ಕೊಳೆ ರೋಗ ಓಡಿಸಿದ ಬಯೋ ಔಷಧಿಗಳ ಹಿಂದಿನ ರಹಸ್ಯ.
ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಿಯಂತ್ರಣ ಆದರೆ ದೊಡ್ದ ಪರೀಕ್ಷೆ ಪಾಸ್. ಇದನ್ನು ಪಾಸ್ ಮಾಡಿಸಿದ ಔಷಧಿಯೇ ಬಯೋ ಔಷಧಿಗಳು. ಏನು ಹೆಸರೋ, ಒಳಗೆ ಏನು ಇರುವುದೋ ಯಾರಿಗೂ ಗೊತ್ತಿಲ್ಲ. ಸಾವಯವ, ಜೈವಿಕ, ಹರ್ಬಲ್ ಎಂಬ ಹೆಸರಿನಲ್ಲಿ ರೈತರ ಉದ್ದಾರಕ್ಕೆ ಅದೆಷ್ಟೋ ಜನ ಬಂದರು, ಹೋದರು. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಬೆಳೆಗಾರರು ವ್ಯಯಿಸುವ ಮೊತ್ತ ಕೋಟ್ಯಾಂತರ ರೂಪಾಯಿಗಳು. ನಮ್ಮ ಅಡಿಕೆ ತೋಟಗಳಿಗೆ ಏನಿಲ್ಲವೆಂದರೂ 10,000 ಟನ್ ಗೂ ಹೆಚ್ಚು ಮೈಲುತುತ್ತೆ ಬೇಕಾಗುತ್ತದೆ. ಇದನ್ನು ಮನಗಂಡ ಕೆಲವರು…