
ನೀಲಗಿರಿ- ಹಾಳೂ ಅಲ್ಲ – ತೀರಾ ಒಳ್ಳೆಯದೂ ಅಲ್ಲ.
ನೀಲಗಿರಿಯ ನೆಡುತೋಪುಗಳು ಪ್ರಾರಂಭವಾಗಿ ಸುಮಾರು 150 ವರ್ಷ ಕಳೆದಿದೆ. ಈಗ ಪ್ರಾರಂಭವಾಗಿದೆ ಈ ಮರದಿಂದ ನೀರು ಬರಿದಾಗುತ್ತದೆ ಎಂದು. ನಿಜಕ್ಕೂ ನೀರು ಬರಿದಾಗುವುದು ಹೌದೇ?ಅಥವಾ ಇದು ಒಂದು ಅಪ ಪ್ರಚಾರವೇ ಸ್ವಲ್ಪ ಚರ್ಚೆ ಮಾಡೋಣ. ತಜ್ಜರ ಪ್ರಕಾರ ಇದು ಹಾಳೂ ಅಲ್ಲ- ತೀರಾ ಒಳ್ಳೆಯದೂ ಅಲ್ಲ. ನೀಲಗಿರಿ ಮರ ಏನು: ನೀಲಗಿರಿ Eucalyptus ಎಂಬ ಮರ ಬಹಳ ವೇಗವಾಗಿ ಬೆಳೆಯುವ ಮರ. ಆಸ್ಟ್ರೇಲಿಯಾ ಮೂಲದ ಈ ಮರವನ್ನು 1790 ರಲ್ಲಿ ಕರ್ನಾಟಕದ ರಾಜ್ಯದ ನಂದಿ ಬೆಟ್ಟಗಳಲ್ಲಿ ಬೆಳೆಸಲಾಯಿತು….