
ಮೇವು ಸಮಸ್ಯೆಯೇ – ಅಜೋಲಾ ಬೆಳೆಸಿ -ಬಳಸಿ.
ಪಶುಪಾಲನೆ ಮಾಡುವವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ. ಅದರೊಂದಿಗೆ ಸ್ವಲ್ಪ ಅಜೋಲಾವನ್ನು ಮನೆಯ ಸಮೀಪ ಬೆಳೆಸಿದರೆ ಪೌಷ್ಟಿಕ ಮೇವು ಲಭ್ಯವಾಗುತ್ತದೆ. ಮೇವನ್ನು ಅದಕ್ಕಾಗಿಯೇ ಹೊಲ ಮೀಸಲಿಟ್ಟು ಬೆಳೆಸಿದಾಗ ಆ ಹೊಲದ ಉತ್ಪಾದಕತೆಯನ್ನುಲೆಕ್ಕಾಚಾರ ಹಾಕಿದರೆ ಅದು ನಷ್ಟ. ಇದರ ಬದಲಿಗೆ ಪೌಷ್ಟಿಕ ಮೇವನ್ನು ಕಡಿಮೆ ಸ್ಥಳದಲ್ಲಿ ಬೇರೆ ಕಡೆಯಲ್ಲಿ ಉತ್ಪಾದಿಸುವುದು ಲಾಭದಾಯಕ. ಪಶುಗಳಿಗೆ ಸತ್ವ ಇಲ್ಲದ 50 ಕಿಲೋ ಮೇವು ಕೊಡುವ ಬದಲಿಗೆ…