ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.
ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ. ವೃತಿ ಅರಸುವ ಆಸಕ್ತರಿಗೆ ಮನೆಯ ಕಡಿಮೆ ಸ್ಥಳಾವಕಾಶದಲ್ಲೂ ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ. ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…