ನಾವೂ ಬೆಳೆಸಬಹುದೇ ಸ್ಟ್ರಾಬೆರಿ ಬೆಳೆ.
ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ. ಕೈ ಹಿಡಿದರೆ ಮಾತ್ರ ಇದು ಭಾರೀ ಲಾಭದ ಬೆಳೆ . ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು ಬರುವುದು ಮಹಾರಾಷ್ಟ್ರದ ಮಹಾಬಲೇಶ್ವರದಿಂದ. ಇದಕ್ಕೆ ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರು. ದೇಶದ ಬೇರೆ ಕಡೆಗಳಲ್ಲಿ ಬೆಳೆಯುತ್ತಾರೆಯಾದರೂ ಇಷ್ಟು ಪ್ರಮಾಣ…