ಅಡಿಕೆ ಮರಗಳು ಹೀಗೆ ಯಾಕೆ ಆಗುತ್ತವೆ?
ಸಹಜ ಸ್ಥಿತಿಯಲ್ಲಿ ಅಡಿಕೆ ಮರದ ಗಂಟುಗಳು ಒಂದೇ ನೇರಕ್ಕೆ ಸುತ್ತು ಬಂದಿರಬೇಕು.ಆದರೆ ಕೆಲವು ತೊಟಗಳಲ್ಲಿ ಕೆಲವು ಮರಗಳಲ್ಲಿ ಅದರ ಗಂಟು ವಿಚಿತ್ರವಾಗಿ ಗರಗಸದ ತರಹ ಬೆಳೆಯುತ್ತವೆ. ಇದ್ದು ರೋಗವೋ ಎಂಬ ಸಂದೇಹ ರೈತರಲ್ಲಿದೆ. ಇದು ರೋಗವಲ್ಲ. ಪೊಷಕಾಂಶದ ಅಸಮತೋಲನ. ಗರಗಸ ಗಂಟು ಹೇಗೆ ಆಗುತ್ತದೆ? ಅದು 2005 ನೇ ಇಸವಿ. ಬಂಟ್ವಾಳ ತಾಲೂಕು, ಕಾಅವಳ ಮುಡೂರು ಗ್ರಾಮದ ಕೆದ್ದಳಿಕೆ ಗಣೇಶ್ ಭಟ್ ಇವರ ತೋಟಕ್ಕೆ ಹೋಗಿದ್ದೆ. ಆಗ ಅವರು ತಮ್ಮ ಅಡಿಕೆ ಮರಗಳಿಗೆ ಕೊಡುತ್ತಿದ್ದ ಗೊಬ್ಬರ ಹರಳಿನ ಹಿಂಡಿ. ಹನಿ…