ಅಲಸಂದೆ ಇಳುವರಿ

ಅಲಸಂದೆ ಬೆಳೆದರೆ ಎಕ್ರೆಗೆ ₹ 7.8 ಲಕ್ಷ ಆದಾಯ.

ತರಕಾರಿ ಬೆಳೆ ಒಂದು ತಪಸ್ಸು. ಶ್ರದ್ಧೆಯಿಂದ ಮಾಡಿದರೆ ಅದು ಒಲಿಯುತ್ತದೆ. ಹೆಚ್ಚು ಕಾಲಾವಧಿ ಬೇಕಾಗಿಲ್ಲ. ತಪಸ್ಸು ಮಾಡಿ ಫಲ ಪಡೆಯಲು ಋಷಿ ಮುನಿಗಳು ವರ್ಷಾನು ವರ್ಷ ಕಷ್ಟಪಡಬೇಕು. ಆದರೆ ಕೃಷಿಯಲ್ಲಿ ತಪಸ್ಸು ಮಾಡಲು ವರ್ಷ ಗಟ್ಟಲೆ ಕಾಯಬೇಕಾಗಿಲ್ಲ.  ಮಾಡಬೇಕಾದುದು ಒಂದೇ, ಸರಿಯಾದ   ಹೆಚ್ಚು ಆದಾಯ ಕೊಡಬಲ್ಲ  ಬೆಳೆಯ  ಆಯ್ಕೆ .. ತರಕಾರಿ ಬೆಳೆಯ ಅನುಕೂಲಗಳು: ಧೀರ್ಘಾವಧಿ ಬೆಳೆಗಳಿಗೆ ಹೆಚ್ಚು ಸಮಯ  ಕಾಯಬೇಕು. ಆದರೆ ತರಕಾರಿಗೆ ಹಾಗಿಲ್ಲ. ಬೇಗ ಇಳುವರಿ- ಬೇಗ ಆದಾಯ. ಬಹುತೇಕ ತರಕಾರಿ ಬೆಳೆಗಳು ನಾಟಿ…

Read more
ಚನ್ನರಾಯಪಟ್ನದ ಸೌತೆ ಕಾಯಿ

ಚನ್ನರಾಯಪಟ್ನದ ವಿಶಿಷ್ಟ ರುಚಿಕರ ಸೌತೇಕಾಯಿ.!!ಇದು ಇಲ್ಲಿಯ ವಿಶೇಷ.

  ಹಾಸನ ಜಿಲ್ಲೆ, ಚನ್ನರಾಯಪಟ್ಟಣ ಸುತ್ತಮುತ್ತ ನೂರಾರು ರೈತರು ಹಲವಾರು ವರ್ಷಗಳಿಂದ   ಬಿಳೀ ಬಣ್ಣದ ಸೌತೇ ಕಾಯಿ ಬೆಳೆಯುತ್ತಾರೆ. ಬಸ್ ಗಳಲ್ಲಿ ಪ್ರಯಾಣಿಸುವವರೆಲ್ಲಾ ಇದರ ಸವಿ ಕಂಡವರು. ರುಚಿಯಾದ  ಈ ಸೌತೇ ಕಾಯಿ ಹೇಗೆ ಎಲ್ಲಿ ಬೆಳೆಯಲ್ಪಡುತ್ತದೆ ಎಂಬ ಬಗ್ಗೆ ಇಲ್ಲಿದೆ  ಮಾಹಿತಿ.! ಈ ಸೌತೇಕಾಯಿ ಬೆಳೆಯುವವರು ಹಳ್ಳಿಯ ರೈತರು. ರೈತರ ಶ್ರಮಕ್ಕೆ ಬೆಲೆ ತಂದು ಕೊಡುವವರು ರಸ್ತೆ ಬದಿಯ ವ್ಯಾಪಾರಿಗಳು. ಈ ವ್ಯಾಪಾರಿಗಳಿಲ್ಲದಿದ್ದರೆ ರೈತರು ಶ್ರಮಕ್ಕೆ ಬೆಲೆ ಇಲ್ಲ. ನಾವೆಲ್ಲಾ ವ್ಯಾಪಾರಿಗಳನ್ನು ದೂರುತ್ತೇವೆ. ಅವರಿಲ್ಲದಿದ್ದರೆ ನಾವು…

Read more

ತರಕಾರಿ ಬೆಳೆಗಳಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಚಳಿಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆ.  ಈ ಸಮಯದಲ್ಲಿ ಇದರಲ್ಲಿ ಇಳುವರಿ ಜಾಸ್ತಿ. ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು.   ಇದರ  ನಿಯಂತ್ರಣ ಹೀಗೆ.. ಸಸ್ಯ ಹೇನು  ಅಥವಾ ಏಫಿಡ್ ( Aphids) ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ.  ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ.. ಸಸ್ಯ ಹೇನು ಎಂದರೇನು:  ಸಸ್ಯ ಹೇನುಗಳಲ್ಲಿ ಸುಮಾರು 250 ಬಗೆಯ ಪ್ರಭೇಧಗಳಿದ್ದು,…

Read more
ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more

ಗುಳ್ಳಕ್ಕೆ ಇದು ಬದಲಿ ತಳಿ.

ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ  ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ.  ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ. ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ. ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ….

Read more

ಬೇಗ ಬೆಳೆಯುವ, ನಾರು ಇಲ್ಲದ ಹರಿವೆಯ ತಳಿಗಳು.

ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.  ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ.           ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ. ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ  ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ. ವಾಣಿಜ್ಯ ತಳಿಗಳು: ದೇಶದ…

Read more
error: Content is protected !!