ಕೃಷಿಕರು ಹಣದಲ್ಲಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು.
ನಾವು ಕೃಷಿಕರು ಬಡವರು. ನಮಗೆ ಏನೂ ಇಲ್ಲ ಎಂದು ಯಾವತ್ತೂ ಹೇಳಬೇಡಿ. ಕೃಷಿರಾದವರೇ ಸಮಾಜದಲ್ಲಿ ತೃಪಿಯ ಜೀವನ ನಡೆಸು ಹೃದಯ ಶ್ರೀಮಂತರು. ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಬಡವನಾದವನೇ ಮುಂದೆ ಶ್ರೀಮಂತನಾಗುವುದು. ಸಿರಿವಂತನಾದವನೇ ನಂತರ ಬಡವನಾಗುವುದು. ಇದೊಂದು ಚಕ್ರ. ಕೃಷಿಕರ ಜೀವನ ಕ್ರಮ ಎಂಬುದು ಸಮಾಜದಲ್ಲಿ ಯಾರೂ ಗಳಿಸದ ಸುಖೀ ಬದುಕನ್ನು ಅನುಭವಸಲಿಕ್ಕಾಗಿಯೇ ಇರುವುದು. ಸ್ವಾವಲಂಭಿ ಬದುಕು ಎಂಬುದು ಇದ್ದರೆ ಅದು ಕೃಷಿ ವೃತ್ತಿಯಲ್ಲಿ ಮಾತ್ರ. ಇಲ್ಲಿ ನಮಗೆ ನಾವೇ ಮಾಲಕರು. ಹೊಟ್ಟೆಗೆ ತಿನ್ನುವುದಕ್ಕೇನೂ ಕಡಿಮೆ ಇಲ್ಲ. ತಿಂದು…