
ಸೀಬೆ ಸಸ್ಯ ಸೊರಗುವುದಕ್ಕೆ ಕಾರಣ ಮತ್ತು ಪರಿಹಾರ
ಸೀಬೆ (ಪೇರಳೆ) ಹಣ್ಣು ಹಂಪಲು ಬೆಳೆಗಳಲ್ಲಿ ಲಾಭದಾಯಕ ಹಣ್ಣಿನ ಬೆಳೆಯಾಗಿದೆ. ಇದು ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ಹಣ್ಣಿನ ಬೆಳೆ. ಕೆಲವು ಪ್ರದೇಶಗಳಲ್ಲಿ ಸೀಬೆ ಸಸ್ಯ ಏನೇ ಮಾಡಿದರೂ ಏಳಿಗೆ ಆಗುವುದಿಲ್ಲ. ಸಸ್ಯದ ಎಲೆಗಳು ತಿಳಿ ಹಳದಿ ಬಣ್ಣ ಮತ್ತು ತಾಮ್ರದ ಬಣ್ಣದ ಮೂಲಕ ತನ್ನ ಅನಾರೋಗ್ಯವನ್ನು ತೋರಿಸುತ್ತದೆ. ಸೀಬೆ ಸಸ್ಯದ ಎಲೆಗಳು ಹೀಗೆ ಆದರೆ ಅವು ಒಂದು ರೀತಿಯ ಪರಾವಲಂಭಿ ಜಂತು ಹುಳದ ಬಾಧೆ ಎನ್ನಬಹುದು. ಇದನ್ನು ಕರಾರುವಕ್ಕಾಗಿ ತಿಳಿಯಲು ಒಂದು ಬೇರನ್ನು ಅಗೆದು ನೋಡಿ. ನಮ್ಮ…