ಅಡಿಕೆ – ಸುಳಿ ಕೊಳೆಯುವುದಕ್ಕೆ ಕಾರಣ ಮತ್ತು ಪರಿಹಾರ.
ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಸಸಿ/ ಮರದ ಸುಳಿ ಕೊಳೆಯುವ/ ಬುಡ ಕೊಳೆಯುವ ತೊಂದರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಹವಾಮಾನ ವೆತ್ಯಾಸ ಮತ್ತು ಇನ್ನಿತರ ಕಾರಣಗಳಿಂದ ಇದು ಆಗುತ್ತದೆ. ಸಂಜೆ ಮಳೆ ಬರುತ್ತದೆ, ಹಗಲು ಭಾರೀ ಪ್ರಖರವಾದ ಬಿಸಿಲು. ಈ ಸನ್ನಿವೇಶದಲ್ಲಿ ಅಡಿಕೆ, ತೆಂಗು ಮುಂತಾದ ಸಸಿ/ ಮರದ ಎಳೆಯ ಸುಳಿ ಭಾಗದಲ್ಲಿ ಒಂದು ಶಿಲೀಂದ್ರ ಬೆಳೆದು ಅದು ಆ ಭಾಗವನ್ನು ಕೊಳೆಯುವಂತೆ ಮಾಡಿ ಮರದ ಮೊಳೆಕೆ ತನಕ ವ್ಯಾಪಿಸಿ ಗಿಡವನ್ನು ಸಾಯುವಂತೆ ಮಾಡುತ್ತದೆ. ಇದು ಈಗ ಎಲ್ಲಾ…