ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ.
ಇದು ಸಕಾಲ:
- ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ ಇಡುತ್ತದೆ.
- ಮೊಟ್ಟೆ ಮತ್ತೆ ಮರಿಯಾಗಿ ಆಗಸ್ಟ್ ಸಪ್ಟೆಂಬರ್ ಸುಮಾರಿಗೆ ಬೆಳೆಯುವ ಹುಳವಾಗುತ್ತದೆ.
- ಅಡಿಕೆ ಮರದ ಹೊಸ ಹೊಸ ಬೇರುಗಳು ಬೆಳೆಯುತ್ತಿರುವಾಗ ಅದು ಆ ಬೇರನ್ನು ತಿನ್ನಲು ಪ್ರಾರಂಭಿಸುತ್ತದೆ.
- ಈ ಸಮಯದಲ್ಲಿ ಅದರ ವಾಸ್ತವ್ಯ ನೆಲೆದ ಮೇಲ್ಭಾಗದಲ್ಲಿ ಇರುತ್ತದೆ.
- ಜಲಮಟ್ಟ ಕೆಳಗೆ ಹೋದಂತೆ ಅದು ಕೆಳಕ್ಕೆ ಹೋಗುತ್ತದೆ.
- ಆಗ ನಿಯಂತ್ರಣ ಕಷ್ಟ. ಈ ಸಮಯದಲ್ಲಿ ಜೈವಿಕವಾಗಿ ಇದನ್ನು ನಿಯಂತ್ರಿಸಲು ಸಾಧ್ಯವಿದೆ.
- ಬೇರು ಹುಳವನ್ನು ಜೈವಿಕ ವಿಧಾನದಲ್ಲಿ ನಿಯಂತ್ರಿಸಬಲ್ಲ ಒಂದೆರಡು ಜೀವಾಣುಗಳಿವೆ.
ಇಪಿಎನ್ ಎಂದರೆ ಏನು?
- ಜೀವಿಗಳನ್ನು ಜೀವಿಗಳ ಮೂಲಕವೇ ನಾಶಮಾಡಲು ಇರುವ ಒಂದು ವ್ಯವಸ್ಥೆಯಲ್ಲಿ ಎಂಟಮೋ ಪಥೋಜೆನಿಕ್ ನಮಟೋಡು (ಇಪಿಎನ್).
- ಇದು ಬೆಳೆಗಳ ಬೇರುಗಳಿಗೆ ತೊಂದರೆ ಮಾಡುವ ಹುಳಗಳನ್ನು ಬದನಿಕೆಯೋಪಾದಿಯಲ್ಲಿ ಸಾಯುವಂತೆ ಮಾಡುತ್ತದೆ.
- ಇದನ್ನು ಬಹಳ ಹಿಂದೆಯೇ ಗುರುತಿಸಲಾಗಿದ್ದು, ಈಗ ಇದರ ಉತ್ಪಾದನೆ ಮತ್ತು ಕೃಷಿಯಲ್ಲಿ ಬಳಕೆ ಹೆಚ್ಚಿದೆ.
- ಇದು ಯಾರಿಗೂ ಯಾವ ಹಾನಿಯೂ ಇಲ್ಲದಂತೆ ಕೀಟ ನಿಯಂತ್ರಣ ಮಾಡುವ ಜೈವಿಕ ವಿಧಾನ.
ಇಪಿಎನ್ ನಮಟೋಡು ಅಥವಾ ಜಂತು ಹುಳವನ್ನು, ಒಂದು ಜಾತಿಯ ಹುಳ( ಜೇನು ಗೂಡಿನಲ್ಲಿ ಹಾಳಾದ ಎರಿಗಳಲ್ಲಿ ಕಾಣುವ ಹುಳದ ತರಹದ್ದು)ದ ಹೊಟ್ಟೆಯೊಳಗೆ (thread worms) ಬೆಳೆಸಲಾಗುತ್ತದೆ. ಪ್ರಕೃತಿಯಲ್ಲಿ ಇದರಲ್ಲೇ ಅದು ಬೆಳೆಯುವುದು. ಆ ಹುಳದ ಹೊಟ್ಟೆಗೆ ಅದನ್ನು ಸೇರಿಸಿ ಅದು ಅಲ್ಲಿ ಸಂತಾನಾಭಿವೃದ್ದಿ ಹೊಂದಿ ಅಧಿಕ ಪ್ರಮಾಣದ ಜಂತು ಹುಳವನ್ನು ಬಿಡುಗಡೆ ಮಾಡುತ್ತದೆ. ಜಂತು ಹುಳುವಿನ ಹೊಟ್ಟೆಯೊಳಗೆ ಸಹಜೀವನ ನಡೆಸುವ ಒಂದು ಬ್ಯಾಕ್ಟೀರಿಯಾ ಇರುತ್ತದೆ. ಬ್ಯಾಕ್ಟೀರಿಯಾಕ್ಕೆ ಬದುಕಲು ಜಂತು ಹುಳ ಆಹಾರ ಕೊಟ್ಟು ನೆರವಾಗುತ್ತದೆ. ಧೀರ್ಘಾವಧಿಯ ತನಕ ಇದರ ಸಂತಾನಾಭಿವೃದ್ದಿ ನಡೆಯುತ್ತಿರುತ್ತದೆ.
- ಜಂತು ಹುಳಕ್ಕೆ ಬದುಕಲು ಬ್ಯಾಕ್ಟೀರಿಯಾ ಸಹಕರಿಸುತ್ತದೆ. ಇದು ಒಂದು ಸಹಜೀವನ.
