ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.
ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ. ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ. ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು. ಮಾವಿನ ಮಿಡಿ ಒಯ್ದು ಉಪ್ಪಿನ…