ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.
ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…