ಅಡಿಕೆ ಮರದಲ್ಲಿ ಅಂಟು ಸ್ರವಿಸುವುದಕ್ಕೆ ಕಾರಣ ಮತ್ತು ಪರಿಹಾರ.
ಇತ್ತೀಚಿಗೆ ಮಲೆನಾಡು ಮತ್ತು ಬಯಲುಸೀಮೆಯ ಕೆಲವು ತೋಟಗಳಲ್ಲಿ ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡಿನಿಂದ ಅಂಟು (ಮೇಣದಂತಹ ಪದಾರ್ಥ) ಸೋರುತ್ತಿರುವುದು ಕಂಡುಬಂದಿದೆ.ಇದನ್ನು ಎಂದೂ ಕಂಡಿಲ್ಲದ ಬೆಳೆಗಾರರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಈ ವಿದ್ಯಮಾನದ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಈ ಲೇಖನದ ಮೂಲಕ ಬೆಳೆಗಾರ ಅನುಕೂಲಕ್ಕಾಗಿ ನೀಡಲಾಗಿದೆ. ಅಂಟು ಸೋರಲು ಕಾರಣವೇನು? ಕೇವಲ ಅರ್ಧ ಸೆಂಟಿಮೀಟರ್ ಉದ್ದವಿರುವ ಯೂಪ್ಲಾಟಿಪಸ್ ಪ್ಯಾರಲ್ಲೆಲಸ್ ಎಂಬ ಕೀಟ. ಇದು ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡನ್ನು ಕೊರೆದು ಒಳಗೆ ಪ್ರವೇಶಿಸಿಸುತ್ತದೆ. ಕೀಟವು ಪ್ರವೇಶಿಸಿದ…