
ಅಂಜೂರ – ಒಣ ಭೂಮಿಗೆ ಲಾಭದ ಹಣ್ಣಿನ ಬೆಳೆ.
ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ. ಇದೊಂದು ತಾಜಾ ಮತ್ತು ಒಣಗಿಸಿ ಸಂಸ್ಕರಣೆಗೆ ಸೂಕ್ತವಾದ ಹಣ್ಣು. ಬಹಳಷ್ಟು ಹಣ್ಣುಗಳಲ್ಲಿ ಹುಳಿ ಅಂಶ ( ಆಮ್ಲತೆ ಇದ್ದರೆ, ಇದರಲ್ಲಿ ಅದು ಇಲ್ಲವೇ ಇಲ್ಲ. ಪೌಷ್ಟಿಕಾಂಶ ಭರಿತ ಕೆಲವೇ ಕೆಲವು ಹಣ್ಣುಗಳಲ್ಲಿ ಇದು ಇದು ಒಂದು. ಕರ್ನಾಟಕದ ಮೈಸೂರಿನ ಶ್ರೀರಂಗಪಟ್ಟಣದ ಗಂಜಾಮ್ ಎಂಬ ಊರಿನ ಅಂಜೂರದ ಹಣ್ಣು ಇತಿಹಾಸ ಪ್ರಸಿದ್ದಿ. ಈಗ ಈ ಪ್ರದೇಶವಲ್ಲದೆ ಹೊಸ…