ಕೊಳೆ ರೋಗ ಬಾರದಿರುವಂತೆ ಮುನ್ನೆಚ್ಚರಿಕೆ.
ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ ಪರಿಣಾಮ ಹೆಚ್ಚು. ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ. ನಾವು ಇನ್ನೂ ಅಡಿಕೆ ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು…