುವ ಹೊಲವನ್ನು ನೋಡಿ ಬೀಜದ ಗಡ್ಡೆ ಆಯ್ಕೆ ಮಾಡಬೇಕು ಎನ್ನುತ್ತಾರೆ. ಹಲವಾರು ವರ್ಷಗಳಿಂದ ಶುಂಠಿ ಬೆಳೆಯುವ ಅನುಭವಿಗಳು ತಮಗೆ…

Read more

ತೆಂಗು – ಹೈಬ್ರೀಡ್ ತಳಿ ಮಾತ್ರ ಬೆಳೆಸಿ.

ಹೈಬ್ರೀಡ್ ತಳಿಗಳು ಎಂದರೆ ಎರಡು ಉತ್ತಮ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ಹೊಸ ತಳಿ.   ಹೈಬ್ರೀಡ್  ಎಂದರೆ ಖಾತ್ರಿಯಾಗಿ ಅಧಿಕ ಇಳುವರಿ ನೀಡಬಲ್ಲ ತಳಿಗಳು. ಹೈಬ್ರೀಡ್ ಬೆಳೆದರೆ ಬೇಗ ಇಳುವರಿ ಪ್ರಾರಂಭವಾಗಿ, ಕೊಯಿಲು ಸುಲಭವಾಗುತ್ತದೆ.  ನಮ್ಮ ಸುತ್ತಮುತ್ತ ಇರುವ ಬಹುತೇಕ ತಳಿಗಳು ಎತ್ತರದ ತಳಿಗಳು. ಇದರಲ್ಲಿ ಫಸಲು ಪ್ರಾರಂಭವಾಗಲು 5-7 ವರ್ಷ ಬೇಕು. ಹಾಗೆಯೇ ನಮ್ಮಲ್ಲಿ ಕೆಲವು ಹತ್ತಿರದ ಗಂಟಿನ ಗಿಡ್ಡ ತಳಿಗಳಾದ ಗೆಂದಾಳಿ(COD, CYD) ಹಸಿರು (CGD Gangabondam) ತಳಿಗಳು ಇವೆ. ಗಿಡ್ಡ ತಳಿಯ…

Read more

ಮಂಗ-ಪಕ್ಷಿಗಳಿಂದ ಬೆಳೆ ರಕ್ಷಣೆ.

ಹಣ್ಣು ಹಂಪಲು  ಬೆಳೆಯಲ್ಲಿ  ಸುಮಾರು 50 % ಕ್ಕೂ ಹೆಚ್ಚು ಹಣ್ಣು ಹಕ್ಕಿ- ಬಾವಲಿ, ಮಂಗ, ಅಳಿಲು ನವಿಲು ಮತ್ತು ಪತಂಗಗಳಿಂದ ಹಾನಿಯಾಗುತ್ತದೆ. ಕೆಲವು ತಿಂದು ಹಾಳಾದರೆ ಮತ್ತೆ ಕೆಲವು ಗಾಯ ಮಾಡಿ  ಹಾಳು ಮಾಡುತ್ತವೆ. ಇದನ್ನು ತಡೆಯಲು ಇರುವ ಏಕೈಕ ಉಪಾಯ  ಬಲೆ ಹಾಕುವುದು.. ಬಲೆ ಹಾಕುವ ಪದ್ದತಿ ಸುಮಾರು 25-30 ವರ್ಷಗಳಿಂದ ದ್ರಾಕ್ಷಿ ಬೇಸಾಯದಲ್ಲಿ ಚಾಲ್ತಿಯಲ್ಲಿ  ಇತ್ತು. ಈಗ ಇದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಬಳಸಲ್ಪಡುತ್ತದೆ. ಬಲೆ ಇಲ್ಲದಿದ್ದರೆ ಹಣ್ಣೇ ಇಲ್ಲ. ಬೇಸಿಗೆಯಲ್ಲಿ ಬಹುತೇಕ…

Read more

5 ವರ್ಷದೊಳಗೆ ನೀರು ಬರಿದಾಗುತ್ತದೆ. ಎಚ್ಚರ . !!

ಅಂತರ್ಜಲ ಒಂದು ಸಂಗ್ರಹಿತ ಜಲ ಮೂಲ. ಇದನ್ನು ಎಷ್ಟು ಹಿತಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟು ಸಮಯ ಅದು ನೀರು ಕೊಡುತ್ತಿರುತ್ತದೆ. ಅಂತರ್ಜಲವನ್ನು ನಾವು ಸಾಮೂಹಿಕವಾಗಿ ಉಳಿಸುವ ಪ್ರಯತ್ನ ಮಾಡಿದರೆ ಉಳಿಸಬಹುದು. ಈಗ ನಾವು  ಮಾಡುತ್ತಿರುವ ಅನಾಚಾರದಲ್ಲಿ ಇದು ಕೆಲವೇ ಸಮಯದಲ್ಲಿ ನಮಗೆ ಕೈ ಕೊಡುತ್ತದೆ. ರಾಜ್ಯ – ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸುಮಾರು 25  ವರ್ಷದ ಹಿಂದೆ ಅಂತರ್ಜಲ ಮಟ್ಟ 250 ಅಡಿಯಲ್ಲಿದ್ದುದು, ಈಗ 500 ಅಡಿಗೆ ಮುಟ್ಟಿದೆ. ಅಪವಾದವಾಗಿ ಕೆಲವು ಕಡೆ ಸ್ವಲ್ಪ ಮೇಲೆಯೇ…

Read more
error: Content is protected !!