ಅಡಿಕೆ ಸಸ್ಯಗಳು ಮುರುಟಿಕೊಳ್ಳುವುದೇಕೆ? ಪರಿಹಾರ ಏನು?
ಅಡಿಕೆ ಸಸ್ಯಗಳ ಸುಳಿ ಮುರುಟಿಕೊಳ್ಳುವಿಕೆ ಮತ್ತು ಶಿರಭಾಗ ಬಾಗಿ ತಿರುಗುವಿಕೆ, ಗರಗಸ ಗಂಟು ಇವೆಲ್ಲಾ ಒಂದು ಶಾರೀರಿಕ ಸಮಸ್ಯೆಗಳು.ಕೆಲವು ಪ್ರಾಥಮಿಕ ಹಂತದಲ್ಲಿರುವವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸ್ವಲ್ಪ ನಿಧಾನ ಪ್ರಕ್ರಿಯೆ. ಗೊಬ್ಬರ ನಿರ್ವಹಣೆ ಮತ್ತು ಅಗತ್ಯ ಬೇಸಾಯ ಕ್ರಮದಲ್ಲೇ ಇದನ್ನು ಸರಿಪಡಿಸಿಕೊಳ್ಳಲು ಸಾಧ್ಯ. ನೂರು ಅಡಿಕೆ ಮರಗಳಲ್ಲಿ ಕನಿಷ್ಟ 10 ಆದರೂ ಈ ತರಹ ಸುಳಿ ಮುರುಟುವುದು, ಗರಿ ಬಿಡಿಸಿಕೊಳ್ಳದೆ ಅಲ್ಲಿಗೆ ಗುಛ್ಛವಾಗುವುದು ಇರುತ್ತದೆ. ಇದಕ್ಕೆ ಪ್ರಾದೇಶಿಕ ಇತಿ ಮಿತಿ ಇಲ್ಲ. ಇದನ್ನು ಕೆಲವರು ಹಿಡಿ…