- ಈ ರೀತಿ ಅಭಿವೃದ್ಧಿಪಡಿಸಿದ ಜಂತು ಹುಳುವನ್ನು ಕೆಲವು ಮಾಧ್ಯಮಗಳಲ್ಲಿ ಸಂಗ್ರಹಿಸಿ ಹೊಲದಲ್ಲಿ ಬೆಳೆಗಳಿಗೆ ತೊಂದರೆ ಮಾಡುವ ಹುಳುವಿನ ನಾಶಮಾಡಲು ಬಳಕೆ ಮಾಡಲಾಗುತ್ತದೆ.
- ನಮಟೋಡು ಬ್ಯಾಕ್ಟೀರಿಯಾವನ್ನು ಬದುಕಿಸುತ್ತಾ ಇರುತ್ತದೆ.
- ಅದಕ್ಕೆ ಬೇಕಾದ ಆಶ್ರಯ ಹುಳು ದೊರೆತಾಗ ಅದರ ಶರೀರಕ್ಕೆ ಸೇರಿ ಅದರೊಳಗೆ ಪರಾವಲಂಭಿಯಗಿ ಬದುಕಿ ಅದನ್ನು 24-48 ಗಂಟೆ ಒಳಗೆ ಸಾಯಿಸುತ್ತದೆ.
- ಎಂಟಮೋ ಪಥೋಜೆನಿಕ್ ಎಂದರೆ ಕೀಟವೊಂದು (ಎಂಟಮೋ) ಮತ್ತೊಂದು ಕೀಟದಲ್ಲಿ ಪರಾವಲಂಭಿಯಾಗಿ (ಪಥೋಜೆನಿಕ್) ಬದುಕಿ ಅದನ್ನೇ ನಾಶಮಾಡುವ ತಂತ್ರ.
ಯಾವ ಬೆಳೆಗಳಿಗೆ ಸೂಕ್ತ:
- ಅಡಿಕೆ, ಕಬ್ಬು ಮುಂತಾದ ಬೇರೆ ಬೇರೆ ಬೆಳೆಗಳ ಬೇರನ್ನು ಹಾನಿ ಮಾಡುವ ಬೇರು ಹುಳ, ಪತಂಗದ ಲಾರ್ವೆಗಳು, ಚಿಟ್ಟೆಗಳು, ಹಾರುವ ದುಂಬಿಗಳಿಗೆ, ಜಿಗಿ ಹುಳ( ಗ್ರಾಸ್ ಹೋಪರ್ಸ್)
- ಈ ನಮಟೋಡನ್ನು ಪ್ರಯೋಗಿಸಿದಾದ ಅದು ಮಣ್ಣಿನಲ್ಲಿದ್ದುಕೊಂಡು ಆ ಹುಳದ ಹೊಟ್ಟೆಯ ಒಳ ಸೇರಿ ಅದನ್ನು ಕೊಲ್ಲುತ್ತದೆ.
- ಪ್ರಪಂಚದಾದ್ಯಂತ ಇದನ್ನು ಕಾಣಬಹುದಾಗಿದೆ. ಇದರಿಂದ ಮಣ್ಣಿನ ಯಾವ ಇತರ ಜೀವಿಗಳಿಗೂ ಹಾನಿ ಇರುವುದಿಲ್ಲ.
ಬಳಕೆ ಹೇಗೆ?
- ಇದು ಬೇರು ಹುಳ ನಾಶಕ್ಕೆ ತಕ್ಷಣ ಪರಿಹಾರ ನೀಡುವ ಜೈವಿಕ ವಿಧಾನ.
- ಈ ನಮಟೋಡುಗಳನ್ನು ದ್ರವ ರೂಪದ ಮಾಧ್ಯಮದಲ್ಲಿ ಮತ್ತು ಹುಡಿ ( Talck) ಋಪದ ಮಾಧ್ಯಮದಲ್ಲಿ ತಯಾರಿಸಿ ಕೊಡುತ್ತಾರೆ.
- ದ್ರವ ರೂಪದ ಮಿಶ್ರಣವನ್ನು ಬೇವಿನ ಎಣ್ಣೆ ಅಥವಾ ಇಮಿಡಾ ಕ್ಲೋಫ್ರಿಡ್ ಜೊತೆಗೆ (ಬೇ. ಎಣ್ಣೆ 3-4 ಮಿಲಿ., ಇಮಿಡಾ ಕ್ಲೊಫ್ರಿಡ್ .5 ಮಿಲಿ) ಮಿಶ್ರಣ ಮಾಡಿ ನೆಲಕ್ಕೆ ಸಿಂಪಡಿಸಬೇಕು.
- ಹುಡಿ ರೂಪದ ಮಿಶ್ರಣವನ್ನು ಕಾಂಪೋಸ್ಟು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಹೊಲಕ್ಕೆ ಚೆಲ್ಲಬೇಕು.
ಇದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ತಂತ್ರಜ್ಞಾನವಾಗಿದೆ. ಇವರ ತಂತ್ರಜ್ಞಾನ ಪಡೆದ ಸಂಸ್ಥೆಗಳು ಇದನ್ನು ತಯಾರಿಸಿ ಒದಗಿಸುತ್ತವೆ. ವಿಟ್ಲದ CPCRI ಸಂಸ್ಥೆಯಲ್ಲೂ ಇದನ್ನು ತಯಾರಿಸಿ ಕೊಡುತ್ತಾರೆ.
end of the Article: ———————————————————————-
Root grub of areca# sugarcane root grub# araca pest management# biological control# Entamopathogenic namatode# EPN#
Sir epn sirsi hatra elli sigutte?
Sir EPN shimoga dalli yelli sigutte address kodi please..