ಮೆಕ್ಕೇ ಜೋಳ ಬೆಳೆಗಾರರು ಕಂಗಾಲಾಗಬೇಕಾಗಿಲ್ಲ.
ಕೈಯಲ್ಲಿ ತುತ್ತು ಹಿಡಿದುಕೊಂಡ ನಂತರ ಅದನ್ನು ಬಾಯಿಗೆ ಇಡಲೇ ಬೇಕು. ಅದನ್ನು ಸಿಟ್ಟಿನಲ್ಲಿ ಹೊರ ಚೆಲ್ಲಿದರೆ ಯಾರಿಗೂ ಏನೂ ಪ್ರಯೋಜನ ಇಲ್ಲ. ನಮ್ಮ ರೈತರು ದಾಸ್ತಾನು ಇಡಬಹುದಾದ ಬೆಳೆಗಳ ಬೆಲೆ ಕುಸಿತವಾದಾಗ ತೆಗೆದುಕೊಳ್ಳೂವ ಅವಸರದ ತೀರ್ಮಾನ ಅವನಿಗೇ ನಷ್ಟದ ಬಾಬ್ತು ಆಗುತ್ತದೆ. ಮೆಕ್ಕೇ ಜೋಳದ ಬೆಲೆ ಕುಸಿತಕೆ ಕಾರಣ, ಕೋಳೀ ಉದ್ದಿಮೆಯ ನಷ್ಟ ಎನ್ನಲಾಗುತ್ತಿದೆ. ನಮ್ಮಲ್ಲಿ ಬೆಳೆಯುವ ಸುಮಾರು 60 % ಹೆಚ್ಚಿನ ಮೆಕ್ಕೇ ಜೋಳ ಕೋಳೀ ಆಹಾರ ತಯಾರಿಕೆಗೇ ಬಳಸಲ್ಪಡುತ್ತದೆ. ಉಳಿದದ್ದು ಪಶು ಆಹಾರ …