ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.
ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…