ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.
ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ. ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ. ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…