ಅಡಿಕೆ -ಫಲ ಬರುವ ಸಮಯಕ್ಕೇ ತೋಟ ಫ್ರೀ –ಹೇಗೆ?
ಅಡಿಕೆ ತೋಟ ಎಂದರೆ ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ…