ಬಾಳೆ ಗೊನೆಗೆ ಕವರ್ ಹಾಕಿದರೆ ಹೆಚ್ಚು ಬೆಲೆ.
ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ ಕೊಳ್ಳುವ ಮನಸ್ಸಾಗಬೇಕು. ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ. ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ…