ಅಡಿಕೆಯೊಂದಿಗೆ ವೀಳ್ಯದೆಲೆ- ಲಾಭದ ಮಿಶ್ರ ಬೆಳೆ.
ವೀಳ್ಯದೆಲೆಯ ಬೆಲೆ ಗೊತ್ತೇ? 100 ಎಲೆಗೆ 100 ರೂ. ತನಕವೂ ಆಗುವುದುಂಟು. ಅಲ್ಲದೆ ಇದು ವಾರ ವಾರ ಆದಾಯ ಕೊಡುವ ಬೆಳೆ. ಅಡಿಕೆ ಮರಕ್ಕೆ ಇದನ್ನು ಹಬ್ಬಿಸಿದರೆ ಒಳ್ಳೆಯ ಲಾಭ. ಅಡಿಕೆ ಬೆಳೆಯುವ ಕೆಲವು ಭಾಗಗಳಲ್ಲಿ ಇದೇ ಅಡಿಕೆಯೊಂದಿಗೆ ಮಿಶ್ರ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳ ಸಾಲಿನಲ್ಲಿ ಕರಿಮೆಣಸು–ಕೊಕ್ಕೋ, ಬಾಳೆ ಮಾತ್ರವಲ್ಲ, ವೀಳ್ಯದೆಲೆ ಬೆಳೆಯೂ ಲಾಭದಾಯಕ . ದಿನಾ ಆದಾಯ ತಂದು ಕೊಡಬಲ್ಲ ಈ ಬೆಳೆಯನ್ನು ರಾಜ್ಯದ ಹೆಚ್ಚಿನ ಕಡೆ ಅಡಿಕೆ ಮರಗಳಿಗೆ ಹಬ್ಬಿಸಿಯೇ…