ಕೀಟನಾಶಕ ಇಲ್ಲದೆ ಅಡಿಕೆ ಉಳಿಸಬಹುದು.
ಕೀಟನಾಶಕ ಬಳಸದೆ ಅಡಿಕೆ ಉಳಿಸಿಕೊಂಡವರು ಇದ್ದಾರೆ. ಕೆಲವರು ಅಡಿಕೆ ಮಿಡಿ ಉಳಿಸಲು ಪ್ರತೀ ಹೂ ಗೊಂಚಲಿಗೂ ತಿಂಗಳು ತಿಂಗಳು ಕೀಟ ನಾಶಕ ಸಿಂಪಡಿಸುವವರೂ ಇದ್ದಾರೆ. ಸಿಂಪಡಿಸದವರಲ್ಲೂ ಫಸಲು ಇದೆ. ಸಿಂಪಡಿಸಿದಲ್ಲಿಯೂ ಫಸಲು ಇದೆ. ಹೀಗಿರುವಾಗ ಅಡಿಕೆ ಮರದ ಆರೋಗ್ಯ ಹೊಂದಿಕೊಂಡು ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಅಡಿಕೆ ಮರದ ಹೂ ಗೊಂಚಲಿಗೆ ಬರುವ ಕೀಟಗಳಲ್ಲಿ ಈ ತನಕ ಗುರುತಿಸಲಾದದ್ದು, ಸಿಂಗಾರ ತಿನ್ನುವ ಕಂಬಳಿ ಹುಳ. ಬಸವನ ಹುಳ ಪೆಂಟಟೋಮಿಡ್ ಬಗ್. ಇದಲ್ಲದೆ ಬೇರೆ…