
ಅಧಿಕ ಲಾಭದ ಮಿಶ್ರ ಬೆಳೆ – ಸೂಜಿ ಮೆಣಸು
ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕಾಗೆ ಮೆಣಸು, ಜೀರಿಗೆ ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ …