ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು.
ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು ಬಳಸಿಕೊಳ್ಳುತ್ತದೆ. ಧೀರ್ಘಾವಧಿ ಬೆಳೆಗಳು ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ. ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10 ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ ಮತ್ತು ಬಲಿಯುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ….