ಬೆಳೆ ದಾಖಲೆ ಮಾಡಿಲ್ಲವೇ? ಮಾಡಿ. ಬಹಳ ಪ್ರಯೊಜನ ಇದೆ.
ರೈತರ ಹೊಲದಲ್ಲಿ ಯಾವ ಬೆಳೆ ಇದೆ, ಎಂಬುದನ್ನು ಅವರವರೇ ದಾಖಲೀಕರಣ ಮಾಡಿದರೆ ಅದೇ ಉತ್ತಮ. ಯಾಕೆಂದರೆ ಬೇರೆಯವರು ಮಾಡುವುದು ಎಷ್ಟಾದರೂ ಅಷ್ಟೇ. ಇದು ಇಂದು ಬೆಳೆ ದಾಖಲೀಕರಣ ಮಾಡಿದಾಗ ತಿಳಿದ ಸಂಗತಿ. ಸ್ವಲ್ಪ ತರಬೇತಿ ಅಥವಾ ಸ್ವಲ್ಪ ಮೊಬೈಲ್ ಫೋನ್ ಬಳಕೆ ಗೊತ್ತಿದ್ದವರ ಸಹಾಯ ತೆಗೆದುಕೊಂಡರೆ ಇದನ್ನು ಯಾರೂ ಬಳಸಬಹುದು. ಸರಕಾರ ಈ ಕೆಲಸವನ್ನು ರೈತರ ತಲೆಗೇ ಹಾಕಿರುವುದು ಮತ್ತೇನಕ್ಕೂ ಅಲ್ಲ. ಈ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. GPS ಸರಿಯಾಗಿ ಸಿಗಬೇಕು. ಕೆಲವೊಮ್ಮೆ ಬೇಗ ಆಗಬಹುದು….