ತರಕಾರಿ ಬೆಳೆಗಳಲ್ಲಿ ಸಸ್ಯ ಹೇನು ನಿಯಂತ್ರಣ
ಅಲಸಂಡೆ ಚಳಿಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆ. ಈ ಸಮಯದಲ್ಲಿ ಇದರಲ್ಲಿ ಇಳುವರಿ ಜಾಸ್ತಿ. ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು. ಇದರ ನಿಯಂತ್ರಣ ಹೀಗೆ.. ಸಸ್ಯ ಹೇನು ಅಥವಾ ಏಫಿಡ್ ( Aphids) ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ. ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ.. ಸಸ್ಯ ಹೇನು ಎಂದರೇನು: ಸಸ್ಯ ಹೇನುಗಳಲ್ಲಿ ಸುಮಾರು 250 ಬಗೆಯ ಪ್ರಭೇಧಗಳಿದ್ದು,…