ಶಹಬ್ಬಾಸ್ ಹೇಳಬೇಕು ಈ ರೈತರ ಬುದ್ದಿವಂತಿಕೆಗೆ
ಹಿರಿಯಡ್ಕದ ಸುರೇಶ್ ನಾಯಕ್ ಇವರು ಕಳೆದ 8 ವರ್ಷಗಳಿಂದ ಕಲ್ಲಂಗಡಿ ಬೆಳೆಸುತ್ತಿದ್ದಾರೆ. ಕಲ್ಲಂಗಡಿ ಬೇಸಾಯದಲ್ಲಿ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಕೃಷಿ ಮಾಡಿದವರು. 1 ಎಕ್ರೆಯಿಂದ ಪ್ರಾರಂಭಿಸಿ ಈಗ 14 ಎಕ್ರೆ ತನಕ ಬೆಳೆ ಬೆಳೆಸುತ್ತಾರೆ. ಈ ವರ್ಷ ಕೊರೋನಾ ಮಹಾ ಮಾರಿಯಿಂದ ಹಣ್ಣು ಹಂಪಲು ಬೆಳೆದ ರೈತರು ಸಂಕಷ್ಟ ಅನುಭವಿಸಿದಂತೆ ಇವರೂ ಒಮ್ಮೆ ಕಂಗಾಲಾಗಿದ್ದರೂ ಹೇಗಾದರೂ ಅದರಲ್ಲಿ ಗೆದ್ದೇ ಬಿಟ್ಟರು. ಮಾಡಿದ್ದೇನು: ಬೆಳೆ ಬೆಳೆಯುವ ರೈತರಿಗೆ ಮಾರಾಟ ಮಾಡುವುದೂ ಗೊತ್ತಿರಬೇಕು. ಹಲವಾರು ಸಲ…